ಅಂಜನಾದ್ರಿ ದೇವಸ್ಥಾನ ಸಮಿತಿಯಿಂದ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು

ಗಂಗಾವತಿ:ಸಮೀಪದ ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಚಿತ್ರನಟ ರಿಷಬ್ ಶೆಟ್ಟಿ ದಂಪತಿ ಭೇಟಿ ನೀಡಿ ಆಂಜನೇಯಸ್ವಾಮಿ ದರ್ಶನ ಪಡೆದರು.

ಮಂತ್ರಾಲಯಕ್ಕೆ ತೆರಳಿದ್ದ ರಿಷಬ್ ಶೆಟ್ಟಿ ಹಾಗೂ ಪತ್ನಿ ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳು ಏರಿ ಆಂಜನೇಯಸ್ವಾಮಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ಬೆಟ್ಟದ ಮೇಲೆ ನಿಂತು ತುಂಗಭದ್ರಾ ನದಿ ಮತ್ತು ಹಂಪಿ, ಆನೆಗೊಂದಿ ಪ್ರದೇಶದ ಪರಿಸರ ವೀಕ್ಷಿಸಿದರು. ಕಾಂತಾರ-2 ಚಿತ್ರ ಯಶಸ್ವಿಯಾಗಿದ್ದ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ತೆರಳಿ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು. ನಂತರ ಅಂಜನಾದ್ರಿಗೆ ಆಗಮಿಸಿದ್ದರು. ಈ ವೇಳೆ ಅಂಜನಾದ್ರಿ ದೇವಸ್ಥಾನ ಸಮಿತಿಯಿಂದ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು. ಆನೆಗೊಂದಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಸುಮಂತ ಕುಲಕರ್ಣಿ ಮತ್ತು ಅರ್ಚಕ ವಿದ್ಯಾದಾಸ ಬಾಬಾ ಸನ್ಮಾನಿಸಿ ಗೌರವಿಸಿದರು.