ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ವೈಜ್ಞಾನಿಕವಾಗಿ ಹಸು ಸಾಕಾಣಿಕೆ ಹಾಗೂ ಗುಣಮಟ್ಟದ ಹಾಲು ಪೂರೈಕೆ ಸಂಬಂಧವಾಗಿ ಮುಂದಿನ ದಿನಗಳಲ್ಲಿ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.ತಾಲೂಕಿನ ಮಲ್ಲಿಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ರೈತರು ರಾಸುಗಳಿಗೆ ಗುಣಮಟ್ಟದ ಆಹಾರ ನೀಡುವ ಜತೆಗೆ ರಾಸುಗಳನ್ನು ಉತ್ತಮವಾಗಿ ನಿರ್ವಹಿಸಬೇಕು, ಗ್ರಾಮೀಣ ಪ್ರದೇಶದ ಸಾಕಷ್ಟು ಕುಟುಂಬಗಳು ಹೈನುಗಾರಿಕೆ ನೆಚ್ಚಿಕೊಂಡು ಬದುಕು ನಡೆಸುತ್ತಿದ್ದಾರೆ. ಹಾಗಾಗಿ ರಾಸುಗಳನ್ನು ವೈಜ್ಞಾನಿಕವಾಗಿ ಸಾಕಾಣಿಕೆ ಮಾಡುವ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.
ರಾಸುಗಳಿಗೆ ವಿಮೆ ಮಾಡಿಸಲು ರೈತರು ನಿರ್ಲಕ್ಷ್ಯ ಮಾಡಬಾರದು, ಸಾಲ ಮಾಡಿ ಹಸು ಖರೀದಿಸಿ ಅವು ಆಕಸ್ಮಿಕವಾಗಿ ಅಕಾಲಿಕ ಮರಣಕ್ಕೆ ಒಳಗಾದರೆ ರೈತರಿಗೆ ಪರಿಹಾರ ದೊರೆಯುವುದಿಲ್ಲ. ರಾಸುಗಳ ವಿಮೆಗೆ ಒಕ್ಕೂಟ ಶೇ.50ರಷ್ಟು ಹಣ ನೀಡುತ್ತಿದೆ. ಉಳಿದ ಹಣವನ್ನು ರೈತರು ಪಾವತಿಸಬೇಕು ಎಂದರು.ವಿಮೆ ಹಣವನ್ನು ಸಹ ಕಟ್ಟಲು ಸಾಧ್ಯವಿಲ್ಲ ಎನ್ನುವಂತಹ ಬಡ ರೈತರಿಗೆ ನಮ್ಮ ಎಸ್‌ಟಿಜಿ ಟ್ರಸ್ಟ್ ವತಿಯಿಂದಲೇ ಹಣ ಭರಿಸುವುದಾಗಿ ನಮ್ಮ ಚಿಕ್ಕಪ್ಪನವರಾದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಘೋಷಣೆ ಮಾಡಿದ್ದಾರೆ. ಅದರಂತೆ ಬಡ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವನೆ ನೀಡಿದರು.
ಉಪವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ನಾವು ಸಾಕಾಣಿಕೆ ಮಾಡುತ್ತಿರುವ ರಾಸುಗಳು ಹೊರ ದೇಶಗಳ ತಳಿಗಳು. ಆದ್ದರಿಂದ ರೈತರು ರಾಸುಗಳನ್ನು ಸಾಧ್ಯವಾದಷ್ಟು ನೆರಳು ಹಾಗೂ ಶೀಥಾಂಶದಲ್ಲಿ ಸಾಕಾಣಿಕೆ ಮಾಡಬೇಕು ಎಂದು ತಿಳಿಸಿದರು.ಈ ವೇಳೆ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಂ.ಸಿ.ಯಶವಂತ್‌ಕುಮಾರ್, ಡೈರಿ ಅಧ್ಯಕ್ಷ ಎಂ.ಬಿ.ರಾಜೇಗೌಡ, ಉಪಾಧ್ಯಕ್ಷೆ ಎಂ.ಆರ್.ಅನಿತಾ, ನಿರ್ದೇಶಕರಾದ ಪುಟ್ಟರಾಮೇಗೌಡ, ಎಸ್.ಎನ್.ರಘು, ಎಂ.ಎಸ್.ದೇವರಾಜು, ಮಹೇಂದ್ರಾಚಾರಿ, ಎಂ.ಬಿ.ಅಶೋಕ, ಮಹೇಶ್, ವಿನುತಾ, ಹಲಗೇಗೌಡ, ಗ್ರಾಪಂ ಮಾಜಿ ಅಧ್ಯಕ್ಷರಾದ ಎಂ.ಎಸ್.ರವಿಕರ, ಎಂ.ಡಿ.ಚಂದ್ರೇಗೌಡ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ಎಸ್.ಜಗದೀಶ್, ಸುರೇಶ್, ಧನ್ಯಕುಮಾರ್, ರಾಜೇಶ್, ಎಂ.ಎಸ್.ನಾಗರಾಜು, ಎಂ.ಆರ್.ಸೋಮಶೇಖರ್, ಪ್ರದೀಪ್, ಎಂ.ಎಸ್.ಕುಮಾರ್, ಮಂಜುನಾಥ್, ಎಂ.ಎನ್.ಚಂದ್ರೇಗೌಡ, ಪ್ರಸನ್ನ, ರಾಮು ರವಿ ಹಾಗೂ ಡೈರಿ ಸಿಬ್ಬಂದಿ ಹಾಜರಿದ್ದರು.