ಸಿಬ್ಬಂದಿ ಸಹಕಾರದಿಂದ ಸಿಎಂ ಪದಕ ಪಡೆಯಲು ಸಾಧ್ಯವಾಯಿತು

| Published : May 21 2025, 12:39 AM IST

ಸಾರಾಂಶ

ಸಿಬ್ಬಂದಿ ಕೊರತೆ ಇತ್ತು, ಕಚೇರಿ ಕೆಲಸ, ಫಿಲ್ಡ್ ವರ್ಕ್ ನ ಸಂಪೂರ್ಣ ಜವಾಬ್ದಾರಿ ನ್ನ ಮೇಲಿತ್ತು.

- ಉಪ ವಲಯ ಅರಣ್ಯಾಧಿಕಾರಿ ಎಸ್.ಎಂ. ಮಂಜುನಾಥ್ಕನ್ನಡಪ್ರಭ ವಾರ್ತೆ ಟಿ.ನರಸೀಪುರ

ಇಲಾಖೆಯ ಸಿಬ್ಬಂದಿ ವರ್ಗದವರ ಉತ್ತಮ ಸಹಕಾರದಿಂದ ಮುಖ್ಯಮಂತ್ರಿಗಳ ಪದಕ ಪಡೆಯಲು ಸಾಧ್ಯವಾಯಿತು ಎಂದು ಉಪ ವಲಯ ಅರಣ್ಯಾಧಿಕಾರಿ ಎಸ್.ಎಂ. ಮಂಜುನಾಥ್ ಹೇಳಿದರು

ಪಟ್ಟಣದ ಸಾಮಾಜಿಕ ವಲಯ ಅರಣ್ಯ ಇಲಾಖೆಯ ಕಚೇರಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವರ್ಗಾವಣೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಬೀಳ್ಕೊಡುಗೆ ಹಾಗೂ ಅಧಿಕಾರ ವಹಿಸಿಕೊಂಡ ಅಧಿಕಾರಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಇಲಾಖೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಟಿ.ನರಸೀಪುರ ಸಾಮಾಜಿಕ ವಲಯ ಅರಣ್ಯ ವಿಭಾಗಕ್ಕೆ ಬಂದು ಅಧಿಕಾರ ವಹಿಸಿಕೊಂಡಾಗ ಹೇಳಿಕೊಳ್ಳುವ ಸೌಲಭ್ಯಗಳಿರಲಿಲ್ಲ, ಸಿಬ್ಬಂದಿ ಕೊರತೆ ಇತ್ತು, ಕಚೇರಿ ಕೆಲಸ, ಫಿಲ್ಡ್ ವರ್ಕ್ ನ ಸಂಪೂರ್ಣ ಜವಾಬ್ದಾರಿ ನ್ನ ಮೇಲಿತ್ತು. ಅದನ್ನು ಟಾಸ್ಕ್ ಎನ್ನುವುದಕ್ಕಿಂತ ಜವಾಬ್ದಾರಿ ಎಂದು ತಿಳಿದು ಎಲ್ಲವನ್ನೂ ನಿಬಾಯಿಸಿಕೊಂಡು ಪ್ರಾಮಾಣಕಿವಾಗಿ ಕೆಲಸ ಮಾಡಿ ಮುಖ್ಯಮಂತ್ರಿಗಳ ಪದಕ ಪಡೆದುಕೊಂಡೆ, ಹಾಗೆಂದ ಮಾತ್ರಕ್ಕೆ ನನ್ನೊಬ್ಬನಶ್ರಮಕ್ಕೆ ಪದಕ ದೊರಕಲಿಲ್ಲ. ಬದಲಿಗೆ ಕಚೇರಿ ಸಿಬ್ಬಂದಿ, ಸಹಪಾಠಿ ಸೇರಿದಂತೆ ವಾಚರ್ ನಿಂದ ಪ್ರತಿಯೊಬ್ಬರೂ ನೀಡಿದ ಸಹಕಾರ ನನಗೆ ಮುಖ್ಯಮಂತ್ರಿಗಳ ಪದಕ ದೊರಕುವಂತೆ ಮಾಡಿತು ಎಂದರು.

ತೀರಾ ಇತ್ತೀಚೆಗೆ ಚಿರತೆ ಹಾವಳಿ ಹೆಚ್ಚಾದ ವೇಳೆ ಜನರು, ಸಿಬ್ಬಂದಿ ನೀಡಿದ ಸಹಕಾರ ನಿಜಕ್ಕೂ ಮರೆಯಲಾಗದು, ಅದರಲ್ಲೂ ಅರಣ್ಯಾಧಿಕಾರಿ ಯಮುನಾ ಅವರ ಸೇವೆ ಸ್ಮರಣೀಯ. ಯಮುನ ಅವರು ಲೇಡಿ ಸಿಂಗಂರಂತೆ ಕರ್ತವ್ಯ ನಿರ್ವಹಿಸಿದರು. ಕೆಲಸದಿಂದ ತಪ್ಪಿಸಿಕೊಂಡರೆ ಸಾಕೆನ್ನುವ ಕೆಲವರ ನಡುವೆ ಮೇಡಂ ಕೆಲಸಕ್ಕೆ ಕರೆಯದಿದ್ದರೆ ಬೇಸರ ಮಾಡಿಕೊಳ್ಳುತ್ತಿದ್ದರು. ಮಧ್ಯ ರಾತ್ರಿಯಲ್ಲೂ ಅವರು ಕರ್ತವ್ಯ ನಿರ್ವಹಿಸಲು ಸಿದ್ದರಿದ್ದರು. ಚಿರತೆ, ಆನೆ ಕಾರ್ಯಾಚರಣೆಯಲ್ಲಿ ಅವರು ನಿರ್ವಹಿಸುತ್ತಿದ್ದ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದು ಯಮುನಾ ಅವರ ಕರ್ತವ್ಯ ಪ್ರಜ್ಞೆಗೆ ಶಹಬ್ಬಾಶ್ ಗಿರಿ ನೀಡಿದರು.

ವರ್ಗಾವಣೆಗೊಂಡ ಮತ್ತೊಬ್ಬರು ಉಪ ವಲಯ ಅರಣ್ಯಾಧಿಕಾರಿ ಯಮುನಾ ಮಾತನಾಡಿದರು.

ವರ್ಗಾವಣೆಗೊಂಡ ಉಪ ವಲಯ ಅರಣ್ಯಾಧಿಕಾರಿ ಎಸ್.ಎಂ. ಮಂಜುನಾಥ್, ಯಮುನಾ, ಅರಣ್ಯ ರಕ್ಷಕರಾದ ಎಂ. ಶಂಕರ್, ಪ್ರತಾಪ್, ಲೋಕೇಶ್ ಅವರಿಗೆ ಕಚೇರಿ ಸಿಬ್ಬಂದಿ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು.

ಕರ್ತವ್ಯಕ್ಕೆ ಹಾಜರಾದ ಅರಣ್ಯಾಧಿಕಾರಿ ನಿರಂಜನ್, ನಾಗರಾಜು ಖಂಡ್ರೆ, ವಿಠಲ್, ಶಿವ, ರಾಥೋಡ್, ಪ್ರಕಾಶ್ ಬಡಿಗೇರ್ ಹಾಗೂ ವೀರೇಶ್ ಕುಮಾರ್ ಪಾಟೀಲ್ ಅವರನ್ನು ಕೋರಲಾಯಿತು.

ಜೈ ಶಂಕರ್, ಕಗ್ಗಲೀಪುರ ರಾಜಣ್ಣ, ಶಿವಪ್ರಸಾದ್, ಕೃಷ್ಣ, ಕೀರ್ತಿ, ಅಮ್ಜದ್, ಜಯಂತ್, ಸ್ವಾಮಿ, ಮುಜೀಬ್, ಕಾರ್ತಿಕ್, ಸಗೀರ್ ಅಹ್ಮದ್ ನಯಾಜ್, ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.