ರೈತರ ಸಂಕಷ್ಟಕ್ಕೆ ಕುಟುಂಬ ವಿಘಟನೆಯೂ ಕಾರಣ: ಗೋಪಾಲ್‌

| Published : Oct 07 2025, 01:02 AM IST

ರೈತರ ಸಂಕಷ್ಟಕ್ಕೆ ಕುಟುಂಬ ವಿಘಟನೆಯೂ ಕಾರಣ: ಗೋಪಾಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ದೇಶಕ್ಕೆ ಅನ್ನ ನೀಡುವ ರೈತರಿಗೆ ಮಹತ್ವವಿದ್ದರೂ, ಕೃಷಿ ಲಾಭದಾಯಕ ಆಗದಿರುವುದು ಬೇಸರದ ಸಂಗತಿ ಎಂದು ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್ ತಿಳಿಸಿದರು.

ಹೊಸಕೋಟೆ: ದೇಶಕ್ಕೆ ಅನ್ನ ನೀಡುವ ರೈತರಿಗೆ ಮಹತ್ವವಿದ್ದರೂ, ಕೃಷಿ ಲಾಭದಾಯಕ ಆಗದಿರುವುದು ಬೇಸರದ ಸಂಗತಿ ಎಂದು ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್ ತಿಳಿಸಿದರು.

ತಾಲೂಕಿನ ಹಿಂಡಿಗನಾಳ ಗ್ರಾಮದಲ್ಲಿ ಬೆಂಗಳೂರಿನ ಜಿಕೆವಿಕೆ, ನಂದಗುಡಿ ರೈತ ಸಂಪರ್ಕ ಕೇಂದ್ರ, ಹಿಂಡಿಗನಾಳ ಡೈರಿ ಇಟ್ಟಸಂದ್ರ ಗ್ರಾಪಂ ಸಂಯುಕ್ತಾಶ್ರಯದಲ್ಲಿ ಅಂತಿಮ ವರ್ಷದ ಕೃಷಿ ಬಿಎಸ್ಸಿ, ಬಿ.ಟೆಕ್, ಗ್ರಾಮೀಣ ಕೃಷಿ ಕಾರ್ಯಾನುಭವ ಸಸ್ಯ ಸಂಸ್ಕೃತಿ ವಿಚಾರಗೋಷ್ಠಿ ಹಾಗೂ ಕೃಷಿ ಮೇಳ, ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನಸಂಖ್ಯೆ ಹೆಚ್ಚಾದಂತೆ ಅವಿಭಕ್ತ ಕುಟುಂಬಗಳು ಇಬ್ಬಾಗವಾಗಿ ದೊಡ್ಡ ರೈತರು ಅತಿ ಸಣ್ಣ ರೈತರಾಗಿ ಬದಲಾವಣೆ ಆಗುತ್ತಿದ್ದು, ರೈತರಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಖರ್ಚಾಗುತ್ತಿದೆ. ಬೆಳೆಯ ಮೌಲ್ಯಕ್ಕಿಂತ ೩ ಪಟ್ಟು ಹಣ ವ್ಯಯವಾಗುತ್ತಿದೆ. ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ರೈತರು ಸಮಗ್ರ ಕೃಷಿ, ಮೌಲ್ಯಧಾರಿತ ಸುಸ್ಥಿರ ಕೃಷಿಯಿಂದ ಲಾಭದತ್ತ ಮುನ್ನಡೆಯಲು ಸಾಧ್ಯ ಎಂದರು.

ಎಸ್‌ಎಫ್‌ಸಿಎಸ್ ನಿರ್ದೇಶಕ. ಎಚ್.ಕೆ.ನಾರಾಯಣಗೌಡ ಮಾತನಾಡಿ, ರೈತರು ಬೇಸಾಯದ ಪರಿಣತಿಯನ್ನು ಕೃಷಿ ವಿದ್ಯಾರ್ಥಿಗಳಿಗೆ ಕಲಿಯಲೆಂದು ೩ ತಿಂಗಳ ಕಾಲ ಗ್ರಾಮದಲ್ಲೆ ವಾಸ್ತವ್ಯ ಹೂಡಿದ್ದು, ರೈತರಿಗೆ ವೈಜ್ಞಾನಿಕ, ಸಮಗ್ರ ಹಾಗೂ ಮೌಲ್ಯಧಾರಿತ ಕೃಷಿ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಸರೋಜಮ್ಮ ಮಾತನಾಡಿ, ಜೀವನಕ್ಕೆ ಮೊದಲ ಅಗತ್ಯವೆಂದರೆ ಕೃಷಿಯಿಂದ ಸಿಗುವ ಆಹಾರ. ಇಂದು ಇಡೀ ಜಗತ್ತು ಕೃಷಿಯ ಮೇಲೆ ಅವಲಂಬಿತವಾಗಿದೆ. ಹಸಿರು ಕ್ರಾಂತಿಯಿಂದಾಗಿ ಭಾರತ ಕೃಷಿಯಲ್ಲಿ ಸ್ವಾವಲಂಬಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ, ತಾಪಂ ಮಾಜಿ ಸದಸ್ಯ ರಾಮಚಂದ್ರಗೌಡ, ಗ್ರಾಪಂ ಮಾಜಿ ಅಧ್ಯಕ್ಷೆ ಬಿಂದು, ಮೂರ್ತಿ, ಸದಸ್ಯರಾದ ಎಚ್‌ಕೆ.ಮಧು, ಜಯರಾಮ್, ಮಾಜಿ ಅಧ್ಯಕ್ಷ ಶ್ರೀನಿವಾಸ್, ಜಿಕೆವಿಕೆ ಡಾ.ಮೋಹನ್, ಈಶ್ವರ್ ನಾಯಕ್, ಡಾ. ಕೆ.ಎಸ್.ವಿನೋದ, ಡಾ.ಬಿ.ಗಾಯತ್ರಿ, ಡಾ.ಶಂಕರಮೂರ್ತಿ, ಡಾ.ಗೋವಿಂದೇಗೌಡ, ಡಾ.ಎಚ್‌.ಕೆ.ಪಂಕಜ ಹಾಜರಿದ್ದರು.

ಪೋಟೋ: 6 ಹೆಚ್‌ಎಸ್‌ಕೆ 2

ಹೊಸಕೋಟೆ ತಾಲೂಕಿನ ಹಿಂಡಿಗನಾಳದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಸಸ್ಯ ಸಂಸ್ಕೃತಿ ವಿಚಾರಗೋಷ್ಠಿ ಹಾಗೂ ಕೃಷಿ ಮೇಳ, ವಸ್ತು ಪ್ರದರ್ಶನವನ್ನು ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್ ಉದ್ಘಾಟಿಸಿದರು.