ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜಿಗೆ ಸೌಲಭ್ಯ: ಶಾಸಕ ಕೆ.ಎಂ.ಉದಯ್

| Published : Feb 25 2025, 12:46 AM IST

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜಿಗೆ ಸೌಲಭ್ಯ: ಶಾಸಕ ಕೆ.ಎಂ.ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಕೋರಿಕೆ ಮೇರೆಗೆ ಮಣಿಗೆರೆ ಗೇಟ್ ಬಳಿ ಮಂಡ್ಯ ಜಿಲ್ಲಾ ವ್ಯಾಪ್ತಿಯ ಸರ್ಕಾರಿ ಬಸ್‌ಗಳಿಗೆ ಕೋರಿಕೆ ಬಸ್‌ಗಳ ನಿಲುಗಡೆಗೆ ಸಾರಿಗೆ ಸಚಿವರಿಗೆ ಹಾಗೂ ಸಾರಿಗೆ ಸಂಸ್ಥೆಗೆ ಪತ್ರ ಬರೆದು ಅವಕಾಶ ಕೊರಲಾಗಿತ್ತು. ಸಾರಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಕೋರಿಕೆ ನಿಲುಗಡೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜಿನಲ್ಲಿ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಸಮೀಪದ ಮಣಿಗೆರೆ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಸೇವೆ ಸುಧಾರಣೆಗಾಗಿ ಹೊಸ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕಾಲೇಜಿನ ಮೂಲ ಸೌಕರ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುವುದು. ಸರ್ಕಾರಿ ಕಾಲೇಜಿಗೆ ವಿವಿಧ ಕೋರ್ಸ್‌ಗಳನ್ನು ಆರಂಭಿಸಲು ಈಗಾಗಲೇ ಸರ್ಕಾದರದ ಜತೆಗೆ ಚರ್ಚಿಸಲಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಕೋರಿಕೆ ಮೇರೆಗೆ ಮಣಿಗೆರೆ ಗೇಟ್ ಬಳಿ ಮಂಡ್ಯ ಜಿಲ್ಲಾ ವ್ಯಾಪ್ತಿಯ ಸರ್ಕಾರಿ ಬಸ್‌ಗಳಿಗೆ ಕೋರಿಕೆ ಬಸ್‌ಗಳ ನಿಲುಗಡೆಗೆ ಸಾರಿಗೆ ಸಚಿವರಿಗೆ ಹಾಗೂ ಸಾರಿಗೆ ಸಂಸ್ಥೆಗೆ ಪತ್ರ ಬರೆದು ಅವಕಾಶ ಕೊರಲಾಗಿತ್ತು. ಸಾರಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಕೋರಿಕೆ ನಿಲುಗಡೆ ಮಾಡಿದ್ದಾರೆ ಎಂದರು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮದ್ದೂರು-ಭಾರತೀನಗರದಿಂದ ಮಣಿಗೆರೆ ಕಾಲೇಜಿಗೆ ಸಾರಿಗೆ ಬಸ್ ಸೌಲಭ್ಯ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗಿದೆ. ಕಾಲೇಜಿಗೆ ಹೆಚ್ಚು ಪ್ರವೇಶ ಪಡೆಯಲು ಅನುಕೂಲ ವಾತವಾರಣ ಕಲ್ಪಿಸಲಾಗಿದೆ ಎಂದರು.

ಶಾಸಕರು ನೂತನ ಬಸ್‌ಗೆ ಅಧಿಕೃತವಾಗಿ ಚಾಲನೆ ನೀಡಿ ಬಸ್‌ನಲ್ಲಿ ಭಾರತೀನಗರದ ತನಕ ಪ್ರಯಾಣಿಸಿ ಸೇವೆಯನ್ನು ಪರಿಶೀಲಿಸಿದರು. ಈ ಬಸ್ ಸೌಲಭ್ಯ ದಿನನಿತ್ಯ ಮದ್ದೂರು -ಭಾರತೀನಗರದಿಂದ ಮಣಿಗೆರೆ ಕಾಲೇಜಿನವರೆಗೆ ಹಾಗೂ ಕಾಲೇಜಿನಿಂದ ಮತ್ತೆ ಭಾರತೀನಗರದ ಮೂಲಕ ಮದ್ದೂರಿಗೆ ಕಾಲೇಜಿನ ಸಮಯಗಳಲ್ಲಿ ಚಲಿಸಲಿದೆ ಎಂದು ತಿಳಿಸಿದರು.

ಈ ವೇಳೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ್ ಮೂರ್ತಿ, ಸಾರಿಗೆ ನಿರೀಕ್ಷಕ ಚುಂಚಯ್ಯ, ಟಿ.ಸಿ.ಚಂದ್ರು, ಮುಖಂಡರಾದ ಅಭಿಷೇ, ಪ್ರಕಾಶ್, ಶ್ರೀನಿವಾಸ್, ಪೂಜಾರಿ ಮಹೇಶ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.