ದಾಬಸ್‍ಪೇಟೆ: ರೈತರಿಂದ ನೇರವಾಗಿ ಖರೀದಿಸಿದ ಹಾಲಿನಿಂದ ತಯಾರಾಗುವ ನಂದಿನಿ ಉತ್ಪನ್ನಗಳನ್ನು ಬಳಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಬಮುಲ್ ನಿರ್ದೇಶಕ ಭವಾನಿ ಶಂಕರ ಬೈರೇಗೌಡ ತಿಳಿಸಿದರು.

ದಾಬಸ್‍ಪೇಟೆ: ರೈತರಿಂದ ನೇರವಾಗಿ ಖರೀದಿಸಿದ ಹಾಲಿನಿಂದ ತಯಾರಾಗುವ ನಂದಿನಿ ಉತ್ಪನ್ನಗಳನ್ನು ಬಳಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಬಮುಲ್ ನಿರ್ದೇಶಕ ಭವಾನಿ ಶಂಕರ ಬೈರೇಗೌಡ ತಿಳಿಸಿದರು.

ಯಂಟಗನಹಳ್ಳಿ ದೇವಿಹಳ್ಳಿ ಟೋಲ್ ಸಮೀಪ ನಂದಿನಿ ಉತ್ಪನ್ನ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಬಮುಲ್‍ಗೆ ಲಾಭವಾದರೆ ರೈತರಿಗೆ ಲಾಭವಾಗುತ್ತದೆ. ಆದ್ದರಿಂದ ನಾವೆಲ್ಲಾ ನಂದಿನಿ ಉತ್ಪನ್ನಗಳನ್ನೇ ಬಳಸಬೇಕು. ಗುಣಮಟ್ಟದ ಉತ್ಪನ್ನಗಳನ್ನು ಮಾತ್ರ ತಯಾರು ಮಾಡಿ ಗ್ರಾಹಕರಿಗೆ ನೀಡುತ್ತದೆ. ಬಮೂಲ್ ಈಗ ತಿರುಪತಿಗೆ ಲಾಡು ತಯಾರಿಸಲು ನಂದಿನಿ ತುಪ್ಪವನ್ನ ಪೂರೈಸುತ್ತಿದೆ. ನಂದಿನಿ ಗುಣಮಟ್ಟಕ್ಕೆ ಇದುವೇ ಸಾಕ್ಷಿ. ನೆಲಮಂಗಲ ತಾಲೂಕಿನಲ್ಲಿ ಅಗತ್ಯವಿರುವೆಡೆ ನಂದಿನ ಉತ್ಪನ್ನ ಮಾರಾಟ ಮಳಿಗೆ ತೆರೆಯಲು ಆಸಕ್ತರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಹಿರಿಯ ವಕೀಲ ಅನ್ನದಾನಯ್ಯ ಮಾಯನಾಡಿ, ನಂದಿನಿ ಉತ್ಪನ್ನಗಳನ್ನು ಪ್ರತಿಯೊಬ್ಬರೂ ಬಳಸಬೇಕು. ಗುಣಮಟ್ಟದ ಜತೆಗೆ ರೈತರ ಸಂಸ್ಥೆ ಲಾಭದಾಯಕವಾಗಿ ಮುನ್ನಡೆಯಲು ನಾವೆಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯಂಟಗಾನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಾಹುಲ್‍ಗೌಡ, ಎಂಬಿಎಸ್ ಸಂಸ್ಥೆ ಮಾಲೀಕ ಭವಾನಿಶಂಕರ್ ಮಂಜುನಾಥ್, ಹಂಡೀಪುರ ಡೇರಿ ಮಾಜಿ ಅಧ್ಯಕ್ಷ ವಿಜಯ್‌ಕುಮಾರ್‌, ಭಟ್ಟರಹಳ್ಳಿ ಡೇರಿ ಅಧ್ಯಕ್ಷ ಮಂಜುನಾಥ್, ಮಳಿಗೆ ಮಾಲೀಕ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.