ರೈತನ ಬದುಕು ಸಂಕಷ್ಟದಲ್ಲಿ ಯುವ ಕೃಷಿಕರಿಗೆ ಹೆಣ್ಣು ಕೊಡುತ್ತಿಲ್ಲ: ಡಾ.ಎಂ.ಕೆಂಪಮ್ಮ ಆತಂಕ

| Published : Jan 13 2025, 12:45 AM IST

ರೈತನ ಬದುಕು ಸಂಕಷ್ಟದಲ್ಲಿ ಯುವ ಕೃಷಿಕರಿಗೆ ಹೆಣ್ಣು ಕೊಡುತ್ತಿಲ್ಲ: ಡಾ.ಎಂ.ಕೆಂಪಮ್ಮ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಅನ್ನ ಕೊಡುವ ರೈತ ಯಾವುದೇ ಬೆಳೆ ಬೆಳೆದರೂ ಆರ್ಥಿಕ ಸಫಲತೆ ಕಾಣುತಿಲ್ಲ. ಹೆಣ್ಣು ನೋಡಲು ಹೋದರ ರೈತರಿಗೆ ಮಗಳು ಕೊಡುವುದಿಲ್ಲ, ಹೆಣ್ಣು ಮಕ್ಕಳು ಕೂಡ ಮದುವೆಯಾಗಲು ನಿರಾಕರಿಸುತ್ತಾರೆ. ಯಾವುದೇ ಉದ್ಯೋಗದಲ್ಲಿದ್ದರೂ ರೈತರ ಬೆವರಿನ ಹನಿ ಮುಂದೆ ಯಾರು ಸಮಾನರಲ್ಲ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ದೇಶಕ್ಕೆ ಅನ್ನ ಕೊಡುವ ರೈತನ ಬದುಕು ಸಂಕಷ್ಟಕ್ಕೆ ಸಿಲುಕುತಿದ್ದು, ಯುವ ಕೃಷಿಕರಿಗೆ ಹೆಣ್ಣು ಕೊಡುತ್ತಿಲ್ಲ ಎಂದು ನಂಜಗೂಡಿನ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎಂ.ಕೆಂಪಮ್ಮ ಆತಂಕ ವ್ಯಕ್ತಪಡಿಸಿದರು.

ಸ್ನೇಹ ವಿದ್ಯಾ ಸಂಸ್ಥೆಯಲ್ಲಿ ನಡೆದ ಸ್ನೇಹ ಸುಗ್ಗಿಸಂಭ್ರಮ ಮತ್ತು ಪೋಷಕರ ದಿನಾಚರಣೆಯನ್ನು ಹಸು ಮತ್ತು ಭತ್ತದ ರಾಶಿಗೆ ಪೂಜೆ ಮಾಡುವ ಮೂಲಕ ಚಾಲನೆ ಮಾತನಾಡಿ, ಕೃಷಿ ಅವಲಂಭಿತ ಯುವ ರೈತನಿಗೆ ಹೆಣ್ಣು ಕೊಡುತಿಲ್ಲ. ಇದು ನಿಜಕ್ಕೂ ಸಮಾಜವೇ ತಲೆ ತಗ್ಗಿಸುವ ವಿಚಾರ ಎಂದರು.

ಪ್ರಸ್ತುತ ಅನ್ನ ಕೊಡುವ ರೈತ ಯಾವುದೇ ಬೆಳೆ ಬೆಳೆದರೂ ಆರ್ಥಿಕ ಸಫಲತೆ ಕಾಣುತಿಲ್ಲ. ಹೆಣ್ಣು ನೋಡಲು ಹೋದರ ರೈತರಿಗೆ ಮಗಳು ಕೊಡುವುದಿಲ್ಲ, ಹೆಣ್ಣು ಮಕ್ಕಳು ಕೂಡ ಮದುವೆಯಾಗಲು ನಿರಾಕರಿಸುತ್ತಾರೆ. ಯಾವುದೇ ಉದ್ಯೋಗದಲ್ಲಿದ್ದರೂ ರೈತರ ಬೆವರಿನ ಹನಿ ಮುಂದೆ ಯಾರು ಸಮಾನರಲ್ಲ. ಆತ ಬಿತ್ತದೆ ಬೆಳೆ ಬೆಳೆಯುವುದನ್ನು ನಿಲ್ಲಿಸಿದರೇ ದೇಶದ ಜನರ ಪರಿಸ್ಥಿತಿ ಏನು ಎಂಬುವುದು ತಿಳಿಯಬೇಕು ಎಂದು ಎಚ್ಚರಿಸಿದರು.

ಸಂಸ್ಥೆ ಸಂಸ್ಥಾಪಕ ದಾಸೇಗೌಡ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ರಾಷ್ಟ್ರೀಯ ಥ್ರೋಬಾಲ್ ಜೂನಿಯರ್ ವಿಭಾಗದ ಆಟಗಾರ್ತಿ ಎಂ.ಆರ್.ಸಂಜನಾ ಅವರನ್ನು ಅಭಿನಂಧಿಸಲಾಯಿತು. ಕಾರ್ಯಕ್ರಮದಲ್ಲಿ ರಾಮನಗರದ ಡಯಟ್ ಉಪನ್ಯಾಸಕ ಕೆ.ಪಿ.ಬಾಬು, ಮಂಡ್ಯದ ಶ್ರೀ ಗ್ರೂಪ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ರಕ್ಷಿತ್‌ರಾಜ್, ಭಾರತೀ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಎಂ.ಮಾಯಪ್ಪ , ಸ್ನೇಹ ವಿದ್ಯಾ ಸಂಸ್ಥೆ ಅಧ್ಯಕ್ಷೆ ಶಶಿಕಲಾ ದಾಸೇಗೌಡ, ಮುಖ್ಯ ಶಿಕ್ಷಕ ರವಿಶಂಕರ್ ಹಲವರು ಇದ್ದರು.