ಪ್ರಹ್ಲಾದ ಜೋಶಿ ಮೇಲೆ ಸುಳ್ಳು ಆರೋಪ ಸರಿಯಲ್ಲ: ಮುನವಳ್ಳಿ

| Published : Oct 23 2024, 12:47 AM IST

ಪ್ರಹ್ಲಾದ ಜೋಶಿ ಮೇಲೆ ಸುಳ್ಳು ಆರೋಪ ಸರಿಯಲ್ಲ: ಮುನವಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳಂಕರಹಿತ ರಾಜಕಾರಣಿಯಾದ ಪ್ರಹ್ಲಾದ ಜೋಶಿ ಅವರ ಏಳ್ಗೆ ಸಹಿಸದ ಕೆಲ ವ್ಯಕ್ತಿಗಳು ಸಂಬಂಧವಿಲ್ಲದ ವಂಚನೆ ಪ್ರಕರಣವೊಂದಕ್ಕೆ ಸಿಲುಕಿಸುವುದರೊಂದಿಗೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ.

ಹುಬ್ಬಳ್ಳಿ:

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಖ್ಯಾತಿ ಸಹಿಸದ ಕೆಲ ವ್ಯಕ್ತಿಗಳು ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುವ ಕಾರ್ಯ ಕೈಗೊಂಡಿರುವುದು ಸರಿಯಲ್ಲ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸತತ 5ನೇ ಬಾರಿಗೆ ಅತ್ಯಧಿಕ ಮತ ಪಡೆದು ಸಂಸದರು, ಸಚಿವರಾಗಿರುವ ಪ್ರಹ್ಲಾದ ಜೋಶಿ ಅವರು ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಇವರು ಸರಳ, ಸಜ್ಜನಿಕ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಇವರ ಅನೇಕ ಹೋರಾಟಗಳನ್ನು ಅತ್ಯಂತ ಹತ್ತಿರದಿಂದ ಬಲ್ಲವನಾಗಿದ್ದೇನೆ ಎಂದು ಹೇಳಿದ್ದಾರೆ.

ಈಗಿನ ದಿನಮಾನಗಳಲ್ಲಿ ಒಳ್ಳೆಯ ರಾಜಕಾರಣಿ ಸಿಗುವುದು ವಿರಳ. ಇಂತಹ ಕಳಂಕರಹಿತ ರಾಜಕಾರಣಿಯ ಏಳ್ಗೆ ಸಹಿಸದ ಕೆಲ ವ್ಯಕ್ತಿಗಳು ಸಂಬಂಧವಿಲ್ಲದ ವಂಚನೆ ಪ್ರಕರಣವೊಂದಕ್ಕೆ ಸಿಲುಕಿಸುವುದರೊಂದಿಗೆ ಇಲ್ಲಸಲ್ಲದ ಆರೋಪ ಹೊರಿಸಿ. ತೇಜೋವಧೆ ಮಾಡುವುದರೊಂದಿಗೆ ಇವರ ಮಾನಸಿಕ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅವರು ತಮ್ಮ ಸಹೋದರನ ಜತೆ ಯಾವುದೇ ವೈಯಕ್ತಿಕ ಸಂಬಂಧ ಹೊಂದಿಲ್ಲವೆಂದು 2012ರಲ್ಲಿಯೇ ಪತ್ರಿಕಾ ಪ್ರಕಟಣೆ ಮೂಲಕ ಹೇಳಿಕೆ ನೀಡಿದ್ದಾರೆ. ಹೀಗಿದ್ದರೂ ಪ್ರಹ್ಲಾದ ಜೋಶಿ ಅವರನ್ನು ವಿನಾಕಾರಣ ಎಳೆದು ತಂದಿರುವುದು ಸರಿಯಲ್ಲ. ಇಂತಹ ಯಾವುದೇ ಪಟ್ಟಭದ್ರ ಹಿತಾಸಕ್ತಿಗಳ ದುರುದ್ದೇಶಗಳಿಗೆ ಕಿವಿಗೊಡದೇ ಅತ್ಯಂತ ಹೆಚ್ಚಿನ ಆತ್ಮಸ್ಥೆರ್ಯದಿಂದ ಈ ಭಾಗದಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಕಾರ್ಯಗಳತ್ತ ತಮ್ಮ ಗಮನ ನೀಡುವಂತೆ ಸಚಿವರಲ್ಲಿ ವಿನಂತಿಸುವುದಾಗಿ ತಿಳಿಸಿದ್ದಾರೆ.