ಸರ್ಕಾರಿ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ನಡೆದ ಪತ್ರಾಂಕಿತ ವ್ಯವಸ್ಥಾಪಕ ಸತ್ಯಮೂರ್ತಿ ಕೆ.ಟಿ. ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಇಲಾಖೆಯಿಂದ ನಿಯೋಜಿಸಿದ ನಿಯೋಜಿಸದ ಎರಡೂ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದ ಸತ್ಯಮೂರ್ತಿ ಅವರು ಕಾಲೇಜಿನ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ ಎಂದರು. ವೃತ್ತಿ ನಿವೃತ್ತಿ ವೇಳೆ ಅಭಿಮಾನ ಸ್ವೀಕರಿಸಿ ಮಾತನಾಡಿದ ಸತ್ಯಮೂರ್ತಿ ಕೆ.ಟಿ. ಅವರು, ಎಲ್ಲರ ಸಹಕಾರದೊಂದಿಗೆ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಿದ್ದರಿಂದಲೇ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಕುಟುಂಬದ ಬೆಂಬಲದೊಂದಿಗೆ ಒಳ್ಳೆ ಕೆಲಸ ಮಾಡಿದ ಆತೃತೃಪ್ತಿಯಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದ ಅವರು ವೃತ್ತಿ ಬದುಕಿನುದ್ದಕ್ಕೂ ಸಹಕರಿಸಿದ ಹಲವರನ್ನು ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಆತ್ಮೀಯತೆ ಜತೆಗೆ ನಿಷ್ಟುರವಾದಿ ಕಾರ್ಯಶೈಲಿಯನ್ನು ಮೈಗೂಡಿಸಿಕೊಂಡ ಕೆ. ಟಿ. ಸತ್ಯಮೂರ್ತಿಯವರ ವೃತ್ತಿಪರತೆ ಅತ್ಯಂತ ಶ್ಲಾಘನೀಯ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಜಂಟಿ ನಿರ್ದೇಶಕರಾದ ಲಕ್ಷ್ಮೀಪತಿ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ನಡೆದ ಪತ್ರಾಂಕಿತ ವ್ಯವಸ್ಥಾಪಕ ಸತ್ಯಮೂರ್ತಿ ಕೆ.ಟಿ. ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಇಲಾಖೆಯಿಂದ ನಿಯೋಜಿಸಿದ ನಿಯೋಜಿಸದ ಎರಡೂ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದ ಸತ್ಯಮೂರ್ತಿ ಅವರು ಕಾಲೇಜಿನ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ ಎಂದರು. ವೃತ್ತಿ ನಿವೃತ್ತಿ ವೇಳೆ ಅಭಿಮಾನ ಸ್ವೀಕರಿಸಿ ಮಾತನಾಡಿದ ಸತ್ಯಮೂರ್ತಿ ಕೆ.ಟಿ. ಅವರು, ಎಲ್ಲರ ಸಹಕಾರದೊಂದಿಗೆ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಿದ್ದರಿಂದಲೇ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಕುಟುಂಬದ ಬೆಂಬಲದೊಂದಿಗೆ ಒಳ್ಳೆ ಕೆಲಸ ಮಾಡಿದ ಆತೃತೃಪ್ತಿಯಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದ ಅವರು ವೃತ್ತಿ ಬದುಕಿನುದ್ದಕ್ಕೂ ಸಹಕರಿಸಿದ ಹಲವರನ್ನು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಿ. ಎಸ್. ರಾಜು ಅವರು, ಆಡಳಿತ ವರ್ಗದ ಮುಖ್ಯಸ್ಥರಾಗಿದ್ದ ಸತ್ಯಮೂರ್ತಿ ಅವರು ಪ್ರಾಂಶುಪಾಲರ ಬೆನ್ನೆಲುಬಾಗಿ ನಿರಂತರವಾಗಿ ಕೆಲಸ ಮಾಡಿದ್ದಾರೆ. ಸರ್ಕಾರಿ ಕಲಾ ಕಾಲೇಜಿನ ಬೆಳವಣಿಗೆಯ ಪ್ರತೀ ಹಂತದಲ್ಲೂ ಅವರ ನೇರ ಶ್ರಮವಿದೆ ಎಂದರು. ನಿವೃತ್ತಿ ಜೀವನ ಸಮಾಜಮುಖಿಯಾಗಿರಲಿ ಎಂದು ಹಾರೈಸಿದರು.

ಸತತ ೩೯ ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ವಯೋನಿವೃತ್ತಿ ಹೊಂದಿದ ಸತ್ಯಮೂರ್ತಿ ಕೆ.ಟಿ. ಅವರ ಬಗ್ಗೆ ಅಭಿಮಾನದಲ್ಲಿ ಮಾತನಾಡಿದ ಸಹೋದ್ಯೋಗಿಗಳು ಮತ್ತು ಒಡನಾಡಿಗಳ ಬೃಹತ್ ಬಳಗ ಸತ್ಯಮೂರ್ತಿ ಅವರ ಶಿಸ್ತಿನ ಕಾರ್ಯವೈಖರಿ ಮತ್ತು ಎಲ್ಲರನ್ನು ಒಳಗೊಳ್ಳುವ ಸ್ನೇಹಪರತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹವ್ಯಾಸಿ ಕಲಾವಿದ, ರಂಗ ಸಂಘಟಕರಾಗಿಯೂ ತೊಡಗಿಸಿಕೊಂಡಿರುವ ಇವರ ಜನಪರ ವ್ಯಕ್ತಿತ್ವದ ನಿದರ್ಶನ ಕಾರ್ಯಕ್ರಮದುದ್ದಕ್ಕೂ ಕಂಡು ಬಂದಿತು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಪ್ರಾಧ್ಯಾಪಕರು, ಆಡಳಿತ ವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.