ಚಿಕ್ಕಮಗಳೂರು ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಎಡವಿ ಬಿದ್ದಲ್ಲಿ ಭವಿಷ್ಯದ ಸುಂದರ ಬದುಕು ದುಸ್ಥಿತಿಗೆ ತಲುಪುತ್ತದೆ. ಕಲಿಕೆ ವಯಸ್ಸಿನಲ್ಲಿ ಚಂಚಲತೆಗೆ ಅವಕಾಶ ಕೊಡದೇ ಸಂಪೂರ್ಣ ಚಿತ್ತವನ್ನು ವಿದ್ಯಾಭ್ಯಾಸದ ಕಡೆ ವ್ಯಯಿಸಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

- ಸರ್ಕಾರಿ ಕಾಲೇಜಿನಲ್ಲಿ ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ । ಸ್ಮಾ ರ್ಟ್ , ಕಂಪ್ಯೂಟರ್ ಕೊಠಡಿಗಳ ಉದ್ಘಾಟನೆಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಎಡವಿ ಬಿದ್ದಲ್ಲಿ ಭವಿಷ್ಯದ ಸುಂದರ ಬದುಕು ದುಸ್ಥಿತಿಗೆ ತಲುಪುತ್ತದೆ. ಕಲಿಕೆ ವಯಸ್ಸಿನಲ್ಲಿ ಚಂಚಲತೆಗೆ ಅವಕಾಶ ಕೊಡದೇ ಸಂಪೂರ್ಣ ಚಿತ್ತವನ್ನು ವಿದ್ಯಾಭ್ಯಾಸದ ಕಡೆ ವ್ಯಯಿಸಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಬೇಲೂರು ರಸ್ತೆ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಸಿಎಸ್‌ಆರ್ ನಿಧಿಯಿಂದ ನಿರ್ಮಿಸಿದ ಸ್ಮಾ ರ್ಟ್ ತರಗತಿ ಮತ್ತು ಕಂಪ್ಯೂಟರ್ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಶಿಕ್ಷಣ ಎಂಬುದು ಹುಲಿ ಹಾಲಿನಂತೆ. ಆ ಹಾಲನ್ನು ಕುಡಿಯುವ ಮಕ್ಕಳು ಹುಲಿ ಮರಿಗಳಂತೆ ಘರ್ಜಿಸುವ ಗುಣಗಳನ್ನು ಬೆಳೆಸಿ ಕೊಳ್ಳಬೇಕು. ಈಗಾಗಲೇ ಕಾಲೇಜಿಗೆ ಸಕಲ ಸವಲತ್ತು ಒದಗಿಸಿದೆ. ಕೇ ವಲ ಫಲಿತಾಂಶ ವಿಚಾರದಲ್ಲಿ ಕೊರತೆಯಿದೆ. ಈ ಭಾರಿ ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಿ ಉತ್ತಮ ಫಲಿತಾಂಶ ನೀಡಿ ಕಾಲೇಜಿನ ಹೆಸರನ್ನು ಉಳಿಸಬೇಕು ಎಂದರು.ಕಾಲೇಜು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿ.ಎಸ್.