ವಿರೋಧಿಗಳಿಂದ ನನ್ನ ಬಗ್ಗೆ ಸುಳ್ಳು ಸುದ್ದಿ

| Published : Sep 04 2025, 01:00 AM IST

ಸಾರಾಂಶ

ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಸ್ಥಾನಮಾನ ನೀಡಿದೆ. ಯಾವುದೇ ಕಾರಣಕ್ಕೂ ಪಕ್ಷ ತೊರೆದು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ನನ್ನ ವಿರೋಧಿಗಳು ಹರಡಿಸುತ್ತಿರುವ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಮಧುಗಿರಿ ಶಾಸಕ ಕೆ.ಎನ್ ರಾಜಣ್ಣ ವಿರೋಧಿಗಳಿಗೆ ತಿರುಗೇಟು ನೀಡಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಸ್ಥಾನಮಾನ ನೀಡಿದೆ. ಯಾವುದೇ ಕಾರಣಕ್ಕೂ ಪಕ್ಷ ತೊರೆದು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ನನ್ನ ವಿರೋಧಿಗಳು ಹರಡಿಸುತ್ತಿರುವ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಮಧುಗಿರಿ ಶಾಸಕ ಕೆ.ಎನ್ ರಾಜಣ್ಣ ವಿರೋಧಿಗಳಿಗೆ ತಿರುಗೇಟು ನೀಡಿದರು. ತಾಲೂಕಿನ ಹೊಳವನಹಳ್ಳಿ ಹೋಬಳಿ ಸೋಂಪುರ ಗ್ರಾಮದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ತೊರೆಯುವ ಮಾತಿಲ್ಲಾ, ವಿರೋಧಿಗಳು ಉದ್ದೇಶ ಪೂರ್ವಕವಾಗಿ ಸುಳ್ಳು ಸುದ್ದಿ ಹರಡಿಸುತ್ತಿದ್ದು, ನನ್ನ ನಿಷ್ಠೆ ಕಾಂಗ್ರೆಸ್ ಪಕ್ಷಕ್ಕೆ ಯಾವಾಗಲು ಇರುತ್ತದೆ. ಅಭಿಮಾನಿಗಳು ದೆಹಲಿಗೆ ಹೋಗುವ ನನ್ನ ಹಿತೈಶಿಗಳು ಮತ್ತು ಅಭಿಮಾನಿಗಳು ದೆಹಲಿಗೆ ನನ್ನ ಪರವಾಗಿ ಹೋಗುತ್ತಾರೆಂಬ ಮಾಹಿತಿ ಬಂದಿದ್ದು. ಇದಕ್ಕೆ ನನ್ನ ಪರವು ಇಲ್ಲಾ ವಿರೋಧವು ಇಲ್ಲ. ಅದು ಅವರುಗಳ ಸ್ವಚ್ಛೆಯಾಗಿದೆ ಎಂದು ಹೇಳಿದರು. ಸಚಿವ ಸ್ಥಾನ ಹೋದ ನಂತರವೂ ನನಗೆ ಸಾಕಷ್ಟು ಅಭಿಮಾನ ತೋರಿಸಿರುವ ಜನರ ಪ್ರೀತಿ ಕಂಡು ನಾನು ಭಾವುಕನಾಗಿದ್ದೇನೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್, ವಿಎಸ್‌ಎಸ್‌ಎನ್ ಅಧ್ಯಕ್ಷರಾದ ಕೇಶವಮೂರ್ತಿ, ಗಟ್ಲಹಳ್ಳಿಕುಮಾರ್, ರಾಜಣ್ಣ, ಮಧುಕುಮಾರ್, ನಿರ್ದೇಶಕ ಕೆ.ವಿ ಪುರುಷೋತ್ತಮ್, ಟಿ.ಸಿ ರಾಮಯ್ಯ, ಈಶಪ್ರಸಾದ್, ಮೇಲ್ವಿಚಾರಕ ಬೋರಣ್ಣ, ವ್ಯವಸ್ಥಾಪಕ ಮಹೇಶ್, ಮುಖಂಡ ಶ್ರೀರಾಮುಲುನಾಯ್ಕ ಸೇರಿದಂತೆ ಇತರರು ಹಾಜರಿದ್ದರು.