ರೈತ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ: ಮಂಜುನಾಥ್ ಗಿಳಿಯಾರು

| Published : Jul 23 2024, 12:39 AM IST

ರೈತ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ: ಮಂಜುನಾಥ್ ಗಿಳಿಯಾರು
Share this Article
  • FB
  • TW
  • Linkdin
  • Email

ಸಾರಾಂಶ

ಕೋಟ ಪಂಚವರ್ಣ ಯುವಕ ಮಂಡಲದ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ‘ರೈತರೆಡೆಗೆ ನಮ್ಮ ನಡಿಗೆ’ ಇದರ ೩೭ನೇ ಕಾರ್ಯಕ್ರಮದಲ್ಲಿ ಕೃಷಿಕ ಗಿಳಿಯಾರು ಭೋಜ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಕೋಟ

ಕೃಷಿ ಕಾಯಕವೇ ಶ್ರೇಷ್ಠವಾದುದು, ಇದಕ್ಕೆ ನೈಜ ಪ್ರೋತ್ಸಾಹ ಅಗತ್ಯ ಎಂದು ನ್ಯಾಯವಾದಿ ಟಿ. ಮಂಜುನಾಥ್ ಗಿಳಿಯಾರು ಹೇಳಿದರು.

ಅವರು ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲದ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ‘ರೈತರೆಡೆಗೆ ನಮ್ಮ ನಡಿಗೆ’ ಇದರ ೩೭ನೇ ಕಾರ್ಯಕ್ರಮದಲ್ಲಿ ಕೃಷಿಕ ಗಿಳಿಯಾರು ಭೋಜ ಪೂಜಾರಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ಯಾವುದೇ ಸರ್ಕಾರಗಳು ಬರಲಿ, ಕೃಷಿ ಕಾರ್ಯಕ್ಕೆ ಹೆಚ್ಚು ಉತ್ತೇಜನ ನೀಡಬೇಕು. ರೈತರು ಕಷ್ಟಪಟ್ಟು ಬೆಳೆ ಬೆಳೆದ ಬೆಳೆಗಳು ಪ್ರಾಕೃತಿಕ ವಿಕೋಪಕ್ಕೆ ಬಲಿಯಾದಾಗ ಸೂಕ್ತ ಪರಿಹಾರ ಕ್ರಮದ ವ್ಯವಸ್ಥೆ ಮಾಡಬೇಕು. ಆಗ ಮಾತ್ರ ಕೃಷಿ ಮುಂದುವರಿಯಲು ಸಾಧ್ಯವಿದೆ ಎಂದ ಅವರು, ಈ ನಿಟ್ಟಿನಲ್ಲಿ ಪಂಚವರ್ಣ ಸಂಸ್ಥೆ ರೈತರನ್ನು ಗುರುತಿಸುವ ಕಾಯಕ ಶ್ರೇಷ್ಠವಾದದ್ದು ಎಂದರು.

ಕಾರ್ಯಕ್ರಮವನ್ನು ಪಾಂಡೇಶ್ವರ ರಕ್ತೇಶ್ಚರಿ ದೇಗುಲದ ಧರ್ಮದರ್ಶಿ ಕೆ.ವಿ. ರಮೇಶ್ ರಾವ್ ಉದ್ಘಾಟಿಸಿದರು.

ಯುವ ಕೃಷಿಕ, ಕಂಬಳದ ಸಾಧಕ ಭೋಜ ಪೂಜಾರಿ ಅವರನ್ನು ತಂದೆ ಗಾಡಿ ಕೂಸ ಪೂಜಾರಿ, ತಾಯಿ ಗಿರೀಜಾ, ಪತ್ನಿ ಸವಿತಾ ಸಮ್ಮುಖದಲ್ಲಿ ಸಾಧಕ ರೈತ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಾರಂಭದಲ್ಲಿ ಗಾಡಿ ಕೂಸಣ್ಣ ದಂಪತಿ ಗೋ ಪೂಜೆ ನೆರವೇರಿಸಿ, ಬಿಲ್ವಪತ್ರೆ ಗಿಡ ನೆಟ್ಟು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು. ಅಭ್ಯಾಗತರಾಗಿ ಜಿಲ್ಲಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಸಂಯೋಜಕ ರವೀಂದ್ರ ಮೊಗವೀರ, ಮಾಜಿ ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್, ಸಾಲಿಗ್ರಾಮ ಪ.ಪಂ. ಸದಸ್ಯರಾದ ರಾಜು ಪೂಜಾರಿ ಕಾರ್ಕಡ, ಪುನಿತ್ ಪೂಜಾರಿ ಪಾರಂಪಳ್ಳಿ, ಶ್ಯಾಮಸುಂದರ್ ನಾಯರಿ, ಸಂಜೀವ ದೇವಾಡಿಗ, ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಂದರ್, ಬೀಜಾಡಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಪೂಜಾರಿ, ರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಸಮಿತಿ ಪ್ರ. ಕಾರ್ಯದರ್ಶಿ ಕೋಟ ದಿನೇಶ್ ಗಾಣಿಗ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ, ಕೋಟ ರೋಟರಿ ಕ್ಲಬ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಹಿರಿಯ ಕೃಷಿಕ ಭಾಸ್ಕರ್ ಶೆಟ್ಟಿ ಮಣೂರು, ರೈತ ಧ್ವನಿ ಸಂಘ ಕೋಟ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಜೆಸಿಐ ಸೀನಿಯರ್ ಕೋಟ ಅಧ್ಯಕ್ಷ ಕೇಶವ ಆಚಾರ್ ಕೋಟ ಮತ್ತಿತರರು ಉಪಸ್ಥಿತರಿದ್ದರು.

ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ, ಶಿಕ್ಷಕ ಸಂತೋಷ್ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು. ಮಂಡಲದ ಕಲಾವತಿ ಅಶೋಕ್ ವಂದಿಸಿದರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ನಾಲ್ಕು ಪ್ರಸಿದ್ಧ ಕಂಬಳದ ಕೋಣೆಗಳು ಗಾಡಿ ಕೂಸಣ್ಣನ ಎತ್ತಿನಗಾಡಿ ಗಮನ ಸೆಳೆದಳವು.