ಸಾರಾಂಶ
ದೇವರು ನಮಗೆ ಕೊಟ್ಟ ಸಂಪತ್ತಿನ ಕಿಂಚಿತ್ತಾದರೂ ನೊಂದವರಿಗೆ, ದುರ್ಬಲರಿಗೆ ದೇವರ ಸೇವೆಗೆ ಅರ್ಪಿಸಿದರೆ ಒಳಿತಾಗಲಿದೆ. ಬೆಂಗಳೂರಿನವರಾದ ತಾನು ಇಲ್ಲಿನ ಶಕ್ತಿದೇವಿ ಕಾರೆಮೆಳೆ ಸಿಂಗಮ್ಮ ದೇವಿ ಪವಾಡದಿಂದ ಸುಂದರ ಬದುಕು ಕಟ್ಟಿಕೊಂಡಿರುವೆ. ದೇಗುಲ ಸುತ್ತಮುತ್ತಲ ಗ್ರಾಮಗಳ ರಕ್ಷಕಾದೇವಿಯಾಗಿದ್ದಾಳೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಜಾತ್ರೆಗಳು ಜಾನಪದ ಸಂಸ್ಕೃತಿ ಪ್ರತೀಕವಾಗಿದ್ದು, ಇವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ಅಗತ್ಯವಾಗಿದೆ ಎಂದು ಕಾರೆಮೆಳೆ ಸಿಂಗಮ್ಮ ದೇಗುಲ ಧರ್ಮದರ್ಶಿ ಬಿ.ಎನ್.ಗಜೇಂದ್ರ ತಿಳಿಸಿದರು.ಊಗಿನಹಳ್ಳಿಯಲ್ಲಿ ನಡೆದ ಕಾರೇಮೆಳೆ ಸಿಂಗಮ್ಮ ಜಾತ್ರೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ದೇವರು ನಮಗೆ ಕೊಟ್ಟ ಸಂಪತ್ತಿನ ಕಿಂಚಿತ್ತಾದರೂ ನೊಂದವರಿಗೆ, ದುರ್ಬಲರಿಗೆ ದೇವರ ಸೇವೆಗೆ ಅರ್ಪಿಸಿದರೆ ಒಳಿತಾಗಲಿದೆ ಎಂದರು.
ಬೆಂಗಳೂರಿನವರಾದ ತಾನು ಇಲ್ಲಿನ ಶಕ್ತಿದೇವಿ ಕಾರೆಮೆಳೆ ಸಿಂಗಮ್ಮ ದೇವಿ ಪವಾಡದಿಂದ ಸುಂದರ ಬದುಕು ಕಟ್ಟಿಕೊಂಡಿರುವೆ. ದೇಗುಲ ಸುತ್ತಮುತ್ತಲ ಗ್ರಾಮಗಳ ರಕ್ಷಕಾದೇವಿಯಾಗಿದ್ದಾಳೆ ಎಂದರು.ಈ ಗ್ರಾಮದಲ್ಲಿ ಕೃಷಿಕನಾಗಿ ನೆಲೆಸಲು ದೇವಿಯ ಪವಾಡವೇ ಸಾಕ್ಷಿಯಾಗಿದೆ. ದೇವಿ ಕ್ಷೇತ್ರದ ಪರಿಚಯಕ್ಕಾಗಿ ಮಾದಾಪುರ ಹ್ಯಾಂಟ್‌ಪೋಸ್ಟ್ ಮಾರ್ಗದಲ್ಲಿ ವಿಮಾನಗೋಪುರದ ಹೆಬ್ಬಾಗಿಲನ್ನು 16 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿವರ್ಷ ಸಾವಿರಾರು ಭಕ್ತರಿಗೆ ಜಾತ್ರೆ ದಿನದಲ್ಲಿ ನಿರಂತರ ಅನ್ನದಾಸೋಹ ಮಾಡಲಾಗುತ್ತಿದೆ ಎಂದರು.
ಸಾಹಿತಿ ಊಗಿನಹಳ್ಳಿ ಜೇನುಗೂಡು ಮಹೇಶ್ ಗ್ರಾಮದ ಸಮಸ್ಯೆಗಳನ್ನು ಮನವಿ ಮಾಡಿಕೊಂಡಿದ್ದಾರೆ. ಭಕ್ತರ, ಗ್ರಾಮಸ್ಥರ ಕೋರಿಕೆಯಂತೆ ದೇಗುಲ ಅಭಿವೃದ್ಧಿಗಾಗಿ ಟ್ರಸ್ಟ್ ಮಾಡಿಕೊಳ್ಳಲಾಗುವುದು. ಈ ದೇಗುಲಕ್ಕೆ ವಿದ್ಯುತ್ ಸಂಪರ್ಕ, ಸೌಕರ್ಯ, ಸಮುದಾಯಭವನ ನಿರ್ಮಾಣ, ಅರ್ಚಕರಿಗೆ ಮೂಲ ಸೌಲಭ್ಯ ಮಾಡಿಕೊಡಲಾಗುವುದು ಎಂದರು.ಈ ವೇಳೆ ಬಿ.ಎನ್.ಗಜೇಂದ್ರ ಹಾಗೂ ಎಚ್.ಜಿ.ಮಂಜುಳಾ, ಜಿ. ಮದನ್‌ರೆಡ್ಡಿ, ಜಿ. ಮಾಲಾ, ಜಿ.ಮನೋಹರ್ ಅವರನ್ನು ಗೌರವಿಸಲಾಯಿತು. ಗ್ರಾಪಂ ಸದಸ್ಯ ರಾಜಶೇಖರಮೂರ್ತಿ, ಎನ್.ಎನ್. ಪರಮೇಶ್, ಬಸವರಾಜು, ಗಿರೀಶ್, ಮುನಿರಾಜರೆಡ್ಡಿ ಇದ್ದರು.