ಸಾಲಬಾಧೆಯಿಂದ ನೇಣು ಬಿಗಿದು ರೈತ ಸಾವು

| Published : Jul 30 2025, 12:45 AM IST

ಸಾರಾಂಶ

ಕೃಷಿ ಚಟುವಟಿಕೆಗಾಗಿ ಕೊಪ್ಪ ಸೇವಾ ಸಹಕಾರ ಸಂಘದಲ್ಲಿ 50 ಸಾವಿರ, ಗ್ರಾಮೀಣ ಬ್ಯಾಂಕ್ ನಲ್ಲಿ ಚಿನ್ನಾಭರಣ ಒತ್ತೆ ಇಟ್ಟು 80 ಸಾವಿರ ಹಾಗೂ ತರಕಾರಿ ಬೆಳೆಯಲು ಲೇವಾದೇವಿಗಾರರಿಂದ ಲಕ್ಷಾಂತರ ರು. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಮದ್ದೂರು: ಸಾಲಬಾಧೆಯಿಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ಸೋಮವಾರ ಸಂಜೆ ಜರುಗಿದೆ. ಗ್ರಾಮದ ಕೆ.ಶಂಕರ್ (70) ಆತ್ಮಹತ್ಯೆಗೆ ಶರಣಾದ ರೈತ. ಭಾನುವಾರ ಸಂಜೆ ತನ್ನ ಜಮೀನಿನ ತೆಂಗಿನ ಮರಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ತನ್ನ ತಂದೆ ಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪುತ್ರ ಸಂಜಯ್ ಪೊಲೀಸರಿಗೆ ದೂರು ನೀಡಿದ್ದಾರೆ. ಕೃಷಿ ಚಟುವಟಿಕೆಗಾಗಿ ಕೊಪ್ಪ ಸೇವಾ ಸಹಕಾರ ಸಂಘದಲ್ಲಿ 50 ಸಾವಿರ, ಗ್ರಾಮೀಣ ಬ್ಯಾಂಕ್ ನಲ್ಲಿ ಚಿನ್ನಾಭರಣ ಒತ್ತೆ ಇಟ್ಟು 80 ಸಾವಿರ ಹಾಗೂ ತರಕಾರಿ ಬೆಳೆಯಲು ಲೇವಾದೇವಿಗಾರರಿಂದ ಲಕ್ಷಾಂತರ ರು. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಸಂಬಂಧ ಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.