ಕೌಟುಂಬಿಕ ಕಲಹ: ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ

| Published : Dec 07 2024, 12:31 AM IST

ಕೌಟುಂಬಿಕ ಕಲಹ: ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಸನಹಳ್ಳಿಯಲ್ಲಿ ಗ್ರಾಮದ ಹೊರವಲಯದ ಮರವೊಂದಕ್ಕೆ ಈಶ್ವರ ಎಂಬಾತ ನೇಣುಹಾಕಿಕೊಂಡು ಮೃತಪಟ್ಟಿದ್ದಾನೆ.

ಚಿಂತಾಮಣಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕರ‍್ಲಪರ್ತಿ ಬಳಿಯ ಮಾಸನಹಳ್ಳಿಯಲ್ಲಿ ನಡೆದಿದ್ದು ಮೃತ ಯುವಕನನ್ನು ಈಶ್ವರ (38) ಎಂದು ಗುರ್ತಿಸಲಾಗಿದೆ.

ಗುರುವಾರ ಮಧ್ಯಾಹ್ನ 11 ರ ಸುಮಾರಿಗೆ ಗ್ರಾಮದ ಹೊರವಲಯದ ಮರವೊಂದಕ್ಕೆ ಈಶ್ವರ ನೇಣುಹಾಕಿಕೊಂಡು ಮೃತಪಟ್ಟಿರುವುದನ್ನು ಕಂಡ ಗ್ರಾಮಸ್ಥರು ತಾಲೂಕಿನ ಕೆಂಚರ‍್ಲಹಳ್ಳಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಬ್ ಇನ್‌ಸ್ಪೆಕ್ಟರ್ ಶಿವಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.