ರೈತರ ಮೇಲೆ ದಬ್ಬಾಳಿಕೆ ನಡೆಸಿದ ಪಿಎಸ್ಸೈ ಅಮಾನತಿಗೆ ರೈತ ಸಂಘದಿಂದ ಆಗ್ರಹ

| Published : Sep 30 2025, 12:00 AM IST

ರೈತರ ಮೇಲೆ ದಬ್ಬಾಳಿಕೆ ನಡೆಸಿದ ಪಿಎಸ್ಸೈ ಅಮಾನತಿಗೆ ರೈತ ಸಂಘದಿಂದ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರೈತರಿಗಾಗಿ ಸಂಘ ಸದಾ ಹೋರಾಡಲಿದೆ, ನ್ಯಾಯ ಸಿಗುವ ತನಕ ಈ ಹೋರಾಟ ನಿಲ್ಲುವುದಿಲ್ಲ. ರೈತರ ಶ್ರಮದಿಂದ ಈ ದೇಶ ತಲೆ ಎತ್ತಿದೆ, ಆದರೆ ರೈತರ ಮೇಲಿನ ದೌರ್ಜನ್ಯ ನಿಲ್ಲದಿದ್ದರೆ ಇಡೀ ರಾಜ್ಯಾದ್ಯಂತ ಈ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ರೈತರ ಮೇಲೆ ಹಲ್ಲೆ ಮಾಡಿರುವ ಪಿಎಸ್ ಐ ಅವರನ್ನು ಕೂಡಲೇ ಅಮನತುಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.

ಬೆಂಗಳೂರಿನ ದಾಸನಪುರ ಎಪಿಎಂಸಿಯಲ್ಲಿ ರೈತ ಮಹಿಳೆ ಹಾಗೂ ರೈತರ ಮೇಲೆ ದಬ್ಬಾಳಿಕೆ ನಡೆಸಿದ ಪಿಎಸ್ಐ ಮುರಳೀಧರ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು .

ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಸಂಘದ ಕಾರ್ಯದರ್ಶಿ ಸ್ವಾಮಿಗೌಡ, ದೇಶದ ರೈತರನ್ನು ಹೊಡೆದು, ಅವಮಾನಿಸುವ ಧೈರ್ಯ ಯಾರಿಗೂ ಕೊಟ್ಟಿಲ್ಲ. ಇದು ಕೇವಲ ರೈತರ ಅವಮಾನವಲ್ಲ, ಸಂಪೂರ್ಣ ಸಮಾಜಕ್ಕಾದ ಅವಮಾನವಾಗಿದೆ. ಸರ್ಕಾರವು ಇಂತಹ ಅಧಿಕಾರಿಗಳನ್ನು ಉಳಿಸಿಕೊಳ್ಳಬಾರದು. ತಕ್ಷಣವೇ ಪಿಎಸ್ಐ ಮುರಳೀಧರ್ ಅವರನ್ನು ಅಮಾನತು ಮಾಡಿ, ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ರೈತರಿಗಾಗಿ ಸಂಘ ಸದಾ ಹೋರಾಡಲಿದೆ, ನ್ಯಾಯ ಸಿಗುವ ತನಕ ಈ ಹೋರಾಟ ನಿಲ್ಲುವುದಿಲ್ಲ. ರೈತರ ಶ್ರಮದಿಂದ ಈ ದೇಶ ತಲೆ ಎತ್ತಿದೆ, ಆದರೆ ರೈತರ ಮೇಲಿನ ದೌರ್ಜನ್ಯ ನಿಲ್ಲದಿದ್ದರೆ ಇಡೀ ರಾಜ್ಯಾದ್ಯಂತ ಈ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಂದು ಎಚ್ಚರಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್ ಮಾತನಾಡಿ, ರೈತರು ಬೆಳೆದ ವಸ್ತುಗಳನ್ನು ಎಪಿಎಂಸಿಯಲ್ಲಿ ಮಾರಾಟ ಮಾಡುವ ಸಂದರ್ಭದಲ್ಲಿ ಶೇ.೧೦ರಷ್ಟು ಕಮಿಷನ್ ಕೇಳುವವರಿಗೆ ಅಲ್ಲಿಯ ಅಧಿಕಾರಿಗಳು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು, ಅದನ್ನು ಪ್ರಶ್ನಿಸಿದ ಕೆ ಆರ್ ಎಸ್ ಪಕ್ಷದ ರೈತ ಮುಖಂಡರ ಮೇಲೆ ಪೊಲೀಸರನ್ನು ಕರೆಸಿ ದೌರ್ಜನ್ಯ ನಡೆಸಿದ್ದಾರೆ. ಅವರ ಮೇಲೆ ವಿನಃಕಾರಣ ಸುಳ್ಳು ಪ್ರಕರಣ ದಾಖಲಿಸಿದ್ದಲ್ಲದೆ ರೈತ ಮಹಿಳೆಯರೆನ್ನದೆ ಎಲ್ಲರ ಮೇಲೆ‌ ಮನಸೋ ಇಚ್ಛೆ ತಳಿಸಿರುವ ಪೊಲೀಸ್ ಅಧಿಕಾರಿ ಮುರಳೀಧರ್ ಅವರನ್ನು ಅಮಾನತುಗೊಳಿಸಿ ರೈತರಿಗೆ ರಕ್ಷಣೆ ನೀಡಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯ ಎಂದರು.

ರೈತ ಪ್ರಧಾನ ಕಾರ್ಯದರ್ಶಿ ಬಸವರಾಜು ,ಬಿರಟೇಮನೆ ಸುರೇಶ್, ಧರ್ಮೇಗೌಡ, ಮಂಜಪ್ಪ, ಪ್ರಕಾಶ್, ರಾಜೇಶ್, ಸಚಿನ್, ಶ್ರೀನಿವಾಸ್, ರಮೇಶ್ ಇತರರು ಹಾಜರಿದ್ದರು.