ಪ್ರಾಂಶುಪಾಲ ರಂಗನಾಥ ಅವರಿಗೆ ಬೀಳ್ಕೊಡುಗೆ

| Published : Aug 06 2024, 12:37 AM IST

ಸಾರಾಂಶ

ನಿವೃತ್ತ ಪ್ರಾಂಶುಪಾಲ ರಂಗನಾಥ ಅವರಿಗೆ ಬೀಳ್ಕೊಡುಗೆ

ಕನ್ನಡಪ್ರಭ ವಾರ್ತೆ ಶಿರಾ ಶಿರಾ ಕೆ ಮಲ್ಲಣ್ಣ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ಎಚ್. ರಂಗನಾಥ್ ಅವರು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ. ಕಾಲೇಜಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಸೇವೆ ಸ್ಮರಣೀಯ ಎಂದು ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಪಿ.ಎಸ್.ತ್ಯಾಗರಾಜಪ್ಪ ಹೇಳಿದರು. ಅವರು ನಗರದ ಕೆ ಮಲ್ಲಣ್ಣ ಸ್ಮಾರಕ ರಂಗನಾಥ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 32 ವರ್ಷಗಳ ಕಾಲ ರಸಾಯನಶಾಸ್ತ್ರ ಉಪನ್ಯಾಸಕರಾಗಿ ಒಂದುವರೆ ವರ್ಷಗಳ ಕಾಲ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಪಡೆದ ಎಸ್. ಎಚ್ . ರಂಗನಾಥ್ ಅವರಿಗೆ ಕುಂಚಿಟಿಗರ ಸಂಘ ಹಾಗೂ ಕಾಲೇಜು ಸಿಬ್ಬಂದಿ ವರ್ಗದ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು. ರಂಗನಾಥ್ ಅವರು ಪ್ರಾಂಶುಪಾಲರ ಅವಧಿ ಅತ್ಯಂತ ಪ್ರಶಂಸನೀಯ. ಇವರ ಕಾಲದಲ್ಲಿ ಕಾಲೇಜಿಗೆ ಆರ್ ಆರ್ ಅನುಮತಿ ಪಡೆದಿದೆ ಹಾಗೂ ಅನೇಕ ಅಭಿವೃದ್ಧಿ ಕಾರ್ಯಗಳು ಇವರ ಅವಧಿಯಲ್ಲಿ ಸಂಪೂರ್ಣಗೊಂಡು ಉತ್ತಮ ಆಡಳಿತ ನೀಡಿದ್ದಾರೆ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಎಸ್.ಎಚ್.ರಂಗನಾಥ್ ಅವರು ಕಾಲೇಜಿನಲ್ಲಿ ನನ್ನ ಸೇವಾ ಅವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ್ದೇನೆ. ನನ್ನ ಸೇವೆಯನ್ನು ಗುರುತಿಸಿ ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಬೀಳ್ಕೊಡುಗೆ ನೀಡುತ್ತಿರುವುದು ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಕುಂಚಿಟಿಗರ ಸಂಘದ ಕಾರ್ಯದರ್ಶಿ ಗುಳಿಗೇನಹಳ್ಳಿ ಆರ್.ನಾಗರಾಜ್, ಆಡಳಿತ ಅಧಿಕಾರಿ ಡಾ.ಪಿ ಎಚ್ ಮಹೇಂದ್ರಪ್ಪ, ಖಜಾಂಚಿ ಆರ್ ಉಗ್ರೇಶ್, ಉಪಾಧ್ಯಕ್ಷ ಬಾಂಬೆ ರಾಜಣ್ಣ, ಬಾಲಚಂದ್ರ. ಮಾಜಿ ಕಾರ್ಯದರ್ಶಿ ಲಿಂಗಪ್ಪ. ಹಿರಿಯ ವೈದ್ಯ ಡಾ.ರಾಮಕೃಷ್ಣ, ಕುಂಚಿಟಿಗರ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಎಸ್ ಎಲ್ ಗೋವಿಂದರಾಜು, ಡಿಸಿ ಅಶೋಕ್, ಪ್ರದೀಪ್, ರಂಗನಾಥ್, ಜುಂಜಣ್ಣ, ಮಂಜಣ್ಣ, ಕಾಂತರಾಜು, ಮಂಜುಶ್ರೀ ಶಾಲೆಯ ಮಹಾಲಿಂಗಪ್ಪ, ವೈದ್ಯರಾದ ಡಾ.ಮಾಲಿನಿ ಮಂಜುನಾಥ್, ಡಾ.ಶ್ರೀದೇವಿ ವೆಂಕಟಾಚಲ, ಪ್ರಾಂಶುಪಾಲ, ಆರ್.ಎಚ್.ರಂಗ ರಾವ್, ಉಪನ್ಯಾಸಕರಾದ ಡಿ ರವಿಕುಮಾರ್, ಸಿವಿ ವೆಂಕಟಾಚಲ ಸೇರಿದಂತೆ ಹಲವರು ಹಾಜರಿದ್ದರು.