ಹೆಸರು ಖರೀದಿ ಕೇಂದ್ರ ಪ್ರಾರಂಭಿಸಲು ರೈತರಿಂದ ಸರ್ಕಾರಕ್ಕೆ ಮನವಿ

| Published : Sep 27 2025, 12:02 AM IST

ಹೆಸರು ಖರೀದಿ ಕೇಂದ್ರ ಪ್ರಾರಂಭಿಸಲು ರೈತರಿಂದ ಸರ್ಕಾರಕ್ಕೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಅಲ್ಪಸ್ವಲ್ಪ ಉಳಿದ ಬೆಳೆಯನ್ನು ರೈತರು ಸುರಿಯುವ ಮಳೆಯಲ್ಲಿ ಕಷ್ಟಪಟ್ಟು ಬೆಳೆ ಕಟಾವು ಮಾಡಿದ್ದರು. ಸದ್ಯ ಬೆಳೆಯನ್ನು ಮಾರುಕಟ್ಟೆಯಲ್ಲಿ ರೈತ ಮಾರಾಟ ಮಾಡಲು ಹೋದರೂ ಪ್ರತಿ 1 ಕ್ವಿಂಟಲ್‌ಗೆ ₹2ರಿಂದ ₹3ಸಾವಿರಕ್ಕೆ ವ್ಯಾಪಾರಸ್ಥರು ಕೇಳುತ್ತಿರುವುದರಿಂದ ತಾಲೂಕಿನ ರೈತರಿಗೆ ದಿಕ್ಕು ತೋಚದಂತಾಗಿದೆ.

ನರಗುಂದ: ಮುಂಗಾರು ಹಂಗಾಮಿನಲ್ಲಿ ಅಲ್ಪಸ್ವಲ್ಪ ಬೆಳೆದ ಹೆಸರನ್ನು ರೈತರು ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕೆಂದರೆ ಯೋಗ್ಯ ಬೆಲೆ ಇಲ್ಲ. ಆದ್ದರಿಂದ ಸರ್ಕಾರ ಬೇಗ ಹೆಸರು ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ರೈತಸೇನಾ ಸಂಘಟನೆಯ ಪದಾಧಿಕಾರಿಗಳು ಸರ್ಕಾರಕ್ಕೆ ಆಗ್ರಹಿಸಿದರು.ಗುರುವಾರ ಪಟ್ಟಣದ ಮಹದಾಯಿ ಹೋರಾಟ ವೇದಿಕೆಯಲ್ಲಿ ಬೆಂಬಲ ಬೆಲೆ ಕೇಂದ್ರ ಪ್ರಾರಂಭಿಸಬೇಕೆಂದು ತಹಸೀಲ್ದಾರರ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ ಆನಂತರ ವಿವಿಧ ರೈತರು ಮಾತನಾಡಿ, 2025- 26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲೂಕಿನ ರೈತರು ವಾಣಿಜ್ಯ ಬೆಳೆಯಾದ ಹೆಸರು ಬಿತ್ತನೆ ಮಾಡಿ, ಪ್ರತಿ 1 ಎಕರಗೆ ₹20 ಸಾವಿರ ಹಣ ಖರ್ಚು ಮಾಡಿ ಉತ್ತಮ ಬೆಳೆ ಬೆಳೆದಿದ್ದರು. ಆದರೆ ಬೆಳೆ ಕಟಾವಿಗೆ ಬಂದ ಸಂದರ್ಭದಲ್ಲಿ ಅತಿವೃಷ್ಟಿಯಿಂದ ತೇವಾಂಶ ಹೆಚ್ಚಾಗಿ ಸಂಪೂರ್ಣ ಬೆಳೆಗಳು ನಾಶವಾದವು.

ಅಲ್ಪಸ್ವಲ್ಪ ಉಳಿದ ಬೆಳೆಯನ್ನು ರೈತರು ಸುರಿಯುವ ಮಳೆಯಲ್ಲಿ ಕಷ್ಟಪಟ್ಟು ಬೆಳೆ ಕಟಾವು ಮಾಡಿದ್ದರು. ಸದ್ಯ ಬೆಳೆಯನ್ನು ಮಾರುಕಟ್ಟೆಯಲ್ಲಿ ರೈತ ಮಾರಾಟ ಮಾಡಲು ಹೋದರೂ ಪ್ರತಿ 1 ಕ್ವಿಂಟಲ್‌ಗೆ ₹2ರಿಂದ ₹3ಸಾವಿರಕ್ಕೆ ವ್ಯಾಪಾರಸ್ಥರು ಕೇಳುತ್ತಿರುವುದರಿಂದ ತಾಲೂಕಿನ ರೈತರಗೆ ದಿಕ್ಕು ತೋಚದಂತಾಗಿದೆ. ರೈತರ ಸ್ಥಿತಿ ಅರಿತು ಕೇಂದ್ರ ಸರ್ಕಾರ ಹೆಸರು ಸೇರಿ ಐದು ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಆದೇಶ ಮಾಡಿದ್ದು ಸ್ವಾಗತಾರ್ಹ. ರಾಜ್ಯ ಸರ್ಕಾರ ಬೇಗ ತಾಲೂಕಿನಲ್ಲಿ ಹೆಸರು ಬೆಂಬಲ ಬೆಲೆ ಕೇಂದ್ರ ಪ್ರಾರಂಭಿಸಿ ರೈತರು ಬೆಳೆದ ಹೆಸರು ಖರೀದಿಸಲು ಮುಂದಾಗಬೇಕೆಂದು ಮನವಿ ಮಾಡಿದರು.ಕಂದಾಯ ನಿರೀಕ್ಷಕ ಎಸ್.ಎಲ್. ಪಾಟೀಲ ಅವರು ರೈತರ ಮನವಿ ಸ್ವೀಕರಿಸಿದರು. ರೈತಸೇನಾ ಸಂಘಟನೆಯ ಪದಾಧಿಕಾರಿಗಳಾದ ವೀರಬಸಪ್ಟ ಹೂಗಾರ, ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ಸಿ.ಎಸಿ. ಪಾಟೀಲ, ಸುಭಾಸ ಗಿರಿಯಣ್ಣವರ, ಹನುಮಂತ ಸರನಾಯ್ಕರ, ಅರ್ಜುನ ಮಾನೆ, ವಿಜಯಕುಮಾರ ಹೂಗಾರ ಮುಂತಾದವರು ಉಪಸ್ಥಿತರಿದ್ದರು.