ಸಾರಾಂಶ
ಶ್ರೀರಂಗಪಟ್ಟಣ: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಟ ಡಾ.ಪುನೀತ್ ರಾಜ್‌ಕುಮಾರ್ 50ನೇ ವರ್ಷದ ಹುಟ್ಟುಹಬ್ಬವನ್ನು ಅಪ್ಪು ಅಭಿಮಾನಿಗಳು ಪೂಜೆ ಸಲ್ಲಿಸಿ, ಸಿಹಿ ಹಂಚುವ ಮೂಲಕ ಆಚರಿಸಿದರು.
ಶ್ರೀರಂಗಪಟ್ಟಣ: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಟ ಡಾ.ಪುನೀತ್ ರಾಜ್‌ಕುಮಾರ್ 50ನೇ ವರ್ಷದ ಹುಟ್ಟುಹಬ್ಬವನ್ನು ಅಪ್ಪು ಅಭಿಮಾನಿಗಳು ಪೂಜೆ ಸಲ್ಲಿಸಿ, ಸಿಹಿ ಹಂಚುವ ಮೂಲಕ ಆಚರಿಸಿದರು. ಪಟ್ಟಣದ ಕೋಟೆ ಪ್ರವೇಶ ದ್ವಾರದ ಬಳಿ, ಅಪ್ಪು ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರ ಇರಿಸಿ ವಿವಿಧ ಹೂವುಗಳಿಂದ ಅಲಂಕರಿಸಿದರು. ಭಾವಚಿತ್ರದ ಎದುರು ದೊಡ್ಡ ಗಾತ್ರದ ಕೇಕ್ ಕತ್ತರಿಸಿ ಜೈಕಾರ ಕೂಗಿ ಸಾರ್ವಜನಿಕರಿಗೆ ಹಂಚುವ ಮೂಲಕ ಪುನೀತ್ ರನ್ನು ಸ್ಮರಿಸಿದರು.
ಹುಟ್ಟು ಹಬ್ಬಕ್ಕೆ ಆಗಮಿಸಿದ ಅಭಿಮಾನಿಗಳು ಹಾಗೂ ಇತರ ಪ್ರಯಾಣಿಕರಿಗೆ ಸಿಹಿ ಹಂಚಿದರು. ಕೇಸರಿ ಬಾತು, ವೆಜಿಟೆರಿಯನ್ ಪಲಾವ್ ಜೊತೆಗೆ ಕೇಕ್ ನೀಡಿ ಉಪಚರಿಸಿದರು. ಇತ್ತೀಚೆಗೆ ಅಕಾಲಿಕ ಮರಣಕ್ಕೆ ತುತ್ತಾಗಿದ್ದ ಪುನೀತ್ ಅಭಿಮಾನಿಯೊಬ್ಬರ ಭಾವಚಿತ್ರ ಇರಿಸಿ ನಮಿಸಿದರು.ಪುರಸಭೆ ಮಾಜಿ ಸದಸ್ಯ ಜಯರಾಂ, ಅಭಿಮಾನಿಗಳಾದ ಯೋಗೇಶ್, ವಿಜಿಕುಮಾರ್, ನಂದೀಶ್, ಸುಧಾಕರ್, ಪ್ರತಾಪ್, ನಿಂಗಪ್ಪ, ಡಿ.ಎಂ ರವಿ, ಶಿವಸ್ವಾಮಿ ಎನ್, ಬಾಲು, ಜಗಪ್ಪ, ಕಿಟ್ಟಿ ನಾರಾಯಣ, ದೇವರಾಜು ಗೌಡಹಳ್ಳಿ, ಟೆಂಪೋ ಕುಮಾರ್, ಕೇಬಲ್ ಶಿವು, ರುಕ್ಮಾಂಗದ, ರವಿಕುಮಾರ್ ಸೇರಿದಂತೆ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.
ಪಟ್ಟಣ ಮಾತ್ರವಲ್ಲದೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಪ್ಪು ಅಭಿಮಾನಿಗಳು ಅವರ ಹುಟ್ಟುಹಬ್ಬ ಆಚರಿಸಿ ಅನ್ನ ಸಂತರ್ಪಣೆ ಕಾರ್ಯ ನಡೆಸಿದರು.