ಸಾರಾಂಶ
ಸಂಪಾಜೆ ಗ್ರಾಮದವರಾದ ದುಗ್ಗಳ ಶ್ರೀಧರ ಪೊಲೀಸ್ ಇಲಾಖೆಯಲ್ಲಿ 34 ವರ್ಷಗಳ ಕರ್ತವ್ಯ ನಿರ್ವಹಿಸಿ ನಿವೃತ್ತರಾದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕ್ರೈಂ ಬ್ರಾಂಚಿನ ಠಾಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದುಗ್ಗಳ ಶ್ರೀಧರ ( ಬಾಚಿ ಗದ್ದೆ) ಜು. 31ಕ್ಕೆ ಕರ್ತವ್ಯದಿಂದ ನಿವೃತ್ತಿ ಹೊಂದಿದರು. ಸಂಪಾಜೆ ಗ್ರಾಮದವರಾದ ದುಗ್ಗಳ ಶ್ರೀಧರ ಪೊಲೀಸ್ ಇಲಾಖೆಯಲ್ಲಿ 34 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾದರು.ಇವರು 1981ರಿಂದ 1991 ರ ವರೆಗೆ ದೂರವಾಣಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಬಳಿಕ ಪೊಲೀಸ್ ಇಲಾಖೆ ಸೇರಿ ವಿರಾಜಪೇಟೆಯ ಟೌನ್ ಸ್ಟೇಷನ್ ನಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬಳಿಕ ನಾಪೋಕ್ಲು ಪೋಲಿಸ್ ಠಾಣೆಯಲ್ಲಿ ಆರು ವರ್ಷ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರು ವರ್ಷ ಹೆಡ್ ಕಾನ್ಸ್ಟೇಬಲ್ ಆಗಿ ಮಡಿಕೇರಿಯ ಗ್ರಾಮೀಣ ಸ್ಟೇಷನ್ ನಲ್ಲಿ ಆರು ವರ್ಷ ಕಾರ್ಯ ನಿರ್ವಸಿದರು. ಮಡಿಕೇರಿಯಿಂದ ಠಾಣಾಧಿಕಾರಿಯಾಗಿ ಪದೋನ್ನತಿ ಹೊಂದಿ ನಾಪೋಕ್ಲು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದರು.
ಇವರು ದುಗ್ಗಳ ಪದ್ಮಣ್ಣ ಮತ್ತು ಚೋಮಕ್ಕ ದಂಪತಿ ಪುತ್ರ. ನಿವೃತ್ತಿಯ ಸಂದರ್ಭದಲ್ಲಿ ಮಡಿಕೇರಿಯ ಎಸ್ಪಿ ಕಚೇರಿಯಲ್ಲಿ ಎಸ್ಪಿ ರಾಮರಾಜನ್ ಅವರು ದುಗ್ಗಳ ಶ್ರೀಧರ, ಪತ್ನಿ ಪಾರ್ವತಿ ದಂಪತಿಯನ್ನು ಸನ್ಮಾನಿಸಿ ಬೀಳ್ಕೊಟ್ಟರು.