ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಚೇನಂಡ ಹಾಕಿ ಪಂದ್ಯಾವಳಿಯಲ್ಲಿ ಸೋಮವಾರ ಪುದಿಯೊಕ್ಕಡ ಮರುವಂಡ ವಿರುದ್ಧ 5-1ರಿಂದ ಪರದಂಡ ನಂಬುಡುಮಾಡ ವಿರುದ್ಧ 4-1 ರಿಂದ ಜಯ ಗಳಿಸಿದವು.ಮೇರಿಯಂಡ ಮಂಡೇಟಿರ ವಿರುದ್ಧ ಟೈ ಬ್ರೇಕರ್ ನಲ್ಲಿ 5-4 ರಿಂದ, ಸಣ್ಣುವಂಡ ಕುಮ್ಮಂಡ ವಿರುದ್ಧ ಟೈ ಬ್ರೇಕರ್ ನಲ್ಲಿ 2-1ರಿಂದ, ಮೇಕೆರಿರ ಕಾಂಗಂಡ ವಿರುದ್ಧ ಟೈಬ್ರೇಕರ್ ನಲ್ಲಿ 4-3ರಿಂದ ಜಯ ಗಳಿಸಿದವು. ನೆಲ್ಲಮಕ್ಕಡ ತಂಡ ವಾಕ್ ಓವರ್ ಗಳಿಸಿತು. ಉಳಿದಂತೆ ಮಂಡೇಟಿರ ಕೈಬುಲಿರ ವಿರುದ್ಧ 3-0ಯಿಂದ, ಬೊಳ್ಳೇಪಂಡ ಮಂದೆಯಡ ವಿರುದ್ಧ 3-0ಯಿಂದ, ಮಚ್ಚಾರಂಡ ನಾಳಿಯಂಡ ವಿರುದ್ಧ 1-0ಯಿಂದ, ಮಂಡೇಪಂಡ ಕಡೇಮಡ ವಿರುದ್ಧ 3-0ಯಿಂದ, ಕಾಡ್ಯಮಾಡ ತೀತಿಮಾಡ ವಿರುದ್ಧ 1-0ಯಿಂದ, ಇಟ್ಟೀರ ಐಚಂಡ ವಿರುದ್ದ 1-03 ಯಿಂದ, ಐತಿಚಂಡ ಅಲೇಮಾಡ ವಿರುದ್ದ 1-0ರಿಂದ, ಪಂದ್ಯಂಡ ಕುಪ್ಪಂಡ (ನಾಂಗಾಲ) ಪಂದ್ಯಂಡ ವಿರುದ್ಧ 2-0ಯಿಂದ,ಚೇಂದಂಡ ಮುಕ್ಕಾಟಿರ (ಕಡಗದಾಳು) ವಿರುದ್ಧ 1-0ಯಿಂದ,
ಕಾಳೇರ ಮಾಚಿಮಂಡ ವಿರುದ್ದ 2-0 ಯಿಂದ, ಕೊಂಗಂಡ ಮುಕ್ಕಾಟಿರ (ಬೋಂದ) ವಿರುದ್ದ 2-0ರಿಂದ, ಪಟ್ಟಚೆರುವಾಳಂಡ ಕುಂದೀರ ವಿರುದ್ಧ 2-0ರಿಂದ, ಮೂಕೊಂಡ ಚಿಮ್ಮಣಮಾಡ ವಿರುದ್ಧ 4-0 ರಿಂದ ಗೆಲವು ಸಾಧಿಸಿದವು.ಸೋಮವಾರ ಸಂಜೆ ಸುರಿದ ಮಳೆಯಿಂದಾಗಿ ಕಾಯಪಂಡ v/s ಪಾಡೆಯಂಡ ಒಂದು ಪಂದ್ಯಾಟ ಮಂಗಳವಾರಕ್ಕೆ ಮುಂದೂಡಲಾಗಿದೆ. ಈ ಸಂದರ್ಭ ಮಳೆಯಿಂದ ರಕ್ಷಿಸಲು ಒಂದನೇ ಮುಖ್ಯ ಆಟದ ಮೈದಾನಕ್ಕೆ ಸಂಪೂರ್ಣ (ಥಾಟ್) ಪ್ಲಾಸ್ಟಿಕ್ ಟರ್ಪಾಲ್ ನಿಂದ ಮುಚ್ಚಿ ರಕ್ಷಣೆ ಮಾಡಲಾಯಿತು.
ಇಂದಿನ ಪಂದ್ಯಗಳು ಮೈದಾನ 1ರಲ್ಲಿ8.30ಕ್ಕೆ ಕೂತಂಡ v/s ಕಾರೇರ
9.30ಕ್ಕೆ ಕೋಟೆರ v/s ಚೇಂದೀರ
10.30ಕ್ಕೆ ಕಾಯಪಂಡ v/s ಪಾಡೆಯಂಡಮೈದಾನ 28.30ಕ್ಕೆ ಮುಂಡಿಯೋಳಂಡ v/s ಅಂಜಪರವಂಡ9.30ಕ್ಕೆ ಮೇವಡ v/s ಕನ್ನಂಡ
10 .30ಕ್ಕೆ ಉದಿಯಂಡ v/s ನೆಲ್ಲಮಕ್ಕಡ.