ಜಾತ್ರಾ ಮಹೋತ್ಸವಗಳು ಸಾಮರಸ್ಯದ ಸಂಕೇತ

| Published : Nov 17 2025, 12:15 AM IST

ಸಾರಾಂಶ

ದಾಬಸ್‍ಪೇಟೆ: ಜಾತ್ರಾ ಮಹೋತ್ಸವಗಳು ಹಾಗೂ ಧಾರ್ಮಿಕ ಆಚರಣೆಗಳು ಎಲ್ಲ ಸಮುದಾಯದವರನ್ನು ಒಗ್ಗಟ್ಟಿಸುವ ಸಾಮರಸ್ಯದ ಸಂಕೇತವಾಗಿರುವುದರ ಜೊತೆಗೆ ಮನುಷ್ಯನ ಅವಿಭಾಜ್ಯ ಅಂಗಗಳಾಗಿವೆ. ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದಾರ ಮಾತ್ರ ನಮ್ಮ ಬದುಕಿಗೆ ನಿಜ ಅರ್ಥ ಬರುತ್ತದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ದಾಬಸ್‍ಪೇಟೆ: ಜಾತ್ರಾ ಮಹೋತ್ಸವಗಳು ಹಾಗೂ ಧಾರ್ಮಿಕ ಆಚರಣೆಗಳು ಎಲ್ಲ ಸಮುದಾಯದವರನ್ನು ಒಗ್ಗಟ್ಟಿಸುವ ಸಾಮರಸ್ಯದ ಸಂಕೇತವಾಗಿರುವುದರ ಜೊತೆಗೆ ಮನುಷ್ಯನ ಅವಿಭಾಜ್ಯ ಅಂಗಗಳಾಗಿವೆ. ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದಾರ ಮಾತ್ರ ನಮ್ಮ ಬದುಕಿಗೆ ನಿಜ ಅರ್ಥ ಬರುತ್ತದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ನೆಲಮಂಗಲ ವಿಧಾನಸಭಾ ವ್ಯಾಪ್ತಿಯ ಕಂಚುಗಲ್ ಬಂಡೆಮಠದಲ್ಲಿ ಶ್ರೀ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಕಾರ್ತಿಕ ಲಕ್ಷ ದೀಪೋತ್ಸವದ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯವರ ಆಶೀರ್ವಾದ ಪಡೆದು ಮಾತನಾಡಿದರು.

ಪ್ರತಿಯೊಬ್ಬರು ಸಮಾಜದಲ್ಲಿ ಧಾರ್ಮಿಕತೆಗೆ ಒತ್ತು ನೀಡಿ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇಂದಿನ ಯುವಜನತೆ ದುಶ್ಚಟಗಳಿಗೆ ದಾಸರಾಗುತ್ತಿರುವುದರಿಂದ ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದರಿಂದ ಹೊರಬೇಕಾದರೆ ಅಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಬದುಕು ಸಾಗಿಸುವುದು ಜರೂರಿಯಾಗಿದೆ ಎಂದು ಹೇಳಿದರು.

ಕಾತೀಕ ದೀಪೋತ್ಸವ ಎಂಬುದು ಮನುಷ್ಯ ತನ್ನ ಬದುಕಿನಲ್ಲಿ ಬರುವ ಅಹಂಕಾರವನ್ನು ತೊರೆದು ಹಾಕಿ ಅಜ್ಞಾನವೆಂಬ ದುಃಖವನ್ನು ಜ್ಞಾನವೆಂಬ ಹಣತೆಯ ಮೂಲಕ ಹೊಡೆದೊಡಿಸುವ ಸಂಕೇತವಾಗಿದ್ದು, ಕಾತೀಕ ಮಾಸದಲ್ಲಿ ದೀಪವನ್ನು ಹಚ್ಚುವುದರಿಂದ ಮನೆ ಮತ್ತು ಮನ ಸಂತೋಷವಾಗುತ್ತದೆ. ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುತ್ತದೆ ಎಂದರು.

ಬಂಡೆಮಠದ ಶ್ರೀ ಮಹಾಲಿಂಗಸ್ವಾಮೀಜಿ ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ಅಧಿಕ ಹಣ ಸಂಪತ್ತು ಗಳಿಸಬೇಕೆಂಬ ಹಂಬಲದಿಂದ ಒತ್ತಡದ ಜೀವನದಲ್ಲಿ ಬದುಕುತ್ತಿದ್ದಾರೆ. ಹೀಗಾಗಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುತ್ತಿರುವುದು ಕಾಣಬಹುದು. ನಮ್ಮ ಹಿರಿಯ ಗುರುಗಳು ಹಿಂದಿನಿಂದ ಶ್ರೀಮಠದಲ್ಲಿ ಜಾತ್ರಾ ಮಹೋತ್ಸವ ಹಾಗೂ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದು, ಅದನ್ನು ಭಕ್ತರ ಜೊತೆಗೂಡಿ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಚಿಕ್ಕಮಸ್ಕಲ್ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ನಾಗರಾಜು, ಸೋಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರುದ್ರ ಶರ್ಮಾ, ಬಿಟ್ಟಸಂದ್ರ ಗ್ರಾ.ಪಂ.ಅಧ್ಯಕ್ಷ ಗಂಗರಂಗಯ್ಯ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನಮ್ಮ, ಹನುಮಂತರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪೋಟೋ 6 :

ನೆಲಮಂಗಲ ವಿಧಾನಸಭಾ ವ್ಯಾಪ್ತಿಯ ಕಂಚುಗಲ್ ಬಂಡೆಮಠದಲ್ಲಿ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಕಾರ್ತಿಕ ಲಕ್ಷ ದೀಪೋತ್ಸವದ ಹಿನ್ನೆಲೆಯಲ್ಲಿ ಶಾಸಕ ಎನ್.ಶ್ರೀನಿವಾಸ್ ಮಠಕ್ಕೆ ಭೇಟಿ ನೀಡಿ ಶ್ರೀ ಮಹಾಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು.