ಸಾರಾಂಶ
-ಕನಕಪುರ ತಾಲೂಕು ಹುಣಸೆಮರದದೊಡ್ಡಿಯ ನಾಗೇಂದ್ರ ವಂಚನೆಗೊಳಗಾದವರು
ರಾಮನಗರ: ಹಣ ಹೂಡಿಕೆ ಮಾಡಿ ದುಪ್ಟಟ್ಟು ಗಳಿಸಬಹುದೆಂದು ವಂಚಕರು ರೈತನೊಬ್ಬನನ್ನು ನಂಬಿಸಿ 13 ಲಕ್ಷ 60 ಸಾವಿರ ರುಪಾಯಿ ವಂಚಿಸಿರುವ ಘಟನೆ ನಡೆದಿದೆ. ಕನಕಪುರ ತಾಲೂಕು ಹುಣಸೆಮರದದೊಡ್ಡಿ ಗ್ರಾಮದ ಎಚ್.ಎ.ನಾಗೇಂದ್ರ ವಂಚನೆಗೊಳಗಾದವರು.ಫೇಸ್ ಬುಕ್ ನೋಡುತ್ತಿದ್ದ ವೇಳೆ ನಾಗೇಂದ್ರ ಅವರಿಗೆ ಪ್ರೀತಮ್ ಗೌಡ ಎಂಬುವರು ಕಳುಹಿಸಿದ್ದ ಫ್ರೆಂಡ್ ರಿಕ್ವೆಸ್ಟ್ ಅನ್ನು ಅಕ್ಸಪ್ಟೆ ಮಾಡಿದ್ದಾರೆ. ನಂತರ ಇಬ್ಬರು ಪರಸ್ಪರ ಚಾಟ್ ಮಾಡುವಾಗ ಪ್ರೀತಮ್ ಗೌಡ Darwinex Globaloos ವೆಬ್ ಸೈಟ್ ಲಿಂಕ್ ಡೌನ್ ಲೋಡ್ ಮಾಡಿಕೊಂಡು ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ಗಳಿಸಬಹುದೆಂದು ನಂಬಿಸಿದ್ದಾನೆ.
ಪ್ರೀತಮ್ ಮಾತನ್ನು ನಂಬಿದ ನಾಗೇಂದ್ರ ಜೂನ್ 27ರಂದು ದಾಹಿಸಾರೆ ಬ್ರಾಂಚ್ ಸ್ಕೈ ಕನ್ಸ್ಟ್ರಾಕ್ಷನ್ ಎಂಬ ಹೆಸರಿನ ಖಾತೆಗೆ 4 ಲಕ್ಷ ಆರ್ ಟಿಜಿಎಸ್ ಮಾಡಿದ್ದಾರೆ. ಜುಲೈ 4ರಂದು ಫೋನ್ ಪೇ ಮೂಲಕ ಸರಸ್ವತಿ ಕೋ ಆಪರೇಟಿವ್ ಬ್ಯಾಂಕ್ ಕಲ್ಮನ್ ಮಾರ್ಕೆಟ್ ಎಂಬ ಬ್ರಾಂಚಿನ ಕಾನ್ಕ್ ಸೇಲ್ಸ್ ಏಜೆನ್ಸಿಗೆ 90 ಸಾವಿರ ರು. ವರ್ಗಾವಣೆ ಮಾಡಿದ್ದಾರೆ. ಜುಲೈ 17ರಂದು ಕೃಷ್ಣ ಸ್ಟುಡಿಯೋ ವೆಡ್ಡಿಂಗ್ ಸ್ಟೋರಿ ಸಿಯೋನಿ ಖಾತೆಗೆ 70 ಸಾವಿರ, ಜುಲೈ 19ರಂದು 8 ಲಕ್ಷ ಆರ್ ಜಿಸಿ ಮೂಲಕ ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ. ಈ ಸಂಬಂಧ ಎಚ್.ಎ.ನಾಗೇಂದ್ರ ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.(ಆ್ಯಂಕರ್ ಮೇಲೆ ಮಿಡಲ್ ಕೆಳಗೆ)
ಲೋನ್ ಜಾಹೀರಾತು ನೋಡಿದ ವ್ಯಕ್ತಿಗೆ 6.37 ಲಕ್ಷ ವಂಚನೆ-ಟಿ.ಬೇಕುಪ್ಪೆ ಪೋಸ್ಟ್ ಶ್ರೀನಿವಾಸಳ್ಳಿಯ ಪ್ರದೀಪ್ ವಂಚನೆಗೊಳಗಾದವರು
