ಕನ್ನಡಪ್ರಭ ವಾರ್ತೆ ಆಲೂರುತಾಲೂಕಿನ ಹುಣಸವಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಜಂಪೋತ್ಸವ ಹಾಗೂ ಜೀರ್ಣೋದ್ಧಾರಗೊಂಡಿರುವ ಶ್ರೀ ಗೋಪಾಲಕೃಷ್ಣ ಸ್ವಾಮಿಯವರ ಪ್ರಾಣ ಪ್ರತಿಷ್ಠಾಪನೆ ಹಾಗೂ ದೇವಾಲಯ ಉದ್ಘಾಟನೆ ಮತ್ತು ಗೋಪುರದ ಕಳಶ ಸ್ಥಾಪನೆ ಮತ್ತು ವೀರಭದ್ರೇಶ್ವರ ಸ್ವಾಮಿಯವರ ಕೆಂಡೋತ್ಸವವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿಯವರು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಉದ್ಘಾಟನೆ ಹಾಗೂ ಜಾತ್ರಾ ಮಹೋತ್ಸವದ ಪ್ರಯುಕ್ತ ಗ್ರಾಮದ ಮುಖಂಡ ಹಾಗೂ ರೈತ ಮುಖಂಡರಾದ ಧರ್ಮರಾಜು ಮಾತಾನಾಡಿ, ದಿನಾಂಕ 19-04-26 ಭಾನುವಾರ ದಿಂದ 21-04-26 ಮಂಗಳವಾರದವರೆಗೂ ಜಾತ್ರಾ ಮಹೋತ್ಸವ ಜರುಗಲಿದ್ದು, ಭಾನುವಾರ ಬೆಳಿಗ್ಗೆ 6-00 ರಿಂದ ಗಂಗೆಪೂಜೆ ಸಂಜೆ 4-00 ಗಂಟೆಗೆ ವೇದಘೋಷ, ಯಾಗಶಾಲ ಪ್ರವೇಶ, ವಿಶ್ವನ ಆರಾಧನೆ ಪುಣ್ಯಾಹ ರಕ್ಷಾಬಂಧನ, ದೀಪಾರೋಹಣ, ಮೃತ್ ಸಂಗ್ರಹಣ, ಅಂಕುರಾರ್ಪಣೆ ಅಗ್ನಿ ಪ್ರತಿಷ್ಠೆ, ಗಣಪತಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಹೋಮ, ವಾಸ್ತುಹೋಮ. ಪಂಚಗವ್ಯ ಸ್ಥಾಪನ ಅದಿವಾಸಗಳು ಮಹಾಸುದರ್ಶನ ನರಸಿಂಹ ಹೋಮ, ಷೋಡಸನ್ಯಾಸ ಪೂರ್ವಕ ಜೀವಾಧಿ ತತ್ವನ್ಯಾಸ ಹೋಮ ಶಯ್ಯಾದಿವಾಸ ರಾಗಾಲಾಪನೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ಇರುತ್ತದೆ ಎಂದು ವಿವರಿಸಿದರು. ದಿನಾಂಕ 20ನೇ ಸೋಮವಾರ ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ ಕಳಸಾರಾಧನೆ, ಪೀಠಪೂಜೆ ಶ್ರೀ ಗೋಪಾಲಕೃಷ್ಣ ಸ್ವಾಮಿಯವರ ಪ್ರಾಣಪ್ರತಿಷ್ಠಾಪನೆ, ಹೋಮ, ಪರಿವಾರ ಹೋಮ, ಶಾಂತಿಹೋಮ, ಮಹಾಪೂರ್ಣಾಹುತಿ ನಡೆಯಲಿದ್ದು, ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮಿಯವರ ಅಮೃತಹಸ್ತದಿಂದ ಕಳಸ ಪ್ರತಿಷ್ಠಾಪನೆ ನಡೆಯಲಿದ್ದು, ಅವರ ಆಶೀರ್ವಚನಗಳೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ, ಮಾಜಿ ಪ್ರಧಾನಿಗಳಾದ ದೇವೇಗೌಡರ ದಿವ್ಯ ಸಾನ್ನಿಧ್ಯದಲ್ಲಿ, ಜನಪ್ರಿಯ ನಾಯಕರು ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಎಚ್ ಡಿ ಕುಮಾರ ಸ್ವಾಮಿಯವರ ಅಮೃತಹಸ್ತದಿಂದ ಸಭಾ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದ ಅವರು, ಕಾರ್ಯಕ್ರಮದಲ್ಲಿ ಶಾಸಕರಾದ ಎಚ್ ಡಿ ರೇವಣ್ಣ, ಎಂಎಲ್‌ಸಿ ಸೂರಜ್ ರೇವಣ್ಣ, ಎಚ್ ಕೆ ಕುಮಾರಸ್ವಾಮಿ, ಎಚ್ ಎಮ್ ವಿಶ್ವನಾಥ್,ಎಚ್ ಪಿ ಮೋಹನ್,ಕೆ ಎಸ್ ಮಂಜೇಗೌಡ ಮುಂತಾದ ಗಣ್ಯರು ಉಪಸ್ಥಿತರಿರಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.ಗ್ರಾಮಸ್ಥರಾದ ಶಾಂತಕೃಷ್ಣ ಮಾತಾನಾಡಿ, ಗ್ರಾಮದಲ್ಲಿ ಗ್ರಾಮಸ್ಥರೆಲ್ಲರು ಸೇರಿ 50 ಲಕ್ಷ ವೆಚ್ಚದಲ್ಲಿ ಗೋಪಾಲಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗಿದ್ದು, ಪುರಾತನ ಪ್ರಸಿದ್ಧವಾದ ಈ ದೇವಾಲಯಕ್ಕೆ 500 ವರ್ಷಗಳಿಗೂ ಹೆಚ್ಚಿನ ಐತಿಹ್ಯವಿದ್ದು ಈ ಕಾರ್ಯಕ್ರಮದ ಉದ್ಘಾಟನೆಗೆ ಗಣ್ಯಾತಿ ಗಣ್ಯರು ಆಗಮಿಸಲಿದ್ದಾರೆ. ಮಂಗಳವಾರ ಈ ಜಾತ್ರಾ ಮಹೋತ್ಸವಕ್ಕೆ ವಿಶೇಷ ಆಹ್ವಾನಿತರಾಗಿ ಸಂಸದರಾದ ಶ್ರೇಯಸ್ ಪಟೇಲ್‌ರವರು, ಸಿಮೆಂಟ್ ಮಂಜುರವರು, ಶಾಸಕರು, ಆಲೂರು-ಸಕಲೇಶಪುರ ಕ್ಷೇತ್ರ ಆಗಮಿಸಲಿದ್ದು ಸೋಮವಾರ ಬೆಳಿಗ್ಗೆ 6-30ರಿಂದ 7-30ರ ವಳಗೆ ಕೆಂಡೋತ್ಸವ ಹಾಗೂ ಮಹಾ ಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಜರುಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬದರ ಜೊತೆಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ಧರ್ಮರಾಜು, ಶಾಂತಕೃಷ್ಣ ಸುಬ್ಬೆಗೌಡ, ರಘು, ಪುಟ್ಟಣ್ಣ ಇದ್ದರು.
ಇಂದಿನಿಂದ ಹುಣಸವಳ್ಳಿಯಲ್ಲಿ ಜಾತ್ರಾ ಮಹೋತ್ಸವ
ಮಂಗಳವಾರದವರೆಗೂ ಜಾತ್ರಾ ಮಹೋತ್ಸವ ಜರುಗಲಿದ್ದು, ಭಾನುವಾರ ಬೆಳಿಗ್ಗೆ 6-00 ರಿಂದ ಗಂಗೆಪೂಜೆ ಸಂಜೆ 4-00 ಗಂಟೆಗೆ ವೇದಘೋಷ, ಯಾಗಶಾಲ ಪ್ರವೇಶ, ವಿಶ್ವನ ಆರಾಧನೆ ಪುಣ್ಯಾಹ ರಕ್ಷಾಬಂಧನ, ದೀಪಾರೋಹಣ, ಮೃತ್ ಸಂಗ್ರಹಣ, ಅಂಕುರಾರ್ಪಣೆ ಅಗ್ನಿ ಪ್ರತಿಷ್ಠೆ, ಗಣಪತಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಹೋಮ, ವಾಸ್ತುಹೋಮ. ಪಂಚಗವ್ಯ ಸ್ಥಾಪನ ಅದಿವಾಸಗಳು ಮಹಾಸುದರ್ಶನ ನರಸಿಂಹ ಹೋಮ, ಷೋಡಸನ್ಯಾಸ ಪೂರ್ವಕ ಜೀವಾಧಿ ತತ್ವನ್ಯಾಸ ಹೋಮ ಶಯ್ಯಾದಿವಾಸ ರಾಗಾಲಾಪನೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ಇರುತ್ತದೆ ಎಂದು ವಿವರಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.