ಸಾವನದುರ್ಗ ಬೆಟ್ಟದ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಿ

| Published : Feb 15 2024, 01:32 AM IST

ಸಾವನದುರ್ಗ ಬೆಟ್ಟದ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಇನ್ನು ಮುಂದೆ ಸಾವನದುರ್ಗ ಬೆಟ್ಟ ಹತ್ತಲು ಸ್ಥಳೀಯರು ಸೇರಿ ಪ್ರವಾಸಿಗರು ಆನ್ಲೈನ್ ಮೂಲಕ 303 ರುಪಾಯಿ ಟಿಕೆಟ್ ಪಡೆದರೆ ಮಾತ್ರ ಬೆಟ್ಟ ಹತ್ತಲು ಅವಕಾಶ ನೀಡಿರುವುದರಿಂದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ. ಇದರಿಂದ ಸ್ಥಳೀಯ ವ್ಯಾಪಾರಸ್ಥರು ಆತಂಕಕ್ಕಾಳಗಾಗಿದ್ದಾರೆ.

ಮಾಗಡಿ: ಇನ್ನು ಮುಂದೆ ಸಾವನದುರ್ಗ ಬೆಟ್ಟ ಹತ್ತಲು ಸ್ಥಳೀಯರು ಸೇರಿ ಪ್ರವಾಸಿಗರು ಆನ್ಲೈನ್ ಮೂಲಕ 303 ರುಪಾಯಿ ಟಿಕೆಟ್ ಪಡೆದರೆ ಮಾತ್ರ ಬೆಟ್ಟ ಹತ್ತಲು ಅವಕಾಶ ನೀಡಿರುವುದರಿಂದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ. ಇದರಿಂದ ಸ್ಥಳೀಯ ವ್ಯಾಪಾರಸ್ಥರು ಆತಂಕಕ್ಕಾಳಗಾಗಿದ್ದಾರೆ

ಗೈಡುಗಳ ನೇಮಕ: ಎಕೋ ಟೂರಿಸಂ ವತಿಯಿಂದ ಆನ್ಲೈನ್ ಮೂಲಕ ಪ್ರತಿ ದಿನ ನೂರು ಜನ ಪ್ರವಾಸಿಗರು ಸಾವದುರ್ಗ ಬೆಟ್ಟ ಹತ್ತಲು ಅವಕಾಶ ನೀಡಿದೆ. 250 ರು. ಆನ್ಲೈನ್ ಟಿಕೆಟ್‌, ಆನ್ಲೈನ್ ಸೌಲಭ್ಯ 7.25 ರು.. ಜಿಎಸ್ಟಿ 46.31ರು. ಸೇರಿ ಒಟ್ಟು 303.56 ರು. ಕಟ್ಟಿ ಬೆಟ್ಟ ಹತ್ತಬೇಕು. ಇಲ್ಲವಾದರೆ ಬೆಟ್ಟ ಹತ್ತಲು ಅವಕಾಶ ನೀಡುವುದಿಲ್ಲ. ಪ್ರತಿ 10 ಜನಕ್ಕೆ ಒಬ್ಬ ಗೈಡ್‌ನಂತೆ 100 ಜನಕ್ಕೆ 10 ಗೈಡ್ ಗಳನ್ನು ನೇಮಕ ಮಾಡಲಾಗಿದೆ. ಬೆಳಗ್ಗೆ 6 ಯಿಂದ ಬೆಟ್ಟಹತ್ತಲು ಅವಕಾಶ ಕಲ್ಪಿಸಲಾಗಿದೆ. ಬೆಟ್ಟ ಹತ್ತುವ ಪ್ರವಾಸಿಗರ ಸುರಕ್ಷತೆ ಹಿನ್ನೆಲೆಯಲ್ಲಿ ಹತ್ತು ಜನ ಪ್ರವಾಸಿಗರನ್ನು ಸುರಕ್ಷಿತವಾಗಿ ಬೆಟ್ಟ ಹತ್ತಿಸಿ ನಂತರ ಅವರನ್ನು ಕೆಳಗಿಳಿಸಬೇಕು. ಆಗ ಯಾವ ಪ್ರವಾಸಿಗರು ಬೆಟ್ಟದಲ್ಲಿ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಗೈಡ್‌ಗಳ ನೇಮಕ ಮಾಡಲಾಗಿದೆ.

