ಸಾರಾಂಶ
- ಜನಜಾತೀಯ ಗೌರವ ದಿನ, ಭಗವಾನ್ ಬಿರ್ಸಾಮುಂಡಾರವರ 150ನೇ ಜನ್ಮ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಭಗವಾನ್ ಬಿರ್ಸಾ ಮುಂಡಾ ಸಾಮಾನ್ಯರಾಗಿ ಹುಟ್ಟಿದ ಅಸಾಮಾನ್ಯ ಮಹಾ ಪುರುಷ. ಬಾಲ್ಯದಿಂದಲೇ ಸಮಾಜದ ಕಟ್ಟ ಕಡೆಯ ಶೋಷಿತ ವರ್ಗದವರ ಧ್ವನಿಯಾಗಿ ಕಾರ್ಯ ನಿರ್ವಹಿಸಿದವರು ಎಂದು ಶಾಸಕ ಎಚ್,ಡಿ. ತಮ್ಮಯ್ಯ ಹೇಳಿದರು. ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಶಿವಮೊಗ್ಗದ ಕೇಂದ್ರ ಸಂವಹನ ಇಲಾಖೆ, ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಜನಜಾತೀಯ ಗೌರವ ದಿನದ ಪ್ರಯುಕ್ತ ಭಗವಾನ್ ಬಿರ್ಸಾಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬಿರ್ಸಾ ಮುಂಡಾ ಸಾಮಾಜಿಕ ಹೋರಾಟಗಾರರು, ಚಿಂತಕರು ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು, ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಹಲವಾರು ಹೆಸರುಗಳಲ್ಲಿ ಬಿರ್ಸಾ ಮುಂಡಾರವರ ಹೆಸರು ಸೇರ್ಪಡೆಯಾಗಿದೆ ಎಂದ ಅವರು, ಕೇವಲ 25 ವರ್ಷ ಬದುಕಿ ಬುಡಕಟ್ಟು ಜನಾಂಗದವರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರು ಎಷ್ಟು ವರ್ಷ ಬದುಕಿದ್ದರು ಎನ್ನುವುದಕ್ಕಿಂತ ಬದುಕಿದಷ್ಟು ದಿನವೂ ಸಮಾಜದ ಶೋಷಿತ ವರ್ಗದವರ ಪರ ಗಟ್ಟಿ ಧ್ವನಿಯಾಗಿ ಮಾಡಿದ್ದ ಸಾಧನೆ ಮುಖ್ಯವಾಗುತ್ತದೆ ಎಂದರು.
1875 ರಲ್ಲಿ ಜಾರ್ಖಂಡ್ ರಾಜ್ಯದ ಕುಗ್ರಾಮದಲ್ಲಿ ಬುಡಕಟ್ಟು ಜನಾಂಗದಲ್ಲಿ ಜನಿಸಿ ಆ ಜನಾಂಗದ ಸಂಸ್ಕೃತಿ ಉಳಿಸುವ ಸಲುವಾಗಿ ಹೋರಾಡಿದ್ದರು. ಅಂದಿನ ಬ್ರಿಟಿಷರ ಆಳ್ವಿಕೆಯಲ್ಲಿ ಜೈಲುವಾಸಕ್ಕೆ ಒಳಗಾದ ಅವರು 1900 ರಲ್ಲಿ ಜೈಲಿನಲ್ಲೇ ಸಾವಿಗೀಡಾದರು ಎಂದು ಹೇಳಿದರು.ಬಿರ್ಸಾಮುಂಡಾ ಮದ್ಯಪಾನ, ಮೂಢನಂಬಿಕೆಯ ವಿರುದ್ಧ ಹೋರಾಡಿದ್ದರು. ಭೂಮಿಯನ್ನೇ ತಾಯಿ, ತಂದೆ ಎಂದು ಪೂಜಿಸುತ್ತಿದ್ದರು. ಅವರ ಹೋರಾಟದ ಫಲವಾಗಿ ಅನೇಕ ಬುಡಕಟ್ಟು ಸಮುದಾಯದವರು ಜಮೀನ್ದಾರರಿಂದ ಮರಳಿ ತಮ್ಮ ಜಮೀನನ್ನು ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮಾತನಾಡಿ, ಯುವ ವಯಸ್ಸಿನಲ್ಲೇ ಆದಿವಾಸಿ ಸಮುದಾಯವನ್ನು ಪ್ರತಿನಿಧಿಸಿದವರು ಬಿರ್ಸಾಮುಂಡಾ ಭಾರತೀಯರ ಅಪ್ರತಿಮ ಆದಿವಾಸಿ ನಾಯಕ. ಸ್ವಾತಂತ್ರ್ಯ ಹೋರಾಟಗಾರ ರಾಗಿದ್ದಂತೆ ಸಾಮಾಜಜಿಕ ಸಾಧಕರೂ ಆಗಿದ್ದವರು. ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿ ಅವರ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳುತ್ತಿದ್ದೇವೆ ಇವರ ಛಲ, ಸಾಧನೆ, ಧೈರ್ಯವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇವರು ತಮಗೆದುರಾದ ಹಲವಾರು ಸಮಸ್ಯೆಗಳ ನಡುವೆ ಅವರು ನೀಡಿರುವ ಕೊಡುಗೆ ಶಾಶ್ವತ. ಅದಕ್ಕಾಗಿ ಅವರ ನಾಯಕತ್ವವನ್ನು ನಾವು ಸ್ಮರಿಸಿ ಅವರು ಮಾಡಿರುವ ದೈರ್ಯ, ಸಾಹಸಗಳು ಅವರ ಜಾತಿಯನ್ನು ಮುನ್ನೆಲೆಗೆ ತಂದಿರುವುದೇ ಅವರ ಹೋರಾಟದಲ್ಲಿ ಎಂದು ಹೇಳಿದರು.ಐ,ಡಿ.ಎಸ್.ಜಿ ಸರ್ಕಾರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಕೆ.ಜೆ.ವಸಂತ್ ಕುಮಾರ್ ಉಪನ್ಯಾಸ ನೀಡಿ, ಬುಡಕಟ್ಟು ಸಮುದಾಯಗಳಿಂದ ಭಗವಾನ್ ಎಂದು ಪೂಜಿಸಲ್ಪಡುವ ಬಿರ್ಸಾ ಮುಂಡಾ, ಶೋಷಣೆ, ವಸಾಹತುಶಾಹಿ ವ್ಯವಸ್ಥೆ ವಿರುದ್ಧ ತೀವ್ರ ಪ್ರತಿರೋಧ ಒಡ್ಡಿದವರು. ಅವರ ಅನುಯಾಯಿಗಳಾದ ಆದಿವಾಸಿ ಜನಾಂಗದಿಂದಲೇ ಇಂದು ಅರಣ್ಯ ಉಳಿದಿದೆ. ಅವರಲ್ಲಿ ಮೂಡುವ ಕರಕುಶಲತೆ ಅತ್ಯದ್ಬುತವಾದದ್ದು, ಅವರ ನಡುವೆ ಲಿಂಗ ತಾರಮ್ಯವಿಲ್ಲ. ಸಮಾನ ಮನೋಭಾವದಿಂದ ಜೀವನ ಸಾಗಿಸುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಚ್,ಎಸ್.ಕೀರ್ತನಾ, ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಕೇಂದ್ರ ಸಂವಹನ ಇಲಾಖೆ ಶಿವಮೊಗ್ಗದ ಕ್ಷೇತ್ರ ಪ್ರಚಾರ ಅಧಿಕಾರಿ ಅಕ್ಷತಾ, ಜಂಟಿ ಕೃಷಿ ನಿರ್ದೇಶಕ ಎಂ.ತಿರುಮಲೇಶ್, ಬುಡಕಟ್ಟು ಸಮಾಜದ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು,ಕಾರ್ಯಕ್ರಮಕ್ಕೆ ಮುನ್ನ ತಾಲೂಕು ಕಚೇರಿಯಿಂದ ಕುವೆಂಪು ಕಲಾಮಂದಿರದವರೆಗೆ ಬಿರ್ಸಾಮುಂಡ ಅವರ ಭಾವಚಿತ್ರ ದೊಂದಿಗೆ ನಡೆದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಹುಲಿವೇಷ, ಚಿಟ್ಟಿಮೇಳ, ಚೋಮನ ಕುಣಿತ, ಬೊಂಬೆ ಕುಣಿತ ಗಮನ ಸೆಳೆದರೆ, ವಿದ್ಯಾರ್ಥಿಗಳು ವಾದ್ಯಗೋಷ್ಠಿಯ ಶಬ್ದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. 15 ಕೆಸಿಕೆಎಂ 1ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಭಗವಾನ್ ಬಿರ್ಸಾಮುಂಡಾರವರ 150ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬುಡಕಟ್ಟು ಸಮಾಜದ ಮುಖಂಡರು ಉದ್ಘಾಟಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))