ಸಾಲಬಾಧೆ ತಾಳದೆ ವಿಷ ಸೇವಿಸಿ ರೈತ ಆತ್ಮಹತ್ಯೆ

| Published : Sep 11 2024, 01:08 AM IST

ಸಾಲಬಾಧೆ ತಾಳದೆ ವಿಷ ಸೇವಿಸಿ ರೈತ ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

Farmer commits suicide by consuming poison due to debt

ಕನ್ನಡಪ್ರಭ ವಾರ್ತೆ ಸುರಪುರಜಮೀನು ಸಾಗುವಳಿಗಾಗಿ ಸಾಲ ಮಾಡಿದ್ದು, ಬೆಳೆಗಳು ಸಮರ್ಪಕವಾಗಿ ಬಾರದೆ ಮಾಡಿದ ಸಾಲವನ್ನು ತೀರಿಸಲಾಗದೆ ಮನನೊಂದು ಮನೆಯಲ್ಲೇ ವಿಷ ಸೇವಿಸಿ ಮೃತಪಟ್ಟಿರುವ ಘಟನೆ ದೇವಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ದೇವಾಪುರ ಗ್ರಾಮದ ರವಿ ಹಣಮಂತಪ್ಪ (32) ಮೃತಪಟ್ಟ ರೈತ. 2.29 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದನು. ಅನ್ವರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 25 ಸಾವಿರ ರು. ಸಾಲ, ಕೈಗಡ ಸಾಲವಾಗಿ 5-6 ಲಕ್ಷ ರು.ಗಳ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಸಾಲಬಾಧೆಯಿಂದ ಮನನೊಂದು ಮನೆಯಲ್ಲೇ ವಿಷ ಸೇವಿಸಿದಾಗ, ಸುರಪುರ ತಾಲೂಕಾಸ್ಪತ್ರೆಗೆ ತಂದು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪತ್ನಿ ನೀಡಿದ ದೂರಿನನ್ವಯ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-----

10ವೈಡಿಆರ್‌19 : ರವಿ, ಆತ್ಮಹತ್ಯೆ ಮಾಡಿಕೊಂಡ ರೈತ.