ಕಣ್ಣಿಗೆ ಲೆನ್ಸ್ ಹಾಕಲು 6ಸಾವಿರ ರುಪಾಯಿ ಲಂಚ ಪಡೆಯುವಾಗ ಜಿಲ್ಲಾಸ್ಪತ್ರೆ ನೇತ್ರ ಚಿಕಿತ್ಸಕಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ, ತುಮಕೂರುಕಣ್ಣಿಗೆ ಲೆನ್ಸ್ ಹಾಕಲು 6ಸಾವಿರ ರುಪಾಯಿ ಲಂಚ ಪಡೆಯುವಾಗ ಜಿಲ್ಲಾಸ್ಪತ್ರೆ ನೇತ್ರ ಚಿಕಿತ್ಸಕಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ತುಮಕೂರಿನ ಜಿಲ್ಲಾಸ್ಪತ್ರೆಯ ಡಾ. ಸವಿತಾ ಎಂಬುವರೇ ಲೋಕಾಯುಕ್ತ ಬಲೆಗೆ ಬಿದ್ದವರು. ತುಮಕೂರಿನ ಉಪ್ಪಾರಹಳ್ಳಿ ನಿವಾಸಿ ಅವಿನಾಶ್ ಎಂಬುವರ ತಾಯಿಯ ಕಣ್ಣಿಗೆ ಲೆನ್ಸ್ ಹಾಕಲು 6 ಸಾವಿರಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಈ ಸಂಬಂಧ ಅವಿನಾಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಸೋಮವಾರ ಮಧ್ಯಾಹ್ನ ಜಿಲ್ಲಾಸ್ಪತ್ರೆ ಸಿಬ್ಬಂದಿ ಮನೋಜ್ ಎಂಬಾತನ ಮೂಲಕ 6 ಸಾವಿರ ರು. ಹಣ ಪಡೆಯುವ ವೇಳೆ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.