ಇಂಡಿ ಶಾಖಾ ಕಾಲುವೆ ನೀರು ಹರಿಸುವಂತೆ ರೈತರ ಆಗ್ರಹ

| Published : Apr 07 2024, 01:45 AM IST

ಸಾರಾಂಶ

ವಿಜಯಪುರ: ಜಿಲ್ಲೆಯ ಚಡಚಣ ತಾಲೂಕು ಕೊನೆ ಭಾಗದವರೆಗೆ ನೀರು ಹರಿಸಬೇಕು ಎಂದು ಚಡಚಣ ತಾಲೂಕು ರೈತರು ಝಳಕಿಯಲ್ಲಿರುವ ಕೆಬಿಜೆಎನ್‌ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಇಂಡಿ ಶಾಖಾ ಕಾಲುವೆ ನಾರಾಯಣಪುರ ಎಡದಂಡೆ ಕಾಲುವೆಯ ಕೊನೆಗೆ 130 ಕಿಮೀದಿಂದ 172 ವರೆಗೆ ಹಳ್ಳಿಗಳಾದ ಹಲಸಂಗಿ, ಏಳಗಿ ರೇವತಗಾಂವ, ಹಾವಿನಾಳ, ಹತ್ತಳ್ಳಿ, ನಿವರಗಿ, ದಸೂರ, ಉಮರಾಜ ಸೇರಿದಂತೆ ಚಡಚಣ ತಾಲೂಕಿಗೆ ನೀರು ಹರಿಸಿ ಎಂದು ರೈತರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರಜಿಲ್ಲೆಯ ಚಡಚಣ ತಾಲೂಕು ಕೊನೆ ಭಾಗದವರೆಗೆ ನೀರು ಹರಿಸಬೇಕು ಎಂದು ಚಡಚಣ ತಾಲೂಕು ರೈತರು ಝಳಕಿಯಲ್ಲಿರುವ ಕೆಬಿಜೆಎನ್‌ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇಂಡಿ ಶಾಖಾ ಕಾಲುವೆ ನಾರಾಯಣಪುರ ಎಡದಂಡೆ ಕಾಲುವೆಯ ಕೊನೆಗೆ 130 ಕಿಮೀದಿಂದ 172 ವರೆಗೆ ಹಳ್ಳಿಗಳಾದ ಹಲಸಂಗಿ, ಏಳಗಿ ರೇವತಗಾಂವ, ಹಾವಿನಾಳ, ಹತ್ತಳ್ಳಿ, ನಿವರಗಿ, ದಸೂರ, ಉಮರಾಜ ಸೇರಿದಂತೆ ಚಡಚಣ ತಾಲೂಕಿಗೆ ನೀರು ಹರಿಸಿ ಎಂದು ರೈತರು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಇಂಡಿ ತಹಸೀಲ್ದಾರ್‌ ಮಂಜುಳಾ ನಾಯಕ ಮಾತನಾಡಿ, ಕಾಲುವೆ ಕೊನೆ ಭಾಗದವರೆಗೆ ನೀರು ಹರಿಸಲು ಮೇಧಿಕಾರಿಗಳ ಗಮನಕ್ಕೆ ತಂದು ನೀರು ತರುವ ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡ ಗುರುನಾಥ ಬಗಲಿ ಮಾತನಾಡಿ, ನೀರು ಕೊನೆಯವರೆಗೆ ಬರುವವರೆಗೆ ನಾವು ಹೋರಾಟ ಮಾಡುತ್ತೇವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ದನಕರುಗಳಿಗೆ ಕುಡಿಯುವ ನೀರು ಕೊಡಿ, ನಮಗೆ ನೀರು ಕೊಡಿ ಇಲ್ಲವೇ ವಿಷ ಕೊಡಿ ಎಂದು ಹೇಳಿದರು.

ರೈತ ಹೋರಾಟಗಾರ ಸೋಮಶೇಖರ ಮಾಳಾಬಾಗಿ, ಶಿವಶರಣ ಜತ್ತಿ, ಕಾಶಿನಾಥ ಕಾಮಗೊಂಡ, ಚಂದ್ರಶೇಖರ ಅಷ್ಠಗಿ, ಮಲ್ಲಿಕಾರ್ಜುನ ವಗ್ಗಿ, ಸತೀಶ ತೋಳನೂರ, ರವಿ ಕಟ್ಟಿಮನಿ, ಶಿವಾನಂದ ಬಿರಾದಾರ, ಇತರರು ಇದ್ದರು.