ಡಾ.ವಿಷ್ಣುವರ್ಧನ್ ಸಮಾಧಿ ಧ್ವಂಸಕ್ಕೆ ಖಂಡನೆ: ಅಭಿಮಾನಿಗಳಿಂದ ಪ್ರತಿಭಟನೆ

| Published : Aug 15 2025, 01:00 AM IST

ಡಾ.ವಿಷ್ಣುವರ್ಧನ್ ಸಮಾಧಿ ಧ್ವಂಸಕ್ಕೆ ಖಂಡನೆ: ಅಭಿಮಾನಿಗಳಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ವಿಷ್ಟುವರ್ಧನ್ ಅವರು ಕನ್ನಡ ಮೇರುನಟರು. ಹಲವು ವರ್ಷಗಳ ಕಾಲ ಕನ್ನಡ ಭಾಷೆ ಚಿತ್ರಗಳಲ್ಲಿ ನಟಿಸಿ ಭಾಷೆ ಬೆಳೆವಣಿಗೆಗೆ ಕಾರಣರಾಗಿದ್ದಾರೆ. ಇವರ ಜೀವಿತ ಅವಧಿಯಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಬಾರದ ಹಾಗೆ ಮಾದರಿ ಜೀವನ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ಹಿರಿಯ ನಟ ಡಾ.ವಿಷ್ಟುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ಧ್ವಂಸ ಮಾಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ವಿಷ್ಟು ಸೇನಾ ಸಮಿತಿ, ವಿಷ್ಣುವರ್ಧನ್ ಅಭಿಮಾನಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನೆರಸಿದರು.

ಪಟ್ಟಣದ ಹಿರೇಮರಳಿ ವೃತ್ತದಲ್ಲಿ ವಿಷ್ಣುಸೇನಾ ಸಮಿತಿ ಜಿಲ್ಲಾಧ್ಯಕ್ಷ ವಿಷ್ಣುವಿಠಲ್ ನೇತೃತ್ವದಲ್ಲಿ ಸೇರಿದ ವಿಷ್ಣುವರ್ಧನ್ ಅಭಿಮಾನಿಗಳು ನಂಕಪ ಡಾ.ರಾಜ್‌ಕುಮಾರ್ ವೃತ್ತದವರೆಗೆ ಮೆರವಣಿಗೆ ನಡೆಸಿ ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು. ಬಳಿಕ ತಹಸೀಲ್ದಾರ್ ಕಚೇರಿವರೆಗೆ ತೆರಳಿ ತಹಸೀಲ್ದಾರ್ ಸಂತೋಷ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಡಾ.ವಿಷ್ಟುವರ್ಧನ್ ಅವರು ಕನ್ನಡ ಮೇರುನಟರು. ಹಲವು ವರ್ಷಗಳ ಕಾಲ ಕನ್ನಡ ಭಾಷೆ ಚಿತ್ರಗಳಲ್ಲಿ ನಟಿಸಿ ಭಾಷೆ ಬೆಳೆವಣಿಗೆಗೆ ಕಾರಣರಾಗಿದ್ದಾರೆ. ಇವರ ಜೀವಿತ ಅವಧಿಯಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಬಾರದ ಹಾಗೆ ಮಾದರಿ ಜೀವನ ನಡೆಸಿದ್ದಾರೆ. ಅಂತಹ ನಟ ನಿಧನ ಹೊಂದಿಗಾಹ ಅಂಗಿನ ಸರ್ಕಾರ ಅವರ ಅಂತ್ಯಸಂಸ್ಕಾರವನ್ನು ಅಭಿಮಾನ್ ಸ್ಟುಡಿಯೋದಲ್ಲಿ ನಡೆಸಿ, ಅಲ್ಲಿಯೇ ಸಮಾಧಿ ನಿರ್ಮಾಣ ಮಾಡಿದ್ದರು.

ಈಗ ಅವರ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸುವ ಮೂಲಕ ವಿಷ್ಣುವರ್ಧನ್ ಅವರಿಗೆ ಅವಮಾನ ಮಾಡಿದ್ದಾರೆ. ಘಟನೆಯಿಂದ ಕೋಟ್ಯಂತರ ಅಭಿಮಾನಿಗಳಿಗೆ ನೋವುಂಟಾಗಿದೆ ಎಂದು ಕಿಡಿಕಾರಿದರು.

ಸರ್ಕಾರ ಇದರ ಬಗ್ಗೆ ಇಚ್ಚಾಶಕ್ತಿ ವಹಿಸಿದ್ದರೆ ಈ ರೀತಿಯ ಸಮಸ್ಯೆ ಉಂಟಾಗುತ್ತಿರಲಿಲ್ಲ. ಆದ್ದರಿಂದ ಸರ್ಕಾರ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆ ಹರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. ಜತೆಗೆ ವಿಷ್ಣುವರ್ಧನ್ ಅವರ ಸಮಾಧಿಯನ್ನು ಪುನರ್ ನಿರ್ಮಾಣ ಮಾಡಬೇಕು. ಜತೆಗೆ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿಷ್ಣುಸೇನಾ ಸಮಿತಿ ಜಿಲ್ಲಾಧ್ಯಕ್ಷ ವಿಷ್ಣುವಿಠಲ್, ಶಾಂತಿಕುಮಾರ್, ಶ್ರೀರಂಗಪಟ್ಟಣ ಕಲಂದರ್, ರಮೇಶ್, ಆಟೋ ಯೋಗೇಶ್, ಎಚ್.ಎನ್.ಮಂಜುನಾಥ್, ಚಿಕ್ಕಾಡೆ ಚೇತನ್, ಆನಂದ್ ಮಾಣಿಕ್ಯ, ಅನಿಲ್, ಉಪೇಂದ್ರ, ರಂಗನಾಥ್, ಅಭಿಲಾಷ್, ವೆಂಕಟೇಶ್, ಆನಂದ್, ಸುನಿಲ್, ಗುಣ, ಗುರು, ಪ್ರಸನ್ನ, ಗಿರೀಶ್, ಕಿರಣ್, ಸುನೀಲ್ ಕುಮಾರ್, ಧರ್ಮರಾಜು, ಬೊಮ್ಮರಾಜು, ವಿ.ಕೃಷ್ಣ, ಶಿವಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.