ಫೇಸ್‌ಬುಕ್‌ನಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಖಾತೆಯನ್ನು ತೆರೆದಿದ್ದು, ಇಂತಹ ಫೇಕ್ ಅಕೌಂಟ್‌ನ ಫೇಸ್‌ಬುಕ್ ಖಾತೆಗೆ ಸಾರ್ವಜನಿಕರು ಸ್ಪಂದಿಸದಂತೆ, ಯಾವುದೇ ರೀತಿ ವಂಚನೆಗೆ ಒಳಗಾಗದಂತೆ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

ದಾವಣಗೆರೆ: ಫೇಸ್‌ಬುಕ್‌ನಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಖಾತೆಯನ್ನು ತೆರೆದಿದ್ದು, ಇಂತಹ ಫೇಕ್ ಅಕೌಂಟ್‌ನ ಫೇಸ್‌ಬುಕ್ ಖಾತೆಗೆ ಸಾರ್ವಜನಿಕರು ಸ್ಪಂದಿಸದಂತೆ, ಯಾವುದೇ ರೀತಿ ವಂಚನೆಗೆ ಒಳಗಾಗದಂತೆ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

ಐಪಿಎಸ್ ಉಮಾ ಪ್ರಶಾಂತ್(ಎಸ್ಪಿ ದಾವಣಗೆರೆ) ಎಂಬ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಖಾತೆ ತೆರೆಗಿದ್ದಾರೆ. ಐಪಿಎಸ್ ಉಮಾ ಪ್ರಶಾಂತ (ಎಸ್ಪಿ ದಾವಣಗೆರೆ) ಹೆಸರಿನ ಖಾತೆಯು ನಕಲಿಯಾಗಿದ್ದು, ಅದರಿಂದ ಬರುವ ಯಾವುದೇ ಸಂದೇಶಗಳಿಗೆ ಜನರು ಪ್ರತಿಕ್ರಿಯೆ ನೀಡಬಾರದು. ಯಾವುದೇ ವಂಚನೆಗೂ ಒಳಗಾಗಬಾರದು ಎಂದು ಇಲಾಖೆ ಹೇಳಿದೆ.

ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್‌ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದ ಕಿಡಿಗೇಡಿಗಳ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಿದೆ. ಇಂತಹ ನಕಲಿ ಫೇಸ್‌ಬುಕ್‌ ಖಾತೆಯಿಂದ ಬರುವ ಯಾವುದೇ ಸಂದೇಶಗಳಿಗೆ ಜನರು ಪ್ರತಿಕ್ರಿಯಿಸಬಾರದು. ಯಾವುದೇ ರೀತಿ ವಂಚನೆಗೂ ಒಳಗಾಗದಂತೆ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.