ವ್ಯಾಪಾರಸ್ಥರಿಗೆ ತೊಂದರೆ:

ಏಷ್ಯಾದಲ್ಲಿ ಅತಿ ಎತ್ತರದ ಏಕಶಿಲಾ ಬೆಟ್ಟ ಎಂದು ಪ್ರಸಿದ್ಧಿ ಪಡೆದಿರುವ ಸಾವನದುರ್ಗ ಪ್ರವಾಸಿಗರ ಸ್ವರ್ಗವಾಗಿದ್ದು, ರಜೆ ದಿನಗಳಲ್ಲಿ ಸಾಕಷ್ಟು ಮಂದಿ ಬೆಟ್ಟ ಹತ್ತಲು ಬರುತ್ತಾರೆ. ಆದರೆ ಈಗ ಆನ್ಲೈನ್ ಟಿಕೆಟ್, ದಿನಕ್ಕೆ ನೂರೇ ಜನರಿಗೆ ಅವಕಾಶಗಳಿಂದ ವ್ಯಾಪಾರವನ್ನೇ ನಂಬಿಕೊಂಡಿದ್ದ ಕುಟುಂಬಗಳಿಗೆ ವ್ಯಾಪಾರವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ.

ಸೌಲಭ್ಯಗಳ ಕೊರತೆ:

ಎಕೋ ಟೂರಿಸಂ ಪ್ರವಾಸಿಗರಿಂದ ಬೆಟ್ಟ ಹತ್ತಲು ಆನ್ಲೈನ್ ಮೂಲಕ ಹಣ ಪಡೆಯುತ್ತಿದ್ದರೂ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಬೆಟ್ಟ ಹತ್ತುವ ಪ್ರವಾಸಿಗರಿಗೆ ಸುರಕ್ಷಿತ ಸಾಧನ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆಗಳನ್ನು ಮಾಡಿಲ್ಲ. ಹಣ ಪಡೆದ ಮೇಲೆ ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಪ್ರವಾಸಿಗರಿಂದ ದೂರುಗಳು ಕೇಳಿ ಬರುತ್ತಿದೆ.

ಸ್ಥಳೀಯರ ಆಕ್ರೋಶ:

ಸಾವನದುರ್ಗವನ್ನು ಅಭಿವೃದ್ಧಿ ಮಾಡದೇ ಪ್ರವಾಸಿಗರಿಂದ ಮನಸೋ ಇಚ್ಛೆ ಬೆಟ್ಟ ಹತ್ತಲು ಹಣ ಪಡೆಯುತ್ತಿರುವುದು ಎಷ್ಟರಮಟ್ಟಿಗೆ ಸರಿ, ಸ್ಥಳೀಯರಿಗೂ ಬೆಟ್ಟ ಹತ್ತಲು ಆನ್ಲೈನ್ ಮೂಲಕ ಟಿಕೆಟ್ ಪಡೆಯುವುದು ಸರಿಯಲ್ಲ. ಎಕೋ ಟೂರಿಸಂ ಪ್ರವಾಸಿಗರಿಗೆ ಸುರಕ್ಷಿತ ಕ್ರಮಗಳನ್ನು ಕೈಗೊಂಡು 250 ರು. ನಿಗದಿ ಮಾಡಿರುವ ಟಿಕೆಟ್‌ ದರವನ್ನು ಕಡಿಮೆ ಮಾಡಬೇಕು. ಸ್ಥಳೀಯರಿಗೆ ಉಚಿತವಾಗಿ ಬಿಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಫೋಟೋ 13ಮಾಗಡಿ4:

ಮಾಗಡಿ ತಾಲೂಕಿನ ಸಾವನದುರ್ಗ ಬೆಟ್ಟ.