ರಾಮನಗರ: ಫೈನಾನ್ಸ್ ಕಂಪನಿಯೊಂದರ ಲೋನ್ ಸಿಗುತ್ತದೆ ಎಂಬ ಜಾಹೀರಾತು ನೋಡಿ ವ್ಯಕ್ತಿಯೊಬ್ಬ 6.37 ಲಕ್ಷ ಕಳೆದುಕೊಂಡಿರುವ ಘಟನೆ ನಡೆದಿದೆ.ಕನಕಪುರ ತಾಲೂಕು ಟಿ.ಬೇಕುಪ್ಪೆ ಪೋಸ್ಟ್ ಶ್ರೀನಿವಾಸಳ್ಳಿ ಗ್ರಾಮದ ಎಸ್.ಎಂ.ಪ್ರದೀಪ್ ವಂಚನೆಗೊಳಗಾದವರು. ಪ್ರದೀಪ್ ರವರು ಫೇಸ್ ಬುಕ್ ನೋಡುತ್ತಿದ್ದ ವೇಳೆ ಧನಿ ಫೈನಾನ್ಸ್ ನಿಂದ ಲೋನ್ ಸಿಗುತ್ತದೆ ಎಂಬ ಜಾಹೀರಾತು ನೋಡಿ ಅದರಲ್ಲಿದ್ದ ಮೊಬೈಲ್ ನಂಬಿಗೆ ಕರೆ ಮಾಡಿದ್ದಾರೆ. ಆಗ ವಂಚಕರು ವಾಟ್ಸ್ ಆಪ್ ನಂಬರ್ ಗೆ ಪ್ರದೀಪ್ ರವರ ಕೆವೈಸಿ ದಾಖಲೆಗಳನ್ನು ಹಾಕಿಸಿಕೊಂಡಿದ್ದಾರೆ. ಲೋನ್ ಅಪ್ರೂವಲ್ ಆಗಿದ್ದು, ಅನ್ಶೂರೆನ್ಸ್ ಕಟ್ಟಬೇಕೆಂದು ಹೇಳಿ ವಂಚಕರು 4500 ರು. ಹಾಕಿಸಿಕೊಂಡಿದ್ದಾರೆ.
ಇನ್ನಿತರ ಚಾರ್ಜಸ್ ಕಟ್ಟಬೇಕೆಂದು ಹೇಳಿ 17,600 ರು., ಜುಲೈ 10ರಂದು 24,500 ರು., ಅದೇ ದಿನ ಮಧ್ಯಾಹ್ನ 32,550 ರು. ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಜುಲೈ 14ರಂದು 75 ಸಾವಿರ ರು., ಜುಲೈ 15ರಂದು 99,997 ರು., ಜುಲೈ 16ರಂದು 35 ಸಾವಿರ, ಜುಲೈ 17ರಂದು 30 ಸಾವಿರ ರು., ಜುಲೈ 23ರಂದು 30 ಸಾವಿರ ಹಾಗೂ 10 ಸಾವಿರ ರು.ಗಳನ್ನು ಪ್ರದೀಪ್ ರವರ ಖಾತೆಯಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.ಜುಲೈ 28ರಂದು 20 ಮತ್ತು 10 ಸಾವಿರ ರು., 6999 ರು., 8,999 ರು., 1999 ರು. ಗೂಲಗಲ್ ಪೈ ಮುಖಾಂತರ ವರ್ಗಾವಣೆ ಮಾಡಿದ್ದಾರೆ. ಜುಲೈ18ರಂದು 1 ಲಕ್ಷ, ಜುಲೈ 17ರಂದು 30,500 ರು., ಜುಲೈ 18ರಂದು 50 ಸಾವಿರ ರು. ಸೇರಿ ಒಟ್ಟು 6,37,644 ರುಪಾಯಿಗಳನ್ನು ವಂಚಿಸಿದ್ದಾರೆ. ಎಸ್.ಎಂ.ಪ್ರದೀಪ್ ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.