ಕೃಷಿ ಸಂಘದ ಚುನಾವಣೆ: ಎನ್‌ಡಿಎ ಮೈತ್ರಿ ಬೆಂಬಲಿತರಿಗೆ ಹೆಚ್ಚಿನ ಸ್ಥಾನ

| Published : Aug 07 2025, 12:45 AM IST

ಕೃಷಿ ಸಂಘದ ಚುನಾವಣೆ: ಎನ್‌ಡಿಎ ಮೈತ್ರಿ ಬೆಂಬಲಿತರಿಗೆ ಹೆಚ್ಚಿನ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರ ತಾಲೂಕಿನಲ್ಲಿ ಜಕ್ಕನಹಳ್ಳಿ- ನ್ಯಾಮನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 12 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 9 ಸ್ಥಾನ ಎನ್‌ಡಿಎ ಮೈತ್ರಿ ಬೆಂಬಲಿತರು ಹಾಗೂ 2 ರೈತಸಂಘ- ಕಾಂಗ್ರೆಸ್ ಬೆಂಬಲಿತರು ಮತ್ತು ಓರ್ವ ರೈತಸಂಘ ಬಂಡಾಯ ಅಭ್ಯರ್ಥಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನಲ್ಲಿ ಜಕ್ಕನಹಳ್ಳಿ- ನ್ಯಾಮನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 12 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಜೆಡಿಎಸ್- ಬಿಜೆಪಿ ಬೆಂಬಲಿತರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು.

ಸಂಘದ 12 ಸ್ಥಾನಗಳಲ್ಲಿ 9 ಸ್ಥಾನ ಎನ್‌ಡಿಎ ಮೈತ್ರಿ ಬೆಂಬಲಿತರು ಹಾಗೂ 2 ರೈತಸಂಘ- ಕಾಂಗ್ರೆಸ್ ಬೆಂಬಲಿತರು ಮತ್ತು ಓರ್ವ ರೈತಸಂಘ ಬಂಡಾಯ ಅಭ್ಯರ್ಥಿ ಆಯ್ಕೆಯಾದರು.

ಜೆಡಿಎಸ್- ಬಿಜೆಪಿ ಬೆಂಬಲಿತ ನಿರ್ದೇಶಕರಾಗಿ ಎ.ಎನ್.ಮಂಜುನಾಥ್ ಅರಕನಕೆರೆ(ಸಾಲಗಾರರಲ್ಲದ ಕ್ಷೇತ್ರ), ಎಸ್‌ಎನ್‌ಟಿ ಸೋಮಶೇಖರ್, ಕೆಂಪೇಗೌಡ, ಶೀಲಾವತಿ, ನಾಗೇಶ್, ಸೋಮಶೇಖರ್, ಪಿ.ಎಸ್.ಅರುಣಕುಮಾರ್, ಪಿ.ಪ್ರಕಾಶ್, ಜೆ.ಅಂಬಿಕಾ, ಆಯ್ಕೆಯಾದದರು. ರೈತಸಂಘ-ಕಾಂಗ್ರೆಸ್ ಬೆಂಬಲಿತ ಚನ್ನೇಗೌಡ, ಕೋಕಿಲಾಜ್ಞಾನೇಶ್ ಆಯ್ಕೆಯಾದರು. ರೈತಸಂಘದ ಬಂಡಾಯ ಅಭ್ಯರ್ಥಿಯಾಗಿ ಶಿವರಾಮೇಗೌಡ ಗೆಲುವು ಸಾಧಿಸಿದರು.

ಚುನಾವಣೆಯ ಸಾಲಗಾರ ಕ್ಷೇತ್ರ ಜಿದ್ದಾಜಿದ್ದಿನಿಂದ ನಡೆದು ಜೆಡಿಎಸ್ ಬೆಂಬಲಿತ ಎ.ಎನ್.ಮಂಜುನಾಥ್ ಅರಕನಕೆರೆ ಅವರು ಭರ್ಜರಿ ಗೆಲುವು ಸಾಧಿಸಿದರು. ಚುನಾವಣೆಯಲ್ಲಿ ಆಯ್ಕೆಯಾದ ಬೆಂಬಲಿತ ಅಭ್ಯರ್ಥಿಗಳನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಅಭಿನಂದಿಸಿದರು.

ನಂತರ ಸಿ.ಎಸ್.ಪುಟ್ಟರಾಜು ಮಾತನಾಡಿ, ತಾಲೂಕಿನ ನ್ಯಾಮನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಅಧಿಕಾರದ ಚುಕ್ಕಾಣಿ ಮೈತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ. ಆ ಮೂಲಕ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಿದ್ದಾರೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಬಹುತೇಕ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಆಯ್ಕೆಯಾಗುವ ಮೂಲಕ ಪಕ್ಷದ ಕೈಬಲಪಡಿಸಿದ್ದಾರೆ. ಈ ಚುನಾವಣೆಗಳ ಫಲಿತಾಂಶ ಮುಂದಿನ ಜಿಪಂ, ತಾಪಂ ಚುನಾವಣೆಗಳ ಫಲಿತಾಂಶದ ದಿಕ್ಸೂಚಿಯಾಗಲಿದೆ ಎಂದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ಮುಖಂಡ ಶಂಭೂನಹಳ್ಳಿ ಆನಂದ್, ಸೊಸೈಟಿ ಮಾಜಿ ಅಧ್ಯಕ್ಷ ಜೆ.ಪಿ.ಶಿವಶಂಕರ್, ಗ್ರಾಪಂ ಸದಸ್ಯ ದಿವಾಕರ, ಮುಂಖಡರಾದ ನಾಗೇಗೌಡ, ಬೆಟ್ಟಸ್ವಾಮಿಗೌಡ, ದಿನೇಶ್, ಶ್ರೀನಿವಾಸ್, ರವಿ, ಅರಸೇಗೌಡ, ದೇವೆಂದ್ರ, ಕುಮಾರ್, ಧರ್ಮರಾಜು, ಸುರೇಂದ್ರ, ತಮ್ಮಣ್ಣ, ಲಕ್ಷ್ಮೀಸಾಗರ ಸೊಸೈಟಿ ಮಾಜಿ ಅಧ್ಯಕ್ಷ ಅಶೋಕ್, ಸೇರಿದಂತೆ ಹಲವರು ಹಾಜರಿದ್ದರು.