ಸಾರಾಂಶ
ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆ । ಶ್ರೀರಾಮ ಮಂದಿರ, ಹಾರನಹಳ್ಳಿ ರಾಮಸ್ವಾಮಿ ಸಭಾಭವನದಲ್ಲಿ ವಿಶೇಷ ಅಲಂಕಾರ, ಪೂಜೆ ಕನ್ನಡಪ್ರಭ ವಾರ್ತೆ ಅರಸೀಕೆರೆ
ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಮೂರ್ತಿಯಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ತಾಲೂಕು ಬ್ರಾಹ್ಮಣ ಸಂಘವು ಶ್ರೀರಾಮ ಮಂದಿರ ಮತ್ತು ಹಾರನಹಳ್ಳಿ ರಾಮಸ್ವಾಮಿ ಸಭಾಭವನನ್ನುವಿಶೇಷ ರೀತಿಯಲ್ಲಿ ವಧುವಿನಂತೆ ಅಲಂಕರಿಸಿದ್ದರು, ಶ್ರೀ ಶೃಂಗೇರಿ ಮಠ ಮುದ್ರಾ ವೇ.ಬ್ರ. ಶ್ರೀ ರವಿ ಪುರಾಣಿಕ್ ಆಚಾರ್ಯತ್ವದಲ್ಲಿ ಶ್ರೀ ರಾಮ ತಾರಕ ಹೋಮ, ಶ್ರೀ ಸೀತಾ ರಾಮಾಂಜನೇಯರಿಗೆ ಅಭಿಷೇಕ ವಿಶೇಷ ಪೂಜಾದಿಗಳು ನೆರವೇರಿತು,ಕಳೆದ ಒಂದು ವಾರದಿಂದಲೇ ಪೂರ್ವಸಿದ್ಧತೆಯಲ್ಲಿ ತಾಲೂಕು ಬ್ರಾಹ್ಮಣ ಸಂಘ ಯುವಕ ಸಂಘ ಸೀತಾ ಮಹಿಳಾ ಸಂಘಶ್ರೀ ಚಂದ್ರಶೇಖರ ಭಾರತಿ ವಿದ್ಯಾಸಂಸ್ಥೆ, ಗಾಯಿತ್ರಿ ಪತ್ತಿನ ಸಹಕಾರ ಸಂಘ, ವಿಪ್ರ ನೌಕರರ ಸಂಘ ಯಾಜ್ಞವಲ್ಕ ಸಂಘ ಮತ್ತು ಪಾಕ ತಜ್ಞರ ಬಳಗ ಭಾಗವಹಿಸಿದವು.
ಬೆಳಗ್ಗೆ 7 30 ಕ್ಕೆ ಶ್ರೀರಾಮ ತಾರಕ ಹೋಮ, 10.30 ಕ್ಕೆ ಪೂರ್ಣಾಹುತಿ ನೆರವೇರಿತು. ನಂತರ ಸೀತಾ ಮಹಿಳಾ ಸಂಘ ಹಾಗೂ ಇತರರಿಂದ ಭಜನೆ, ದೇವರ ನಾಮಗಳ ಪಾರಾಯಣ, ಭಜನೆ ನಡೆಸಿದರು, ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಮಯದಲ್ಲಿಯೇ ಇಲ್ಲಿಯೂ ಧಾರ್ಮಿಕ ವಿಧಿ ವಿಧಾನಗಳು ಸಂಭ್ರಮದಿಂದ ಜರಗಿತು, ಅಯೋಧ್ಯೆಯಲ್ಲಿನ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ಎಲ್‌ಇಡಿ ಪರದೆಯ ಮೇಲೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು, ಕಾರ್ಯಕ್ರಮದಲ್ಲಿ ಶಾಸಕ ಕೆಎಂ ಶಿವಲಿಂಗೇಗೌಡ ನಗರಸಭೆ ಆಯುಕ್ತ ಕೃಷ್ಣಮೂರ್ತಿ ಡಿವೈಎಸ್ಪಿ ಲೋಕೇಶ್, ನಗರ ಠಾಣೆ ನಿರೀಕ್ಷಕ ಗಂಗಾಧರ್. ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್ ಸೇರಿ ಗಣ್ಯರು, ಸಾವಿರಾರು ಭಕ್ತಾದಿಗಳು ಶ್ರೀ ರಾಮನ ದರ್ಶನ ಪಡೆದರು,ಮಧ್ಯಾಹ್ನ 1 ಗಂಟೆಯಿಂದ ಪ್ರಸಾದ ಏರ್ಪಡಿಸಲಾಗಿತ್ತು. ಸಂಜೆ 6 ಗಂಟೆಗೆ ಶ್ರೀರಾಮ ಮಂದಿರದ ಆವರಣದಲ್ಲಿ ದೀಪಾರಾಧನೆ ಕಾರ್ಯಕ್ರಮದಲ್ಲಿ ನೂರಾರು, ಮಹಿಳೆಯರು ಐದು ದೀಪಗಳನ್ನು ತೆಗೆದುಕೊಂಡು ಬಂದು ಬೆಳಗಿದರು, ಇದೆಲ್ಲವೂ ಜಾತ್ಯತೀತ ಕಾರ್ಯಕ್ರಮವಾಗಿದ್ದು, ಎಲ್ಲಾ ಸಮುದಾಯದವರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರ ರವಿಕುಮಾರ್ ಮಾತನಾಡಿ, ನಮ್ಮ ಸಮಾಜದ ಅಂಗ ಸಂಸ್ಥೆಗಳು ಹೆಚ್ಚಿನ ಸಹಕಾರವನ್ನು ನೀಡಲಾಗಿ ಇಷ್ಟು ವೈಭವಯುತವಾಗಿ ಆಚರಿಸಲು ಕಾರಣವಾಯಿತು ಎಲ್ಲಕ್ಕಿಂತ ಮಿಗಿಲಾಗಿ ಸಾವಿರಾರು ಭಕ್ತರು ಬೆಳಗಿನಿಂದಲೇ ಶ್ರೀ ಅವರ ದರ್ಶನ ಪಡೆದು ಕೃತಾರ್ಥರಾದದ್ದು ನಮಗೆ ಅಪರಿಮಿತ ಆನಂದವನ್ನು ಉಂಟು ಮಾಡಿತು, ಭರತ ಖಂಡದಲ್ಲಿ ಚಿರಸ್ಮರಣೀಯವಾದ ಒಂದು ಸಾಧನೆ ಇದಾಗಿದೆ ಎಂದು ಹೇಳಿದರು.ತಾಲೂಕು ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಕಲ್ಯಾಡಿ ಹಿರಿಯಣ್ಣ, ನ್ಯಾಯವಾದಿ ಕೆ.ವಿ. ಹಿರಿಯಣ್ಣಯ್ಯ, ಕಾರ್ಯದರ್ಶಿ ಆಡಿಟರ್ ಸುಬ್ರಹ್ಮಣ್ಯ ಖಜಾಂಚಿ ಕರ್ನಾಟಕ ಬ್ಯಾಂಕ್ ಮೋಹನ್ ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹರೀಶ್. ಸೀತಾ ಮಹಿಳಾ ಸಂಘದ ಅಧ್ಯಕ್ಷೆ ಶಕುಂತಲಮ್ಮ ಆನಂದ್, ಯುವಕ ಸಂಘದ ಅಧ್ಯಕ್ಷ. ಅಧ್ಯಕ್ಷ ಚಂದ್ರ ಮೌಳಿ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅರಸೀಕೆರೆ ತಾಲೂಕು ಬ್ರಾಹ್ಮಣ ಸಂಘದಿಂದ ಶ್ರೀ ರಾಮ ತಾರಕ ಹೋಮ, ಶ್ರೀ ಸೀತಾ ರಾಮಾಂಜನೇಯರಿಗೆ ಅಭಿಷೇಕ ವಿಶೇಷ ಪೂಜಾದಿಗಳು ನೆರವೇರಿತು,