ಕುಣಿಗಲ್:ಡಿ.ಕೆ. ಶಿವಕುಮಾರ್ ರಾಜ್ಯದ 25ನೇ ಮುಖ್ಯಮಂತ್ರಿಯಾದ ನಂತರ ತನ್ನ ಆರಾಧ್ಯ ದೈವ ನೊಣವಿನಕೆರೆಯ ಕಾಡು ಸಿದ್ದೇಶ್ವರ ಮಠದ ಅಜ್ಜಯನ ಮಠಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಅಭಿಮಾನಿಯೊಬ್ಬ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಎಂಬ ಬರಹವನ್ನು ತನ್ನ ಕೈ ಮೇಲೆ ಅಚ್ಚೆ ಹಾಕಿಸಿಕೊಂಡಿದ್ದನ್ನು ಗಮನಿಸಿ ಡಿಕೆ ಶಿವಕುಮಾರ್ ಅಭಿನಂದಿಸಿದರು. ತಾಲೂಕಿನ ಅಮೃತೂರು ಹೋಬಳಿಯ ಹನುಮಾಪುರ ಗ್ರಾಮದ ಅಭಿಮಾನಿ ಗಿರೀಶ್ ಎಂಬ ಯುವಕ ತನ್ನ ಕೈ ಮೇಲೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ. ಅದೇ ರೀತಿ ಅವರ ಪ್ರಮಾಣವಚನದ ದಿನಾಂಕ ಹಾಗೂ ಸಮಯವನ್ನು ಕೂಡ ತನ್ನ ಕೈ ಮೇಲೆ ಬರೆಸಿಕೊಂಡಿದ್ದಾನೆ. ಇದನ್ನು ಗಮನಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆತನ ತಲೆಯ ಮೇಲೆ ಕೈ ಇಟ್ಟು ಅಭಿನಂದಿಸಿದ್ದಾರೆ. ಈ ಸಂಬಂಧ ಮಾತನಾಡಿದ ಯುವಕ ಮೊದಲಿನಿಂದಲೂ ಡಿ.ಕೆ. ಕಂಡರೆ ನನಗೆ ಅತಿಯಾದ ಪ್ರೀತಿ ಅಭಿಮಾನ. ಅವರ ಮುಖ್ಯಮಂತ್ರಿ ಆಗುವ ಕನಸನ್ನು ನಾನು ಪ್ರತಿನಿತ್ಯ ಕಾಣುತ್ತಿದೆ. ಈಗ ನನಸಾಗುತ್ತಿದೆ ಅಮೃತಗಳಿಗೆ ಕ್ಷಣ ದಿನ ಅವುಗಳನ್ನು ಮರೆಯಲು ಸಾಧ್ಯವಿಲ್ಲ .ಅದಕ್ಕಾಗಿ ನನ್ನ ಜೀವಿತ ಅವಧಿಯ ತನಕ ದೇಹದ ಮೇಲೆ ಬರಹ ಇರಬೇಕಾಗಿ ಅಚ್ಚೆ ಹಾಕಿಸಿದ್ದೇನೆ ಎಂದರು. ಫೋಟೋ ಇದೆ :- 6 ಕೆಜಿಎಲ್ 2 : ಮುಖ್ಯಮಂತ್ರಿ ಎದುರಿಗೆ ಕೈ ಬರಹದ ಅಚ್ಚೆಯನ್ನು ಪ್ರದರ್ಶಿಸುತ್ತಿರುವ ಗಿರೀಶ್ ಹನುಮಪುರ
ಡಿಕೆ ಶಿವಕುಮಾರ್ ಪ್ರಮಾಣ ವಚನ ಹಚ್ಚೆ ಹಾಕಿಸಿಕೊಂಡ ಅಭಿಮಾನಿ
ಅಮೃತೂರು ಹೋಬಳಿಯ ಹನುಮಾಪುರ ಗ್ರಾಮದ ಅಭಿಮಾನಿ ಗಿರೀಶ್ ಎಂಬ ಯುವಕ ತನ್ನ ಕೈ ಮೇಲೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ. ಅದೇ ರೀತಿ ಅವರ ಪ್ರಮಾಣವಚನದ ದಿನಾಂಕ ಹಾಗೂ ಸಮಯವನ್ನು ಕೂಡ ತನ್ನ ಕೈ ಮೇಲೆ ಬರೆಸಿಕೊಂಡಿದ್ದಾನೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.