ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ಜವರೇಗೌಡರಿಗೆ ಬೀಳ್ಕೊಡುಗೆ

| Published : Sep 01 2024, 01:59 AM IST

ಸಾರಾಂಶ

ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ಜವರೇಗೌಡ ಭಾರತೀ ಪದವಿ ಪೂರ್ವ ಕಾಲೇಜಿನಲ್ಲೂ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸಿದ್ದಾರೆ. ನಂತರ ಪದವಿ ಕಾಲೇಜಿನಲ್ಲಿ ಉತ್ತಮ ಪ್ರಾಧ್ಯಾಪಕರೆಂದು ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ನಿವೃತ್ತಿ ಜೀವನ ಸುಖಕರವಾಗಿರಲಿ.

ಕನ್ನಡಪ್ರಭ ವಾರ್ತೆ ಭಾರತೀನಗರ

ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ಜವರೇಗೌಡರನ್ನು ಅಭಿನಂದಿಸಿ ಬೀಳ್ಕೊಡುಗೆ ನೀಡಲಾಯಿತು.

ಭಾರತೀ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಶಾಸಕ ಮಧು ಜಿ.ಮಾದೇಗೌಡ ಪ್ರೊ.ಎಸ್.ಜವರೇಗೌಡರನ್ನು ಅಭಿನಂದಿಸಿ ಮಾತನಾಡಿ, ತಮ್ಮ ಸೇವಾವಧಿಯನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಜವರೇಗೌಡರು ಕೆಲಸ ನಿರ್ವಹಿಸಿದ್ದಾರೆ. ಜೊತೆಗೆ ಈ ಸಂಸ್ಥೆಗೆ ಎಲ್ಲರಿಗೂ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿದ್ದರು ಎಂದರು.

ಭಾರತೀ ಪದವಿ ಪೂರ್ವ ಕಾಲೇಜಿನಲ್ಲೂ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸಿದ್ದಾರೆ. ನಂತರ ಪದವಿ ಕಾಲೇಜಿನಲ್ಲಿ ಉತ್ತಮ ಪ್ರಾಧ್ಯಾಪಕರೆಂದು ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.

ಪ್ರೊ.ಎಸ್.ಜವರೇಗೌಡ ಮಾತನಾಡಿ, ನನ್ನ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ದಿ.ಜಿ.ಮಾದೇಗೌಡರು ಕಾರಣೀಭೂತರಾಗಿದ್ದಾರೆ. ಅವರನ್ನು ನನ್ನ ಉಸಿರು ಇರುವವರೆಗೂ ಸ್ಮರಿಸುತ್ತೇನೆ. ಸಂಸ್ಥೆ ಅಧ್ಯಕ್ಷ ಮಧು ಜಿ.ಮಾದೇಗೌಡರು ಸಹ ಸಾಕಷ್ಟು ಬೆಂಬಲ, ಪ್ರೋತ್ಸಾಹವನ್ನು ನೀಡಿದರು ಎಂದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ವೆಂಕಟರೆಡ್ಡಿ ಮಾತನಾಡಿದರು. ಇದೇ ವೇಳೆ ಪ್ರೊ.ಎಸ್.ಜವರೇಗೌಡ ಹಾಗೂ ಪತ್ನಿ ಎನ್.ಎಲ್.ಗೀತರನ್ನು ಅಧ್ಯಾಪಕರ ಸಂಘ ಮತ್ತು ಕಾಲೇಜಿನ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ನಂತರ ನಿವೃತ್ತ ಪ್ರಾಂಶುಪಾಲರು, ಉಪನ್ಯಾಸಕರು, ಪ್ರಾಧ್ಯಾಪಕರು, ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ಅಧ್ಯಾಪಕರ -ಅಧ್ಯಾಪಕೇತರರು ಪ್ರೊ.ಎಸ್.ಜವರೇಗೌಡರನ್ನು ಅಭಿನಂದಿಸಿ ಗೌರವಿಸಿದರು.

ವೇದಿಕೆಯಲ್ಲಿ ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ, ಟ್ರಸ್ಟ್‌ನ ಸದಸ್ಯ ಮುದ್ದಯ್ಯ, ಅಧ್ಯಾಪಕರ ಸಂಘದ ಕಾರ್ಯದರ್ಶಿ ಎ.ಎಸ್.ಸಂಜೀವ್, ಬಿ.ಕೆ.ಕೃಷ್ಣ, ಎಂ.ಮಮತ, ಪ್ರೊ.ಬಿ.ಎಸ್.ಬೋರೇಗೌಡ ಸೇರಿದಂತೆ ಹಲರಿದ್ದರು.ಕಲಾವಿದರಿಂದ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

ಮಂಡ್ಯ:ಮೈಸೂರು ರಂಗಾಯಣವು ರಂಗಶಿಕ್ಷಣ, ರಂಗತರಬೇತಿ. ನಾಟಕಗಳ ಸಿದ್ಧತೆ, ಪ್ರದರ್ಶನ, ರಂಗಶಿಬಿರಗಳು ಹೀಗೆ ಸಂಪೂರ್ಣ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ರಂಗಾಯಣವು ಸಿದ್ಧಪಡಿಸುವ ನಾಟಕಗಳಿಗೆ ಹಾಗೂ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರಂಗಭೂಮಿಯಲ್ಲಿ ಅನುಭವವಿರುವ ಅಸಕ್ತ ಕಲಾವಿದರು ಅರ್ಜಿ ಸಲ್ಲಿಸಬಹುದು.

ರಾಷ್ಟ್ರೀಯ ನಾಟಕ ಶಾಲೆ ಪದವಿ/ರಾಜ್ಯದ ಯಾವುದೇ ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ಪದವಿ/ಡಿಪ್ಲೊಮೋ/ರಾಜ್ಯ ಸರ್ಕಾರ ಅಂಗೀಕೃತ ವಿಶ್ವವಿದ್ಯಾಲಯದಿಂದ ನಾಟಕ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.ರಂಗಭೂಮಿ ಅನುಭವ ಅಪೇಕ್ಷಣೀಯ, ಅರ್ಹತೆಯುಳ್ಳ 22 ರಿಂದ 35 ವರ್ಷದೊಳಗಿನ ವಯೋಮಿತಿಯುಳ್ಳ ಆಸಕ್ತ ಕಲಾವಿದರು ರಂಗಾಯಣದ ನಿಯಮಾನುಸಾರ ತಾತ್ಕಾಲಕವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಈ ಹಿಂದೆ ನೀಡಿದ ಪ್ರಕಟಣೆಯಲ್ಲಿ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಆಗಸ್ಟ್ 28ನ್ನು ನಿಗಧಿಗೊಳಿಸಲಾಗಿತ್ತು. ಪ್ರಸ್ತುತ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 5 ರವರೆಗೆ ವಿಸ್ತರಿಸಲಾಗಿದೆ.ಆಸಕ್ತರು ಅರ್ಜಿಯನ್ನು rangayanamysore.karnataka.gov.in pod ಮೂಲಕ ಸಲ್ಲಿಸಿ ಡೌನ್‌ಲೋಡ್ ಮಾಡಿದ ಪ್ರತಿಯನ್ನು ಮೈಸೂರು ರಂಗಾಯಣ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು ಹಾಗೂ ಸೆಪ್ಟೆಂಬರ್ 10 ರಂದು ಸಂದರ್ಶನ ನಡೆಸಲಾಗುವುದು ಎಂದು ಮಂಡ್ಯ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.