ಸಾಮಾಜಿಕ ಸಾಮರಸ್ಯ ಕಾಪಾಡುವ ಜಾತ್ರೆಗಳು

| Published : May 18 2024, 12:36 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಹುಕ್ಕೇರಿ ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಎಲ್ಲ ಸಮುದಾಯಗಳನ್ನು ಒಂದುಗೂಡಿಸಿ ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ಜಾತ್ರೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಎಲ್ಲ ಸಮುದಾಯಗಳನ್ನು ಒಂದುಗೂಡಿಸಿ ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ಜಾತ್ರೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅಭಿಪ್ರಾಯಪಟ್ಟರು.

ತಾಲೂಕಿನ ಶಿರಹಟ್ಟಿ ಕೆ.ಡಿ ಗ್ರಾಮದಲ್ಲಿ ಶುಕ್ರವಾರ ಶ್ರದ್ಧಾಭಕ್ತಿಯಿಂದ ನಡೆದ ಶ್ರೀಲಕ್ಷ್ಮೀದೇವಿ(ಕಂಠೆವ್ವ) ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಸದಾ ದುಡಿದು, ದಣಿದ ಮನಸ್ಸುಗಳಿಗೆ ಜಾತ್ರೆಗಳು ನೆಮ್ಮದಿ ನೀಡಬಲ್ಲವು. ಇಂಥ ಜಾತ್ರೆಗಳಿಂದ ಹಳ್ಳಿಗಳಿಗೆ ಮತ್ತಷ್ಟು ಜೀವಕಳೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.ಬೇಡಿದ ಭಕ್ತರಿಗೆ ವರ ಕರುಣಿಸುವ ಶಕ್ತಿ ಈ ದೇವಿ ನೆಲೆಸಿರುವ ಈ ಪುಣ್ಯಭೂಮಿಯಲ್ಲಿದ್ದು, ಜಾಗೃತ ಸ್ಥಾನವಾಗಿ ಹೊರಹೊಮ್ಮಿದೆ. ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಹಳ್ಳಿಗರ ಮನಸ್ಸುಗಳು ಹರ್ಷಗೊಳ್ಳುತ್ತವೆ ಎಂದು ತಿಳಿಸಿದರು.ಹಿರಿಯ ನ್ಯಾಯವಾದಿ ಡಿ.ಕೆ.ಅವರಗೋಳ ಮಾತನಾಡಿ, ಲಕ್ಷ್ಮೀದೇವಿ ಜಾತ್ರೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿ ಗ್ರಾಮದಲ್ಲಿ ಹಬ್ಬದ ವಾತಾವರಣ ನೆಲೆಯೂರುವಂತೆ ಮಾಡಲಾಯಿತು ಎಂದರು.ಗ್ರಾಮ ಪಂಚಾಯತಿ ಅಧ್ಯಕ್ಷ ಸಯ್ಯದ್ ಅಮ್ಮಣಗಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶಂಕರ ಗುಡಸಿ, ಮಲಗೌಡ ಪಾಟೀಲ, ಸತ್ಯಪ್ಪ ಹಾಲಟ್ಟಿ, ಭೀರಪ್ಪ ಪೂಜೇರಿ, ಜಯಪಾಲ ಹುಲ್ಯಾಗೋಳ, ಆದಪ್ಪ ಮಲ್ಲಾಪುರೆ, ಚಿದಾನಂದ ಅವರಗೋಳ, ರಸೂಲ ಅಮ್ಮಣಗಿ, ರಾಮಪ್ಪ ಗೋಟೂರೆ, ಅಶೋಕ ಪಾಟೀಲ, ಮಂಗಲ ಮಾದರ, ಪಿಡಿಒ ಸಂತೋಷ ಕಬ್ಬಗೋಳ ಮತ್ತಿತರರು ಉಪಸ್ಥಿತರಿದ್ದರು.

ಡೊಳ್ಳಿನ ಪದಗಳ ಹಾಡುಗಾರಿಕೆ, ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಪಲ್ಲಕ್ಕಿ ಮೆರವಣಿಗೆ, ನಾಟಕ ಪ್ರದರ್ಶನ ಅದ್ಧೂರಿಯಾಗಿ ನಡೆದವು.