ಸಾರಾಂಶ
ಹೊಸಕೋಟೆ: ಬೆಂಗಳೂರು ನಗರದ ಹಲವಾರು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೆ ತಾಲೂಕಿನ ಕೆ.ಮಲ್ಲಸಂದ್ರ ಗ್ರಾಮದ ಡೆಲ್ಲಿ ಪಬ್ಲಿಕ್ ಶಾಲೆಗೂ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದ್ದು ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆಲವರು ದುಷ್ಕರ್ಮಿಗಳು ಅಂತಾರಾಷ್ಟ್ರೀಯ ವಿಚಾರಗಳನ್ನು ಪ್ರಸ್ತಾಪಿಸಿ ಶಾಲಾ ಆಡಳಿತ ಮಂಡಳಿಗಳಿಗೆ ಈ-ಮೇಲ್ ರವಾನಿಸಿರುವ ಬಗ್ಗೆ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಶಾಲಾ ಆವರಣಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಬಾಂಬ್ ಪತ್ತೆ ದಳ ಸ್ಥಳಕ್ಕೆ ಬಂದಿದ್ದು, ಕೊಠಡಿ ಹಾಗೂ ಶೌಚಾಲಯವನ್ನು ಪರಿಶೀಲಿಸಿದರು.ಓಡೋಡಿ ಬಂದ ಪೋಷಕರು:
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ. ಆತಂಕಗೊಂಡ ಪೋಷಕರು ಭಯದಲ್ಲೇ ಶಾಲೆಯ ಬಳಿ ಓಡಿ ಬಂದು ಮಕ್ಕಳನ್ನು ಕರೆದೊಯ್ದಿದ್ದಾರೆ. ಇ-ಮೇಲ್ ನಲ್ಲಿ ಬೆದರಿಕೆ ಬಂದ ತಕ್ಷಣವೇ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಶಾಲೆಗಳ ಬಳಿ ಪರಿಶೀಲನೆ ನಡೆಸಿದ್ದಾರೆ.ಡೆಲ್ಲಿ ಪಬ್ಲಿಕ್ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಬಂದರೂ ತಾಲೂಕಿನ ಸಾಕಷ್ಟು ಖಾಸಗಿ ಶಾಲೆಗಳು ಮಕ್ಕಳನ್ನು ಮಧ್ಯಾಹ್ನವೇ ಶಾಲಾ ಬಸ್‌ಗಳಲ್ಲಿ ಮನೆಗೆ ಕಳುಹಿಸಿದರು.ಕೋಟ್............
ಬಾಂಬ್ ಬೆದರಿಕೆ ವಿಚಾರ ನಮಗೆ ತಿಳಿದಿಲ್ಲ. ಸಂಜೆ 3-30ರವರೆಗೆ ನಡೆಯಬೇಕಿದ್ದ ಶಾಲಾ ತರಗತಿಗಳನ್ನು ಮೊಟಕುಗೊಳಿಸಿ 11-30ಕ್ಕೆ ಶಾಲಾ ವಾಹನದಲ್ಲಿ ನಮ್ಮ ಮನೆಗಳಿಗೆ ಬಿಟ್ಟರು. ನಂತರ ಟಿವಿಗಳಲ್ಲಿ ಬಾಂಬ್ ಬೆದರಿಕೆ ವಿಚಾರ ಪೋಷಕರ ಮೂಲಕ ನಮಗೆ ತಿಳಿಯಿತು.-ಭುವನ್ ಆರಾಧ್ಯ, ವಿದ್ಯಾರ್ಥಿ , ರೈಸಿಂಗ್ ಇಂಟರ್ ನ್ಯಾಷನಲ್ ಶಾಲೆ
ಕೋಟ್...............ಬೆಂಗಳೂರು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯ ಶಾಲೆಗಳಲ್ಲಿ ಬಾಂಬ್ ಇಟ್ಟಿರುವ ವಿಚಾರ ತಿಳಿದು ತುಂಬಾ ಆತಂಕವಾಯಿತು. ಕ್ಷಣಾರ್ಧದಲ್ಲಿ ಶಾಲಾ ಆಡಳಿತ ಮಂಡಳಿಗೆ ಕರೆ ಮಾಡಿ ಮಾಹಿತಿ ಪಡೆದಾಗ ನಮ್ಮ ಮಕ್ಕಳು ಸುರಕ್ಷಿತವಾಗಿರುವ ಸಂಗತಿ ತಿಳಿಯಿತು. ಆ ಕ್ಷಣ ಬಹಳ ಆತಂಕದಲ್ಲಿ ಇದ್ದೆವು. ಉಸಿರು ಕಟ್ಟಿಸುವ ಪರಿಸ್ಥಿತಿ ಉಂಟಾಗಿತ್ತು . ಮಕ್ಕಳು ಮನೆ ತಲುಪಿದ ನಂತರ ನಿಟ್ಟುಸಿರು ಬಿಡುವಂತಾಯಿತು.
- ಪವಿತ್ರ, ಪೋಷಕರುಪೋಟೋ :1 ಹೆಚ್‌ಎಸ್‌ಕೆ 4
ಹೊಸಕೋಟೆ ತಾಲೂಕಿನ ಕೆ.ಮಲ್ಲಸಂದ್ರದ ಡೆಲ್ಲಿ ಪಬ್ಲಿಕ್ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದ ಹಿನ್ನೆಲೆ ಪೊಲೀಸರು ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.