ತಾಲೂಕು ಕಚೇರಿಯಲ್ಲೇ ವಿಷ ಕುಡಿದ ರೈತ

| Published : Sep 02 2025, 12:00 AM IST

ಸಾರಾಂಶ

ಪಿ.ದಾಸಾಪುರ ಗ್ರಾಮದ ರೈತ ದಿನೇಶ್ ಎಂಬುವರು ಹಲವು ದಿನಗಳಿಂದ ತಮ್ಮ ಜಮೀನಿನ ವಿಷಯಕ್ಕೆ ಸಂಬಂಧಿಸಿಂತೆ ಕೆಲಸ ಮಾಡಿಕೊಡಲು ತಾಲೂಕು ಕಚೇರಿಗೆ ಅಲೆದು ಅಲೆದು ಬೇಸತ್ತ ರೈತ ಸೋಮವಾರ ಬೆಳಗ್ಗೆ ಕಚೇರಿ ತೆರೆದ ಸಮಯದಲ್ಲಿ ಸಾರ್ವಜನಿಕವಾಗೇ ವಿಷದ ಬಾಟಲ್ ಹಿಡಿದು ನನ್ನ ಸಾವಿಗೆ ಅಧಿಕಾರಿಗಳೇ ಕಾರಣ ಎಂದು ಹೇಳಿ ವಿಷ ಸೇವಿಸಲು ಮುಂದಾದರು. ಅಕ್ಕಪಕ್ಕದಲ್ಲೇ ಇದ್ದ ಜನರು ತಡೆಯಲು ಮುಂದಾದರೂ ಪ್ರಯೋಜನವಾಗಲಿಲ್ಲ. ಕೂಡಲೇ ಸಬ್‌ರಿಜಿಸ್ಟ್ರಾರ್ ಕಚೇರಿ ಗುಮಾಸ್ತ ಹರೀಶ್ ಅವರ ಸಮಯ ಪ್ರಜ್ಞೆಯಿಂದ ದಿನೇಶರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದ ಹಿನ್ನೆಲೆಯಲ್ಲಿ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕು ಕಚೇರಿಯಲ್ಲಿ ಕೆಲಸ ಮಾಡಿಕೊಡದ ಅಧಿಕಾರಿಗಳ ವಿರುದ್ಧ ಬೇಸತ್ತ ರೈತನೊಬ್ಬ ಕಚೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ.

ತಾಲೂಕಿನ ಪಿ.ದಾಸಾಪುರ ಗ್ರಾಮದ ರೈತ ದಿನೇಶ್ ಎಂಬುವರು ಹಲವು ದಿನಗಳಿಂದ ತಮ್ಮ ಜಮೀನಿನ ವಿಷಯಕ್ಕೆ ಸಂಬಂಧಿಸಿಂತೆ ಕೆಲಸ ಮಾಡಿಕೊಡಲು ತಾಲೂಕು ಕಚೇರಿಗೆ ಅಲೆದು ಅಲೆದು ಬೇಸತ್ತ ರೈತ ಸೋಮವಾರ ಬೆಳಗ್ಗೆ ಕಚೇರಿ ತೆರೆದ ಸಮಯದಲ್ಲಿ ಸಾರ್ವಜನಿಕವಾಗೇ ವಿಷದ ಬಾಟಲ್ ಹಿಡಿದು ನನ್ನ ಸಾವಿಗೆ ಅಧಿಕಾರಿಗಳೇ ಕಾರಣ ಎಂದು ಹೇಳಿ ವಿಷ ಸೇವಿಸಲು ಮುಂದಾದರು. ಅಕ್ಕಪಕ್ಕದಲ್ಲೇ ಇದ್ದ ಜನರು ತಡೆಯಲು ಮುಂದಾದರೂ ಪ್ರಯೋಜನವಾಗಲಿಲ್ಲ. ಕೂಡಲೇ ಸಬ್‌ರಿಜಿಸ್ಟ್ರಾರ್ ಕಚೇರಿ ಗುಮಾಸ್ತ ಹರೀಶ್ ಅವರ ಸಮಯ ಪ್ರಜ್ಞೆಯಿಂದ ದಿನೇಶರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದ ಹಿನ್ನೆಲೆಯಲ್ಲಿ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ.

ವೈದ್ಯರು ಚಿಕಿತ್ಸೆ ನೀಡುತ್ತಿದ್ದು ತಾಲೂಕಿನಲ್ಲಿ ದಿನೇ ದಿನೇ ಲಂಚದ ಹಾವಳಿ ಹೆಚ್ಚಾಗಿದ್ದು, ಹಣ ನೀಡಿದರೂ ಸಹ ಅಧಿಕಾರಿಗಳು ಕೆಲಸ ಮಾಡಿಕೊಡದೆ ಬಡವ ಎಂಬ ಕಾರಣಕ್ಕೆ ಬೇಜವಾಬ್ದಾರಿ ತೋರುತ್ತಿದ್ದು ಇಂತಹ ಅಧಿಕಾರಿಗಳನ್ನು ತಾಲೂಕಿನಲ್ಲಿ ಇಟ್ಟುಕೊಂಡಿರುವುದು ಏತಕ್ಕೆ ಎಂಬ ಪ್ರಶ್ನೆ ಉದ್ಭವಿಸಿದೆ. ರಾಜಕಾರಣಿಗಳು ತಾಲೂಕಿನ ಜನತೆಯ ಬಗ್ಗೆ ಇಚ್ಚಾಶಕ್ತಿ ಇಲ್ಲದೆ ಹಣ ಮಾಡುವತ್ತ ಗಮನ ತೋರುತ್ತಿದ್ದಾರೆ ಎಂದು ರೈತ ದಿನೇಶ್ ತಮ್ಮ ಆಕ್ರೋಶವನ್ನು ಹೊರಹಾಕಿದರು.