ಸಾರಾಂಶ
ಈ ಕಾಲೇಜಿಗೆ ಸವಲತ್ತುಗಳನ್ನು ಇನ್ನೊಂದು ವರ್ಷ ದೊಳಗೆ ಒದಗಿಸಲಾಗುವುದು. ತಮಗೆ ಸರ್ಕಾರಿ ಶಾಲೆಗಳೆಂದರೆ ವಿಶೇಷ ಪ್ರೀತಿ ಹಾಗೂ ಆಸಕ್ತಿ. ಏಕೆಂದರೆ ನನ್ನಂತಹ ಗ್ರಾಮೀಣ ಭಾಗದ ಹುಡುಗರು ಬೆಳೆಯುವುದಕ್ಕೆ ಸರ್ಕಾರಿ ಶಾಲೆಯ ಶಿಕ್ಷಣವೇ ಕಾರಣ
ಕನ್ನಡ ಪ್ರಭವಾರ್ತೆ,ಮಾಲೂರು
ಮುಂದಿನ ವರ್ಷದ ವಾರ್ಷಿಕೋತ್ಸವದಲ್ಲಿ ಇಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೧.೫ ಕೋಟಿ ರು.ಗಳ ವ್ಯಚ್ಚದಲ್ಲಿ ೪ ನೂತನ ಕೊಠಡಿ, ಲ್ಯಾಬ್ ಸೇರಿದಂತೆ ಅವಶ್ಯ ಇರುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಈ ಕಾಲೇಜಿನ ಸವಲತ್ತುಗಳನ್ನು ಇನ್ನೊಂದು ವರ್ಷ ದೊಳಗೆ ಒದಗಿಸಲಾಗುವುದು. ನನಗೆ ಸರ್ಕಾರಿ ಶಾಲೆಗಳೆಂದರೆ ವಿಶೇಷ ಪ್ರೀತಿ ಹಾಗೂ ಆಸಕ್ತಿ. ಏಕೆಂದರೆ ನನ್ನಂತಹ ಗ್ರಾಮೀಣ ಭಾಗದ ಹುಡುಗನ್ನು ಈ ಮಟ್ಟಕ್ಕೆ ಬೆಳೆಯುವುದಕ್ಕೆ ಸರ್ಕಾರಿ ಶಾಲೆಯ ಶಿಕ್ಷಣವೇ ಕಾರಣ ಎಂದರು.
ಹೆಚ್ಚು ವಿದ್ಯಾರ್ಥಿನಿಯರಿರುವ ಶಾಲೆಉಪ ಪ್ರಾಂಶುಪಾಲ ವಿಜಯಕುಮಾರ್ ಮಾತನಾಡಿ ೧೯೮೩ರಲ್ಲಿ ೪೨ ಹೆಣ್ಣು ಮಕ್ಕಳಿಂದ ಪ್ರಾರಂಭವಾದ ಇಲ್ಲಿನ ಬಾಲಕಿಯರ ಪದವಿ ಪೂರ್ವ ಕಾಲೇಜು ಈಗ ೧೩೦೦ ವಿದ್ಯಾರ್ಥಿನಿಗಳು ವ್ಯಾಸಂಗ ಮಾಡುವ ರೀತಿಯಲ್ಲಿ ಬೆಳದಿದೆ. ಪ್ರೌಡಶಾಲೆ ವಿಭಾಗದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿನಿಯರು(೬೦೦) ವ್ಯಾಸಂಗ ಮಾಡುತ್ತಿದ್ದು,ಕಳೆದ ವರ್ಷ ಶೇ.೯೨ ಫಲಿತಾಂಶ ಪಡೆಯಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸಲಾಯಿತು.ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕರ‍್ಯಕ್ರನ ನಡೆಯಿತು.ಡಿಡಿಪಿಐ ರಾಮಚಂದ್ರ, ಕಾಲೇಜು ಪ್ರಾಂಶುಪಾಲೆ ಮಂಜುಳಾ, ಡಾ.ಕಿರಣ್ ಸೋಮಣ್ಣ, ಮುಖ್ಯಾಧಿಕಾರಿ ಪ್ರದೀಪ್ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶೈಲಜಾ ಕೃಷ್ಣ , ಆಂಜನೇಯ ರೆಡ್ಡಿ, ಅಶ್ವಥ ರೆಡ್ಡಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯನಾರಸಿಂಹ, ಚಂದ್ರಶೇಖರ್, ಸತೀಶ್, ನವೀನ್ ಇನ್ನಿತರರು ಇದ್ದರು.