ಸಾರಾಂಶ
ಅಥಣಿ: ಮುಸುಕಿನ ಜೋಳಕ್ಕೆ ನೀರು ಹಾಯಿಸಲು ಹೋಗಿದ್ದ ರೈತನೊಬ್ಬ ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾದ ಘಟನೆ ತಾಲೂಕಿನ ಅಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಥಣಿ: ಮುಸುಕಿನ ಜೋಳಕ್ಕೆ ನೀರು ಹಾಯಿಸಲು ಹೋಗಿದ್ದ ರೈತನೊಬ್ಬ ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾದ ಘಟನೆ ತಾಲೂಕಿನ ಅಡಹಳ್ಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಶ್ರೀಶೈಲ ಯಮನಪ್ಪ ಕೋಹಳ್ಳಿ (62) ಮೃತ ರೈತ. ಸೆ.19ರಂದು ಸಂಜೆ ತನ್ನ ಹೊಲದಲ್ಲಿದ್ದ ಮುಸುಕಿನ ಜೋಳಕ್ಕೆ ನೀರು ಹಾಯಿಸಲು ಹೋದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ಕಂಬದ ತಂತಿ ಕುತ್ತಿಗೆಯ ಭಾಗಕ್ಕೆ ಸ್ಪರ್ಶಗೊಂಡು ಸುಟ್ಟು ಕರಕಲಾಗಿದ್ದಾನೆ. ಘಟನಾ ಸ್ಥಳಕ್ಕೆ ಐಗಳಿ ಠಾಣೆಯ ಕ್ರೈಂ ವಿಭಾಗೀಯ ಪಿಎಸ್‌ಐ ಕುಮಾರ ಹಾಡಕರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಸಾವಿಗೆ ಮೂಲ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸಾವಿಗೀಡಾದ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತ ಮುಖಂಡರು ಒತ್ತಾಯ ಮಾಡಿದ್ದಾರೆ.