ಡಾ.ಪ್ರಭಾ ಜನ್ಮದಿನ: ನಾಲೆ ಹೂಳೆತ್ತಿದ ಅಭಿಮಾನಿಗಳು

| Published : Mar 15 2025, 01:00 AM IST

ಸಾರಾಂಶ

ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ತಮ್ಮ ಜನ್ಮದಿನ ಹೆಸರಲ್ಲಿ ದುಂದು ವೆಚ್ಚ ಮಾಡದಂತೆ ಮನವಿ ಮಾಡಿದ್ದರು. ಅದರಂತೆ ಸಂಸದರ ಕರೆಗೆ ಓಗೊಟ್ಟ ಅಭಿಮಾನಿಗಳು, ಬೆಂಬಲಿಗರು ಗುರುವಾರ ಜನ್ಮದಿನಾಚರಣೆಯ ಹಣವನ್ನು ನಾಲೆ ಹೂಳೆತ್ತುವ ಕಾಮಗಾರಿಗೆ ಬಳಸಿ, ಇತರರಿಗೂ ಪ್ರೇರಣೆಯಾದರು.

- ಸಂಸದರ ಸಲಹೆಯಂತೆ ದುಂದುವೆಚ್ಚ ಕೈಬಿಟ್ಟು ಕಾಂಗ್ರೆಸ್‌ನಿಂದ ಜನಪರ ಸೇವೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ತಮ್ಮ ಜನ್ಮದಿನ ಹೆಸರಲ್ಲಿ ದುಂದು ವೆಚ್ಚ ಮಾಡದಂತೆ ಮನವಿ ಮಾಡಿದ್ದರು. ಅದರಂತೆ ಸಂಸದರ ಕರೆಗೆ ಓಗೊಟ್ಟ ಅಭಿಮಾನಿಗಳು, ಬೆಂಬಲಿಗರು ಗುರುವಾರ ಜನ್ಮದಿನಾಚರಣೆಯ ಹಣವನ್ನು ನಾಲೆ ಹೂಳೆತ್ತುವ ಕಾಮಗಾರಿಗೆ ಬಳಸಿ, ಇತರರಿಗೂ ಪ್ರೇರಣೆಯಾದರು.

ಹರಿಹರ ತಾಲೂಕಿನ ದೇವರ ಬೆಳಕೆರೆ, ಕಡ್ಲೆಗುಂದಿ, ಸಲಗನಹಳ್ಳಿ, ಬನ್ನಿಕೋಡು, ಶಿವನಹಳ್ಳಿ, ಬೆಳ್ಳೂಡಿ, ಹನಗವಾಡಿ ಮಾರ್ಗವಾಗಿ ಹರಿಹರ ತಲುಪುವ ಭದ್ರಾ ನಾಲೆಯಲ್ಲಿ ಅಪಾರ ಹೂಳು ತುಂಬಿತ್ತು. ಈ ಹಿನ್ನೆಲೆ ಹೂಳೆತ್ತುವ ಕಾಮಗಾರಿ ನಡೆಸುವ ಮೂಲಕ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಕಾಂಗ್ರೆಸ್ ಪಕ್ಷದ ಹರಿಹರ ತಾಲೂಕು ಮುಖಂಡರಾದ ಬೆಳ್ಳೂಡಿ ಬಸವರಾಜ, ಗುತ್ತೂರು ಹಾಲೇಶ ಗೌಡ ಇತರರು ದೇವರ ಬೆಳಕೆರೆಯ ಸಿದ್ದವೀರಪ್ಪ ನಾಲೆಯ ಬಲದಂಡೆ ನಾಲೆ ಹೂಳು ತೆಗೆಯುವ ಕಾರ್ಯಕ್ಕೆ ಗುರುವಾರ ಚಾಲನೆ ನೀಡಿದ್ದಾರೆ. ಬೆಳಗಿನಿಂದಲೇ ಜೆಸಿಬಿ ಯಂತ್ರ ಬಳಸಿ, ನಾಲೆಯ ಹೂಳೆತ್ತುವ ಕಾರ್ಯವನ್ನು ಭರದಿಂದಲೈ ಕೈಗೊಳ್ಳಲಾಗಿದೆ.

ದಾವಣಗೆರೆ ಪ್ರಥಮ ಮಹಿಳಾ ಸಂಸದೆ ಆಗಿರುವ ಡಾ.ಪ್ರಭಾ ಮಲ್ಲಿಕಾರ್ಜುನ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ನಮಗೆಲ್ಲಾ ಅವರು ಮಾದರಿಯಾಗಿದ್ದಾರೆ. ತಮ್ಮ ಜನ್ಮದಿನ ಸಂಭ್ರಮಕ್ಕಾಗಿ ದುಂದುವೆಚ್ಚ ಮಾಡದಂತೆ, ಜನಪರ ಕಾರ್ಯಗಳನ್ನು ಕೈಗೊಳ್ಳುವಂತೆ ಸಂದೇಶ ನೀಡಿದ್ದರು. ಸಂಸದರ ಸರಳತೆ ನಮಗೂ ಪ್ರೇರಣೆಯಾಗಿದೆ. ಹಾಗಾಗಿ ಜನರಿಗೆ ಒಳ್ಳೆಯ ಸೇವೆ ಉದ್ದೇಶದಿಂದ, ನೀರಿನ ಸಮಸ್ಯೆ ಬಾರದಂತೆ ಭದ್ರಾ ನಾಲೆ ಹೂಳು ತೆಗೆಸುವ ಕಾರ್ಯ ಕೈಗೊಂಡಿದ್ದೇವೆ ಎಂದು ಮುಖಂಡರು ತಿಳಿಸಿದರು.

ಈ ಸಂದರ್ಭ ಸತ್ಯಕುಮಾರ್ ನಂದಿಗಾವಿ, ಬಿ.ಜಿ. ಉಜ್ಜಪ್ಪ, ಹನುಮಂತಪ್ಪ ಶಿವನಹಳ್ಳಿ, ಉಮೇಶ ಸಾರಥಿ, ಯುವರಾಜ ಬೆಳ್ಳೂಡಿ, ಹೊಸಳ್ಳಿ ಹನುಮಂತಗೌಡ, ಟಿ.ಜೆ ಮುರುಗೇಶಪ್ಪ, ಎಇಇ ಕೃಷ್ಣಮೂರ್ತಿ, ಶಿವನಹಳ್ಳಿ ಬಿ.ಪಿ.ಆಂಜನೇಯ, ರಾಮನಗೌಡ, ಗ್ರಾಮಸ್ಥರು ಇದ್ದರು.

- - - -13ಕೆಡಿವಿಜಿ5, 6.ಜೆಪಿಜಿ:

ಹರಿಹರ ತಾಲೂಕಿನಲ್ಲಿ ಗುರುವಾರ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಜನ್ಮದಿನ ಹಿನ್ನೆಲೆ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ, ಜನಪರ ಸೇವೆ ದೃಷ್ಟಿಯಿಂದ ಭದ್ರಾ ನಾಲೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.