ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ನಿವೃತ್ತಿ ಹೊಂದಿದ ಕೆ.ಆರ್.ರಾಣಿ ಅವರನ್ನು ಶಾಲೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಬಿ.ಎನ್.ಪುಷ್ಪ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕಿ, ನಂತರ ಮುಖ್ಯ ಶಿಕ್ಷಕಿಯಾಗಿ ಬಡ್ತಿ ಹೊಂದಿ ಒಟ್ಟು 39 ವರ್ಷಗಳ ಕಾಲ ಸುದೀರ್ಘ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಳ್ಳುತ್ತಿರುವ ಮುಖ್ಯ ಶಿಕ್ಷಕಿ ರಾಣಿ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ವಿದ್ಯಾರ್ಥಿ ವೃಂದ, ಪೋಷಕರು ಹಾಗೂ
ಅಧಿಕಾರಿ ವರ್ಗದ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.ಸನ್ಮಾನಿತರಾದ ಮುಖ್ಯ ಶಿಕ್ಷಕಿ ಕೆ.ಆರ್.ರಾಣಿ ಮಾತನಾಡಿ, ಅಪಾರ ಜ್ಞಾನ ಮತ್ತು ಅನುಭವ ನೀಡಿರುವ ಶಿಕ್ಷಣ ಇಲಾಖೆ ಅಗಾಧವಾದುದ್ದು. ಈ ಇಲಾಖೆಯಿಂದ ತಾನು ಹೆಚ್ಚು ಕಲಿಯುವ ಮೂಲಕ ಜ್ಞಾನ ವೃದ್ಧಿಸಿಕೊಂಡು ಇಲಾಖೆಯ ಪ್ರಗತಿಗೆ ಶ್ರಮಿಸಿದ್ದು ಮತ್ತು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ತನಗೆ ತನ್ನ ವೃತ್ತಿ ಜೀವನ ತೃಪ್ತಿ ತಂದಿದೆ ಎಂದರು.ಕೂಡಿಗೆ ಸಿ.ಆರ್.ಪಿ,.ಕೆ.ಶಾಂತಕುಮಾರ್ ಮಾತನಾಡಿ, ರಾಣಿ ಅವರ ಕಾರ್ಯತತ್ಪರತೆ ಅನುಕರಣೀಯ ಎಂದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್,ಗೋಣಿಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್.ವಿ.ಸಂತೋಷ್, ಹಿರಿಯ ಶಿಕ್ಷಕಿ ಎಂ.ಎಂ.ಭಾರತಿ ಹಾಗೂ ಇತರೆ ಶಿಕ್ಷಕಿಯರು ಮಾತನಾಡಿದರು.
ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯರಾದ ವಿಜಯಲಕ್ಷ್ಮಿ, ಎಚ್.ಎಂ.ವೀಣಾ,ಶಾಲೆಯ ಶಿಕ್ಷಕಿಯರಾದ ಬಿ.ಬಿ.ಕುಂಞಮ್ಮ, ವಿ.ಪಿ.ಲತಾ, ಎಚ್.ಎಂ.ನೀಲಮ್ಮ,
ಎಂ.ಬಿ.ಜಾನಕಿ,ಕೆ.ಭಾಗ್ಯಮ್ಮ, ಪಿ.ಪಿ.ಭವ್ಯ, ಕೆ.ಎ.ಸಿಂಧೂರಾಣಿ, ಎನ್.ಡಿ.ಸೋಮಶೇಖರ್ ಇತರರು ಇದ್ದರು.