ಕೇಂದ್ರ ರೇಷ್ಮೆ ಸಂಶೋಧನಾ ಕೇಂದ್ರದಲ್ಲಿ ವಯೋನಿವೃತ್ತಿ ಹೊಂದಿದ ಸುಂದ್ರಪ್ಪಗೆ ಬೀಳ್ಕೊಡುಗೆ

| Published : Jun 20 2024, 01:01 AM IST

ಕೇಂದ್ರ ರೇಷ್ಮೆ ಸಂಶೋಧನಾ ಕೇಂದ್ರದಲ್ಲಿ ವಯೋನಿವೃತ್ತಿ ಹೊಂದಿದ ಸುಂದ್ರಪ್ಪಗೆ ಬೀಳ್ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ನಂಜನಗೂಡು ರಸ್ತೆಯಲ್ಲಿರುವ ರೇಷ್ಮೆ ಸಂಶೋಧನಾ ಕೇಂದ್ರದಲ್ಲಿ ನಿವೃತ್ತರಾದ ಸುಂದ್ರಪ್ಪ ಅವರನ್ನು ಕೇಂದ್ರದ ವಿಜ್ಞಾನಿ ಡಾ. ಸತೀಶ್ ಅವರು ಶಾಲು ಹೊದಿಸಿ, ಹಾರ ಹಾಕಿ ಫಲತಾಂಬೂಲ ನೀಡಿ, ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಕೇಂದ್ರ ರೇಷ್ಮೆ ಸಂಶೋಧನಾ ಕೇಂದ್ರದಲ್ಲಿ ಕಳೆದ ೩೩ ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದ ಸುಂದ್ರಪ್ಪ ಅವರನ್ನು ಕೇಂದ್ರದ ಅಧಿಕಾರಿಗಳು ಹಾಗೂ ನೌಕರರು ಮತ್ತು ಹಿತೈಷಿಗಳು ಅಭಿನಂದಿಸಿ ಬೀಳ್ಕೊಟ್ಟರು.

ನಗರದ ನಂಜನಗೂಡು ರಸ್ತೆಯಲ್ಲಿರುವ ರೇಷ್ಮೆ ಸಂಶೋಧನಾ ಕೇಂದ್ರದಲ್ಲಿ ನಿವೃತ್ತರಾದ ಸುಂದ್ರಪ್ಪ ಅವರನ್ನು ಕೇಂದ್ರದ ವಿಜ್ಞಾನಿ ಡಾ. ಸತೀಶ್ ಅವರು ಶಾಲು ಹೊದಿಸಿ, ಹಾರ ಹಾಕಿ ಫಲತಾಂಬೂಲ ನೀಡಿ, ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, ಆರ್‌ಎಸ್‌ಆರ್‌ಎಸ್ ಕೇಂದ್ರದಲ್ಲಿ ಕಳೆದ ೩೩ ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ಸುಂದ್ರಪ್ಪ ಅವರ ನಿವೃತ್ತ ಜೀವನ ಸುಖಕರವಾಗಿರಲಿ. ನಮ್ಮ ಇಲಾಖೆಯ ಉತ್ತಮ ಸೇವೆ ಸಲ್ಲಿಸುವ ಜತೆಗೆ ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿ ಕೇಂದ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಗವಂತ ಅವರಿಗೆ ಇನ್ನು ಹೆಚ್ಚಿನ ಆಯುಷ್ಯ ಆರೋಗ್ಯವನ್ನು ನೀಡಲಿ ಎಂದು ಪ್ರಾರ್ಥಿಸಿಕೊಂಡರು. ನಿವೃತ್ತ ನೌಕರರ ಸುಂದ್ರಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೇಂದ್ರೀಯ ರೇಷ್ಮೆ ಕೇಂದ್ರ ಕಳೆದ ೩೩ ವರ್ಷಗಳಿಂದ ನನಗೆ ಅನ್ನ ಕೊಟ್ಟಿದೆ. ಉತ್ತಮ ಸೇವೆ ಸಲ್ಲಿಸಲು ಇಲ್ಲಿನ ಅಧಿಕಾರಿಗಳು, ನೌಕರರು ಹಾಗೂ ಸಹದ್ಯೋಗಿಗಳು ಬೆಂಬಲ ನೀಡಿದ್ದಾರೆ. ಅವರೆಲ್ಲರಿಗೂ ನಾನು ಚಿರಋಣಿ ಎಂದು ಸುಂದ್ರಪ್ಪ ಭಾವುಕರಾದರು. ಇಲಾಖೆಯ ನಿವೃತ್ತರಾದ ಶಯನ, ರೇವಣ್ಣ, ನಾಗೇಶ್, ನೌಕರರಾದ ಪುಟ್ಟಸ್ವಾಮಿ, ರಾಜು, ಚನ್ನಪ್ಪ, ವೆಂಕಟೇಶ್, ಮಹದೇವಸ್ವಾಮಿ, ಜಯಮ್ಮ, ಗೀತಾ, ಭಾಗ್ಯಮ್ಮ, ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಜೆಎಸ್‌ಎಸ್ ಪಿಆರ್‌ಒ ಆರ್.ಎಂ. ಸ್ವಾಮಿ, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ನಂಜುಂಡಸ್ವಾಮಿ, ಪ್ರಾಧ್ಯಾಪಕ ಆಶೋಕ, ಈಶ್ವರಸ್ವಾಮಿ, ಸುಂದ್ರಪ್ಪ ಪುತ್ರ ಕಾರ್ತಿಕ್ ಇತರರು ಇದ್ದರು.