ಕಾಂಗ್ರೆಸ್ ಪಕ್ಷದ ಮುಖಂಡರು, ಗ್ರಾಮಸ್ಥರ ಸಹಯೋಗದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಬಣ್ಣಬಣ್ಣದ ರಂಗೋಲಿ ಬಿಡಿಸಲು ಗ್ರಾಮದ ಪ್ರತಿ ಮನೆಯ ಮುಂದೆ ಚಿಕ್ಕ ಮಕ್ಕಳು, ಮಹಿಳೆಯರು, ಪುರುಷರೆಂಬ ಭೇದ- ಭಾವವಿಲ್ಲದೆ ಪಾಲ್ಗೊಂಡು ದೇವಾಲಯ ಗೋಪುರ, ಶಿವ, ಗಣೇಶ, ಗ್ರಾಮದೇವತೆ ಮುದ್ದಮ್ಮ, ನವಿಲು, ಆನೆ, ನಂದಿ ಹೀಗೆ ನಾನಾ ಆಕೃತಿಗಳ ರಂಗೋಲಿಗಳನ್ನು ಬಿಡಿಸಿದ್ದರು.
ಕನ್ನಡಪ್ರಭ ವಾರ್ತೆ ಕನಕಪುರ
ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಕನಕೋತ್ಸವ ಸಂಭ್ರಮದ ಅಂಗವಾಗಿ ತಾಲೂಕಿನ ಉಯ್ಯಂಬಳ್ಳಿ, ಏಳಗಳ್ಳಿ ಗ್ರಾಮಗಳಲ್ಲಿ ಏರ್ಪಡಿಸಿದ್ದ ಸಡಗರದ ರಂಗೋಲಿ ಸ್ಪರ್ಧೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು.ಕಾಂಗ್ರೆಸ್ ಪಕ್ಷದ ಮುಖಂಡರು, ಗ್ರಾಮಸ್ಥರ ಸಹಯೋಗದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಬಣ್ಣಬಣ್ಣದ ರಂಗೋಲಿ ಬಿಡಿಸಲು ಗ್ರಾಮದ ಪ್ರತಿ ಮನೆಯ ಮುಂದೆ ಚಿಕ್ಕ ಮಕ್ಕಳು, ಮಹಿಳೆಯರು, ಪುರುಷರೆಂಬ ಭೇದ- ಭಾವವಿಲ್ಲದೆ ಪಾಲ್ಗೊಂಡು ದೇವಾಲಯ ಗೋಪುರ, ಶಿವ, ಗಣೇಶ, ಗ್ರಾಮದೇವತೆ ಮುದ್ದಮ್ಮ, ನವಿಲು, ಆನೆ, ನಂದಿ ಹೀಗೆ ನಾನಾ ಆಕೃತಿಗಳ ರಂಗೋಲಿಗಳನ್ನು ಬಿಡಿಸಿದ್ದರು.
ಶ್ರೀಕ್ಷೇತ್ರ ಮರಳೆಗವಿ ಮಠದ ಮುಮ್ಮಡಿ ಶ್ರೀ ಶಿವರುದ್ರ ಸ್ವಾಮೀಜಿ ರಂಗೋಲಿಗಳನ್ನು ವೀಕ್ಷಿಸಿ ಮಾತನಾಡಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಹೋದರ ಡಿ.ಕೆ.ಸುರೇಶ್ ಕನಕೋತ್ಸವ ಅಂಗವಾಗಿ ಕಲೆ, ಸಂಸ್ಕೃತಿ, ಕ್ರೀಡೆ ಉಳಿಸಿ ಬೆಳೆಸಲು ಉತ್ತೇಜನ ನೀಡುತ್ತಿದ್ದು, ಈ ಸ್ಪರ್ಧೆಗಳಲ್ಲಿ ಸಾವಿರಾರು ಮಂದಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ. ಬಿಡಿಸಿರುವ ಬಹುತೇಕ ರಂಗೋಲಿಗಳು ಕಣ್ಮನ ತಣಿಸುವಂತೆ ಕಂಡುಬಂದಿದ್ದು, ಇಂತಹ ಕಲೆಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಊರಗೌಡರಾದ ಬಸವರಾಜು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಮ ಶಿವಯ್ಯ, ಸ್ಥಳೀಯರಾಗಿ ಜಯದೇವ ಆಸ್ಪತ್ರೆಯ ಸೇವೆ ಸಲ್ಲಿಸುತ್ತಿರುವ ಮಂಜುಳ, ಕೆಂಪೇಗೌಡ ಆಸ್ಪತ್ರೆಯ ರವಿಕುಮಾರ್, ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುಮಾರ್ ರವರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ತಾಪಂ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಹಾಲಿ ಅಧ್ಯಕ್ಷ ನಾಗೇಂದ್ರ, ಮಾಜಿ ಅಧ್ಯಕ್ಷ ವಿ.ಡಿ.ಚಂದ್ರು, ಮುಖಂಡ ಏಳಗಳ್ಳಿ ರವಿ, ಕರಿಯಪ್ಪ, ನೇತ್ರಾವತಿ ಮಹೇಶ್, ಭಾಗ್ಯಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಜೀರ್, ಮಧು, ತಾಲೂಕು ನ್ಯಾಯಬೆಲೆ ಅಂಗಡಿಗಳ ಸಂಘದ ಅಧ್ಯಕ್ಷ ದೇವರಾಜು ಸೇರಿ ಪಕ್ಷದ ಅನೇಕ ಮುಖಂಡರು, ಮಹಿಳೆಯರು, ಗ್ರಾಮಸ್ಥರು ಈ ವೇಳೆ ಉಪಸ್ಥಿತರಿದ್ದರು.
------ಕೆಕೆಪಿ ಸುದ್ದಿ 01: ಕನಕಪುರ ತಾಲೂಕು ಏಳಗಳ್ಳಿ ಗ್ರಾಮದಲ್ಲಿ ಜರುಗಿದ ರಂಗೋಲಿ ಸ್ಪರ್ಧೆಯಲ್ಲಿ ಡಾ. ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಕೃಷ್ಣಪ್ಪ, ರವಿ, ಚಂದ್ರು, ನಾಗೇಂದ್ರ, ಕರಿಯಪ್ಪ ಉಪಸ್ಥಿತರಿದ್ದರು.