ಸಾರಾಂಶ
ಗುರುವಾರ ಬೆಳಗ್ಗೆ ಸುಮಾರು 8ರ ಸಮಯದಲ್ಲಿ ಮತ್ತೆ ಐದರಿಂದ ಆರು ಆನೆಗಳು ನಂಜನಾಯಕನಹಳ್ಳಿ ಹಾಗೂ ಬೂದನೂರು ಗ್ರಾಮದಲ್ಲಿ ಪ್ರತ್ಯಕ್ಷ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ತಾಲೂಕಿನ ಕಸಬಾ ಹೋಬಳಿ ನಂಜನಾಯಕನಹಳ್ಳಿ ಹಾಗೂ ಬೂದನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಆನೆ ದಾಳಿ ನಡೆಯುತ್ತಿದ್ದು ಇದರಿಂದ ಈ ಭಾಗದ ರೈತರು ಹಾಗೂ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.ಬುಧವಾರ ರಾತ್ರಿ ಒಂಟಿ ಸಲಗ ಒಂದು ನಂಜನಾಯಕನಹಳ್ಳಿ ಗ್ರಾಮದ ಅಶೋಕ್ ಎಂಬವರಿಗೆ ಸೇರಿದ ಎರಡು ಮನೆಗಳ ಮೇಲ್ಛಾವಣಿ ಕಿತ್ತು ಹಾನಿ ಮಾಡಿದೆ. ಗ್ರಾಮಸ್ಥರು ಇದರಿಂದ ಭಯಬೀತರಾಗಿ ಒಂಟಿ ಸಲಗವನ್ನು ಕಾಡಿಗೆ ಓಡಿಸಲು ಯಶಸ್ವಿಯಾಗಿದ್ದಾರೆ, ಸಿಬ್ಬಂದಿಯವರು ಆಗಮಿಸಿದ್ದು, ಗ್ರಾಮಸ್ಥರು ಅರಣ್ಯ ಇಲಾಖೆಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಾದ ಬಳಿಕ ಗುರುವಾರ ಬೆಳಗ್ಗೆ ಸುಮಾರು 8ರ ಸಮಯದಲ್ಲಿ ಮತ್ತೆ ಐದರಿಂದ ಆರು ಆನೆಗಳು ನಂಜನಾಯಕನಹಳ್ಳಿ ಹಾಗೂ ಬೂದನೂರು ಗ್ರಾಮದಲ್ಲಿ ಪ್ರತ್ಯಕ್ಷವಾಗಿರುತ್ತದೆ. ಕಾಡು ಪ್ರಾಣಿಗಳ ನಿರಂತರವಾಗಿ ಗ್ರಾಮದಲ್ಲಿ ನಡೆಯುತ್ತಿದ್ದು, ರೈತರು ಬಳಗ ಬಳಗ ಮಾನವರ ರಕ್ಷಣೆಗಾಗಿ ಗ್ರಾಮದ ಸುತ್ತ ರೈಲು ಕಂಬಿಗಳನ್ನು ಅಳವಡಿಸಿ ರಕ್ಷಣೆ ನೀಡಬೇಕೆಂದು ಹಲವು ಬಾರಿ ಒತ್ತಾಯಿಸಿದರು ಇದರಿಂದ ಅಧಿಕಾರಿಗಳು ಯಾವುದೇ ಯಾವುದೇ ಕ್ರಮ ವಹಿಸಿರುವುದಿಲ್ಲ. ಈ ಭಾಗದಲ್ಲಿ ನಿರಂತರವಾಗಿ ರಾತ್ರಿ ವೇಳೆ ಸುಮಾರು 10 ರಿಂದ 12 ಆನೆಗಳು ನಡೆಸುತ್ತಾ ಬಂದಿರುತ್ತದೆ. ಅದಲ್ಲದೆ, ಈ ಭಾಗದಲ್ಲಿ ನಿರಂತರವಾಗಿ ರೈತರ ಕಣ್ಣಿಗೆ ಇದರಿಂದ ರೈತರು ತಮ್ಮ ಜಮಾನಗಳಲ್ಲಿ ಬೆಳೆದಿರುವ ತೊಗರಿ ರಾಗಿ ಮುಸುಕಿನ ಜೋಳ, ತೆಂಗಿನ ಮರಗಳನ್ನು ಆನೆ ಮಾಡಿರುತ್ತದೆ.ಅರಣ್ಯ ಇಲಾಖೆಯವರು ರಾತ್ರಿ ವೇಳೆ ಗಸ್ತು ನೇಮಿಸಿದ್ದು, ಒಂದು ಗಸ್ತಿನಲ್ಲಿ ಐದು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು ದೇವಸ್ಥಾನಗಳನ್ನು ಗುರುತಿಸಲಾಗಿತ್ತು. 5 ಸ್ಥಳಗಳನ್ನು ಗುರುತಿಸಲಾಗಿದ್ದು, ಒಂದು ಕಡೆಗೆ ಗಸ್ತಿನಲ್ಲಿರುವವರು ತಿಳಿಸಿದಾಗ ಮತ್ತೊಂದು ಕಡೆಗಳಿಂದ ದಾಳಿ ಮಾಡುತ್ತಿರುತ್ತದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೇಟಿಕುಪ್ಪೆ ಅರಣ್ಯ ಅಧಿಕಾರಿಗಳು ಹಾಗೂ ಮೇಲಿನ ಹೊಸಹಳ್ಳಿ ಅರಣ್ಯ ಇಲಾಖೆಯವರು ಕಂಬಿಗಳನ್ನು ಬೂದನೂರು ಸಮೀಪ ಇರುವ ಹೆಬ್ಬಾಳ ಬಳಿ ಕಾಮಗಾರಿ ನಿಲ್ಲಿಸಿರುವುದರಿಂದ ಹೆಬ್ಬಯ್ಯ ಜಲಾಶಯದ ಮುಖಾಂತರ ಬೂದನೂರು ಗ್ರಾಮಕ್ಕೆ ನಿರಂತರವಾಗಿ ಕಾಡು ಪ್ರಾಣಿಗಳು ದಾಳಿ ನಡೆಸುತ್ತಾ ಬಂದಿದೆ.ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದೆ ಇದ್ದರು ಯಾವುದೇ ಪ್ರಯೋಜನ ಕಂಡು ಬಂದಿರುವುದಿಲ್ಲ, ಕೂಡಲೇ ಅರಣ್ಯ ಇಲಾಖೆಯವರು ರೈತರು ಬೆಳೆದ ಬೆಳೆಗಳು, ಜಾನುವಾರು ಹಾಗೂ ರೈತರ ಪ್ರಾಣ ರಕ್ಷಿಸಲು ಹಾಗೂ ನಂಜನ ಕಾಲೋನಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.