ಇಳಕಲ್ಲ: ತಾಲೂಕು ಕಂದಗಲ್ಲ ಗ್ರಾಮದ ರೈತ ಟ್ರ್ಯಾಕ್ಟರ್ ಮೂಲಕ ಜಮೀನು ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಆಕಸ್ಮಿಕವಾಗಿ ಪಲ್ಟಿಯಾಗಿ ಟ್ರ್ಯಾಕ್ಟರ್ ಅಡಿ ಸಿಲುಕಿ ರೈತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ.

ಕಂದಗಲ್ಲ ಗ್ರಾಮದ ಖಾಜೇಸಾಬ ಬಂದ್ಗೆಸಾಬ ಭಾವಿಕಟ್ಟಿ (53) ಮೃತ. ಖಾಜೇಸಾಬ ಅವರು, ಇಳಕಲ್ಲ ತಾಲೂಕಿನ ನಂದವಾಡಗಿ ಗ್ರಾಮದ ತನ್ನ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಇಳಕಲ್ಲ ಗ್ರಾಮೀಣ ಪೊಲೀಸರು ಆಗಮಿಸಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.