ಆರ್. ನಿಧಿ ಯಿಂದ ₹50 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್, ಸ್ಮಾರ್ಟ್ ತರಗತಿಗಳ ಕೊಠಡಿ ನಿರ್ಮಿಸಿರುವುದು ಶ್ಲಾಘನೀಯ. ಇದನ್ನು ವಿದ್ಯಾರ್ಥಿಗಳು ಸೂಕ್ತ ರೀತಿ ಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಸದ್ಯದಲ್ಲೇ ಪರೀಕ್ಷೆಗಳು ಆರಂಭಗೊಳ್ಳುವ ಹಿನ್ನೆಲೆ ಕಠಿಣ ಪರಿಶ್ರಮ ವಹಿಸಬೇಕು ಎಂದು ಹೇಳಿದರು.ಕಾಲೇಜಿಗೆ ಉತ್ತಮ ಪ್ರಾಂಶುಪಾಲರು, ಪರಿಣಿತ ಉಪನ್ಯಾಸಕರ ದೊಡ್ಡ ತಂಡವಿದೆ. ಹೀಗಾಗಿಯೇ ನಗರದ ಬೇಲೂರು ರಸ್ತೆ ಹಾಗೂ ಬಸವನಹಳ್ಳಿ ಪಿಯು ಕಾಲೇಜಿಗೆ ಹೆಚ್ಚು ವಿದ್ಯಾರ್ಥೀಗಳು ದಾಖಲಾಗುತ್ತಿದ್ದಾರೆ. ಈ ಸರ್ಕಾರಿ ಕಾಲೇಜುಗಳಲ್ಲಿ ಕಲಿಕೆ ಪೂರ್ಣಗೊಳಿಸಿದ ಅನೇಕರು ಸಮಾಜದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಮುಂಚೂಣಿ ಸಾಧಿಸಿದ್ದಾರೆ. ಈ ವರ್ಷ ವಿದ್ಯಾರ್ಥಿ ಗಳು ಉತ್ತಮ ಫಲಿತಾಂಶಕ್ಕಾಗಿ ಸಾಂಸ್ಕೃತಿಕ ಕಾರ್ಯಕ್ರಮ ಕಡಿಮೆಗೊಳಿಸಿ ಮುಂದಿನ ಪರೀಕ್ಷಾ ಸಿದ್ದತೆಗಳಿಗೆ ಪ್ರಾಂಶು ಪಾಲರು ಕಾಳಜಿ ವಹಿಸಿದ್ದಾರೆ. ಖಾಸಗೀ ಶಾಲೆಗಳಲ್ಲಿ ಲಭ್ಯವಾಗುವ ಎಲ್ಲಾ ಸೌಲಭ್ಯ ಇಲ್ಲಿ ಕಲ್ಪಿಸಿದ್ದು ಉತ್ತಮ ಫಲಿತಾಂಶ ಕ್ಕಾಗಿ ಕಾತುರರಾಗಿದ್ದೇವೆ ಎಂದರು.ಪರೀಕ್ಷೆಗಳ ನಂತರ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಂಡರೆ ವ್ಯಕ್ತಿತ್ವ ವಿಕಸನವಾಗಲಿದೆ. ಜೊತೆಗೆ ಸಂಸ್ಕಾರ, ಸಂಸ್ಕೃತಿ, ಗುರು-ಹಿರಿಯರು, ಪಾಲಕರಿಗೆ ಗೌರವಿಸುವ ಸದ್ಗುಣ ಮೈಗೂಡಿಸಿ ಕೊಳ್ಳಬೇಕು. ಇಂದಿನ ಈ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ಷೀಣಿಸಿದ್ದರೂ ನಾಯಕತ್ವ ಗುಣಬೆಳೆಸುವ ವೇದಿಕೆಯಾಗಿ ಉಪಯೋಗವಾಗಲಿದೆ ಎಂದು ತಿಳಿಸಿದರು.ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಫೀಖ್ ಅಹಮದ್ ಅಧ್ಯಕ್ಷತೆವಹಿಸಿ ಮಾತನಾಡಿ ಭವ್ಯ ಭಾರತದ ಪ್ರಜೆಗಳು ಇಂದಿನ ಯುವಜನತೆ. ಪಿಯುಸಿ ಘಟ್ಟ ವಿದ್ಯಾರ್ಥಿ ಬದುಕನ್ನು ಬದಲಿಸುವ ಘಟ್ಟ. ಇದು ಹಲವಾರು ಆಕರ್ಷಣೆಗಳಿಗೆ ಒಳಗಾ ಗುವ ವಯಸ್ಸು. ನಿಯಂತ್ರಿಸುವ ಶಕ್ತಿ ಯುವ ಸಮೂಹದಲ್ಲಿ ಇರಬೇಕು. ಕಲಿಕೆಗೆ ಮಹತ್ವ ಕೊಟ್ಟು ಯಶಸ್ವಿ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದರು.