ನರಸಿಂಹರಾಜಪುರದನ ಹುಡುಕಲು ತೋಟದ ಬಳಿ ಹೋಗಿದ್ದವರ ಮೇಲೆ ಒಂಡಿ ಆನೆ ದಾಳಿ ಮಾಡಿ ಸಾಯಿಸಿರುವ ದಾರುಣ ಘಟನೆ ಬಾಳೆ ಗ್ರಾಮ ಪಂಚಾಯಿತಿ ಅಳೇಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.

ಅರಣ್ಯ ಸಚಿವರು, ಜಿಲ್ಲಾಧಿಕಾರಿ ಭೇಟಿಗೆ ಪಟ್ಟು

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ದನ ಹುಡುಕಲು ತೋಟದ ಬಳಿ ಹೋಗಿದ್ದವರ ಮೇಲೆ ಒಂಡಿ ಆನೆ ದಾಳಿ ಮಾಡಿ ಸಾಯಿಸಿರುವ ದಾರುಣ ಘಟನೆ ಬಾಳೆ ಗ್ರಾಮ ಪಂಚಾಯಿತಿ ಅಳೇಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.

ಅಳೇಹಳ್ಳಿ ಗ್ರಾಮದ ಹೆನ್ನಂಗಿಯ ಬೋವಿ ಹಡ್ಲು ಕೃಷ್ಣಮೂರ್ತಿ ( 53) ದಾಳಿಗೆ ಸಿಲುಕಿ ಮೃತರಾದವರು.

ಆನೆ ದಾಳಿಯಿಂದ ಮೃತರಾದ ಕೃಷ್ಣಮೂರ್ತಿ ಹಾಗೂ ಅದೇ ಗ್ರಾಮದ ಶ್ರೀನಿವಾಸ ಇಬ್ಬರೂ ಸಂಜೆ 4 ಗಂಟೆ ಹೊತ್ತಿಗೆ ದನ ಹುಡುಕಲು ತೋಟದ ಬದಿ ಹೋಗುತ್ತಿದ್ದಾಗ ಒಂಟಿ ಆನೆ ಎದುರಾಗಿದೆ. ಗಾಬರಿಯಾದ ಇಬ್ಬರು ಅಲ್ಲಿಂದ ಓಡಿದ್ದಾರೆ. ಆದರೆ, ಕೃಷ್ಣಮೂರ್ತಿ ಆನೆ ಕೈಗೆ ಸಿಕ್ಕಿದ್ದರಿಂದ ದಾಳಿ ತುಳಿದು ಸಾಯಿಸಿದೆ. ಅಲ್ಲಿಂದ ಶ್ರೀನಿವಾಸ್ ತಪ್ಪಿಸಿಕೊಂಡು ಓಡಿ ಬಂದು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.

ವಿಷಯ ತಿಳಿದ ಅರಣ್ಯ ಇಲಾಖೆಯವರು, ಪೊಲೀಸರು ಸಂಜೆ ಹೊತ್ತಿಗೆ ಆಗಮಿಸಿ ಆಂಬ್ಯುಲೆನ್ಸ್ ಮೂಲಕ ಮೃತ ದೇಹವನ್ನು ಪೋಸ್ಟ್ ಮಾರ್ಟ್ಂ ಗೆ ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ತರುತ್ತಿದ್ದಾಗ ಆಕ್ರೋಶಗೊಂಡ ಮೂಡಬಾಗಿಲು ಮುಖ್ಯ ರಸ್ತೆಯಲ್ಲಿ ಗ್ರಾಮಸ್ಥರು, ರೈತ ಸಂಘದವರು ಒಟ್ಟಾಗಿ ಆ್ಯಂಬುಲೆನ್ಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿ ರಸ್ತೆಯ ಮದ್ಯದಲ್ಲೇ ಕುಳಿತು ಧರಣಿ ನಡೆಸಿದರು.

ನಂತರ ಮೃತ ದೇಹ ಹೊತ್ತ ಆಂಬ್ಯುಲೆನ್ಸ್ ನ್ನು 8 ನೇ ಮೈಲಿಗಲ್ಲಿನ ಮುಖ್ಯ ರಸ್ತೆಗೆ ತಂದು ಅಲ್ಲಿ ರೈತರು, ಗ್ರಾಮಸ್ಥರು ಪ್ರತಿಭಟನೆ ನಡೆಸಿ ಅರಣ್ಯ ಸಚಿವರು, ಜಿಲ್ಲಾಧಿಕಾರಿಗಳು, ವಿಧಾನ ಪರಿಷತ್ ಸದಸ್ಯರು,ಲೋಕ ಸಭಾ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ನ್ಯಾಯ ಒದಗಿಸಬೇಕು. ಅಲ್ಲಿವರೆಗೂ ಮೃತ ದೇಹ ಕೊಂಡೊಯ್ಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.

ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಕೆಲವು ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಂತರ ವಾಹನ ಸವಾರರು ಬದಲಿ ರಸ್ತೆ ಮೂಲಕ ವಾಹನ ಸಂಚಾರ ಮುಂದುವರಿಸಿದರು. ರಾತ್ರಿ 9 ಗಂಟೆಯಾದರೂ ಮುಖ್ಯ ರಸ್ತೆಯಲ್ಲೇ ಅಂದಾಜು 200 ರೈತರು, ಗ್ರಾಮಸ್ಥರು ಪ್ರತಿಭಟನೆ ಮುಂದುವರಿಸಿದ್ದರು.