ಸಾರಾಂಶ
ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಆರಂಭಿಸಿ ಭಕ್ತರನ್ನು ವಂಚಿಸಿದ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕೊಲ್ಲೂರು: ಇಲ್ಲಿನ ಪ್ರಸಿದ್ಧ ಶ್ರೀಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಆರಂಭಿಸಿ ಭಕ್ತರನ್ನು ವಂಚಿಸಿದ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ದೇವಳದ ಅಧಿಕೃತ ವೆಬ್‌ಸೈಟ್ http://karnatakatemplesaccommodation.com ಬದಲಿಗೆ karnataka temple accommodation ಎಂಬ ಹೆಸರಿನ ಅನಧಿಕೃತ ನಕಲಿ ವೆಬ್‌ಸೈಟನ್ನು ದುಷ್ಕರ್ಮಿಗಳು ರಚಿಸಿದ್ದು, ಅದರ ಮೂಲಕ ಹಲವಾರು ಜನರಿಗೆ ವಂಚಿಸಿದ್ದು ಬೆಳಕಿಗೆ ಬಂದಿದೆ. ದೇವಾಲಯದ ಲಲಿತಾಂಬಿಕಾ ಅತಿಥಿ ಗೃಹದಲ್ಲಿ ಕೊಠಡಿಗಳನ್ನು ಕಾದಿರಿಸಲು ಈ ಅಧಿಕೃತ ವೆಬ್‌ಸೈಟ್ ಆರಂಭಿಸಲಾಗಿದೆ. ಅಗತ್ಯವುಳ್ಳವರು ಈ ವೆಬ್‌ಸೈಟ್‌ನಲ್ಲಿ ಕ್ಯೂಆರ್ ಕೋಡ್ ಮೂಲವಕ ಹಣ ಪಾವತಿಸಿ ಕೋಠಡಿ ಕಾಯ್ದಿರಿಸುವ ವ್ಯವಸ್ಥೆ ಇದೆ.ಆದರೆ, ಈ ನಕಲಿ ವೆಬ್‌ಸೈಟಿನಲ್ಲಿ ದುಷ್ಕರ್ಮಿಗಳು ಬೇರೆಯೇ ಕ್ಯೂಆರ್ ಕೋಡ್ ನೀಡಿದ್ದು, ಅದನ್ನು ನಂಬಿದ ಭಕ್ತರು ಅದಕ್ಕೆ ಹಣ ಪಾವತಿಸುತಿದ್ದರು. ಈ ಹಣ ದೇವಾಲಯದ ಖಾತೆಗೆ ಬಾರದೇ ದುಷ್ಕರ್ಮಿಗಳ ಜೇಬು ಸೇರುತ್ತಿತ್ತು, ಅತ್ತ ಕೊಠಡಿ ಕೂಡ ಸಿಗುತ್ತಿರಲಿಲ್ಲ.
ಈ ಬಗ್ಗೆ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ದೂರು ನೀಡಿದ್ದಾರೆ. ಎಷ್ಟು ಮಂದಿಗೆ ಈ ರೀತಿ ಮೋಸವಾಗಿದೆ ಎಂಬುದು ಖಚಿತವಾಗಿಲ್ಲದಿದ್ದರೂ ವರ್ಷದಿಂದ ಲಕ್ಷಕ್ಕೂಅಧಿಕ ರು. ಮೊತ್ತ ದುಷ್ಕರ್ಮಿಗಳ ಪಾಲಾಗಿರುವುದಾಗಿ ಹೇಳಲಾಗಿದೆ.ಹಿಂದೆಯೂ ಆಗಿತ್ತು ಮೋಸ:
ಕೊಲ್ಲೂರಿನಲ್ಲಿ ಈ ನಕಲಿ ವೆಬ್‌ಸೈಟ್ ಹಾವಳಿ ಹೊಸತೇನಲ್ಲ, 2019ರಲ್ಲಿ ದೇವಾಲಯದ ಅಧಿಕೃತ ವೆಬ್‌ಸೈಟ್‌ನ್ನು ದುಷ್ಕರ್ಮಿಗಳು ನಕಲಿ ಮಾಡಿ, ದೇವಿಗೆ ಪೂಜೆ ಸೇವೆಯ ಹೆಸರಿನಲ್ಲಿ, ಲಕ್ಷಾಂತರ ರು. ಹಣ ಪಡೆದು ವಂಚಿಸಿದ್ದ ಪ್ರಕರಣ ಸೆನ್ ಠಾಣೆಗೆ ದಾಖಲಾಗಿತ್ತು. ನಂತರ ಈ ನಕಲಿ ವೆಬ್‌ಸೈಟ್ ಸ್ಥಗಿತಗೊಳಿಸಲಾಗಿತ್ತು.;Resize=(128,128))
;Resize=(128,128))