ಬೇಲೂರು ರಸ್ತೆ ಕಾಲೇಜಿಗೆ ಸಾಕಷ್ಟು ಇತಿಹಾಸವಿದೆ. ಇಲ್ಲಿ ವ್ಯಾಸಂಗ ಪೂರೈಸಿದ ಹಲವಾರು ಮಂದಿ ಸರ್ಕಾರಿ ಉದ್ಯೋಗ, ಖಾಸಗೀ ಉದ್ಯಮ ಸೇರಿದಂತೆ ಸಮಾಜದ ವಿವಿಧ ಸ್ಥರಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದಾರೆ. ಈ ರೀತಿಯ ಬದುಕು ಬಯಸುವ ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಿದರೆ ಕನಸು ನನಸಾಗಲಿದೆ ಎಂದು ತಿಳಿಸಿದರು.ಕಾಲೇಜು ಪ್ರಾಂಶುಪಾಲ ವಿರೂಪಾಕ್ಷ ಮಾತನಾಡಿ ಪ್ರಸ್ತುತ ಶಾಲೆಯಲ್ಲಿ ಸುಮಾರು ೧೨೦೦ ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದು ಮಕ್ಕಳ ಶೈಕ್ಷಣಿಕ ಬೆಳವಣಿಗೆ ದೃಷ್ಟಿಯಿಂದ ಕಾಲೇಜಿನ ಹಳೇ ವಿದ್ಯಾರ್ಥಿ ಐಎ ಎಸ್ ಅಧಿಕಾರಿ ಪ್ರಸನ್ನ ಎಂಬು ವವರ ಸಹಕಾರದಿಂದ ಇಂದು ಎಚ್‌ಡಿಎಫ್‌ಸಿ ಕಡೆಯಿಂದ ₹೫೦ ಲಕ್ಷ ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣಗೊಂಡಿರುವುದು ಖುಷಿ ತಂದಿದೆ ಎಂದರು.ಕರ್ನಾಟಕ-ಕೇರಳ ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಅನಿಲ್‌ಕುಮಾರ್ ಮಾತನಾಡಿ ಪ್ರಸ್ತುತ ಜ್ಯೂನಿಯರ್ ಕಾಲೇಜಿಗೆ ೧೫ ಕಂಪ್ಯೂಟರ್‌ಗಳು, ಆರು ಡಿಜಿಟಲ್ ಸ್ಮಾರ್ಟ್ ಬೋರ್ಡ್ ಹಾಗೂ ಪೀ ಠೋಪಕರಣಗಳ ವ್ಯವಸ್ಥೆ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಬ್ಯಾಂಕ್ ಅನುವು ಮಾಡಿಕೊಟ್ಟಿದೆ ಎಂದು ತಿಳಿಸಿದರು.ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿರಿಯಶ್ರೇಣಿ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಸಮಾರೋಪ ನುಡಿದರು. ಕಾರ್ಯ ಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸೀತರಾಮ್‌ ಬಸವನಹಳ್ಳಿ, ರೇಣುಕಾ ವರುಣ, ಇಂದ್ರೇಶ್, ಮಂಜು ನಾಥ್, ಕುವೆಂಪು ಯುನಿವರ್ಸಿಟಿ ಸದಸ್ಯ ರಕ್ಷಿತ್, ಉಪನ್ಯಾಸಕ ಶಿವಕುಮಾರ್, ಟಿ.ತ್ಯಾಗರಾಜ್ , ಲಕ್ಷ್ಮೀ, ವಿದ್ಯಾ ರ್ಥಿಗಳು ಉಪಸ್ಥಿತರಿದ್ದರು.