ಪಹಣಿಯಲ್ಲಿ ಕೂಡಲೇ ವಕ್ಫ್‌ ಹೆಸರು ತೆಗೆಯಲು ರೈತರ ಆಗ್ರಹ

| Published : Nov 11 2024, 11:49 PM IST

ಪಹಣಿಯಲ್ಲಿ ಕೂಡಲೇ ವಕ್ಫ್‌ ಹೆಸರು ತೆಗೆಯಲು ರೈತರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗಸುಗೂರಲ್ಲಿ ರೈತರು ಪಹಣೀಯಲ್ಲಿ ವಕ್ಫ ಹೆಸರು ಸೇರ್ಪಡೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ರೈತರ ಭೂಮಿಯ ಪಹಣಿಯ ಕಾಲಂ ನಂಬರ್ 11ರಲ್ಲಿ ಕರ್ನಾಟಕ ವಕ್ಫ ಬೋರ್ಡ ಹೆಸರು ನಮೂದಿಸಿದ್ದು ಕೂಡಲೇ ವಕ್ಫ್‌ ಹೆಸರು ತೆಗೆದು ಹಾಕಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ಆದರೆ ಕರ್ನಾಟಕದಲ್ಲಿ 2017-18 ಮತ್ತು 2023-24ರಲ್ಲಿ ಪದೇ ಪದೇ ಸರ್ಕಾರವು ಸಾರ್ವಜನಿಕರಿಗೆ ಯಾವುದೇ ಮಾಹಿತಿ ಕೊಡದೇ ಪಹಣಿಯಲ ಕಲಂ ನಂಬರ್ 09 ಹಾಗೂ 11ರಲ್ಲಿ ರೈತರ ಹೆಸರು ತೆಗೆದು ಹಾಕಿ ವಕ್ಫ ಬೋರ್ಡ್ ಎಂದು ಹೊಸ ವರ್ಗಾವಣೆ ನೀಡಿ ತಿದ್ದುಪಡಿ ಮಾಡಿ ಸರ್ಕಾರವೇ ರೈತರ ಮೇಲೆ ದೌರ್ಜನ್ಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸರ್ಕಾರ ಪಹಣಿಯಲ್ಲಿ ವಕ್ಫ್‌ ಹೆಸರು ತೆಗೆದು ಹಾಕಿ ರೈತರಿಗೆ ಭೂಮಿ ಒದಗಿಸಬೇಕು ಇಲ್ಲದೇ ಹೋದರೆ ಕರ್ನಾಟಕ ರೈತ ಸಂಘದಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆಯ ಮನವಿಯನ್ನು ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿಯವರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ತಾಲೂಕ ಅಧ್ಯಕ್ಷ ದುರ್ಗಾ ಪ್ರಸಾದ, ಬಸವರಾಜ ಗೋಡಿಹಾಳ, ಬಸವರಾಜ ಕುಂಬಾಋ, ಸೋಮು ನಾಯಕ, ಹನುಮಂತ, ಮಹ್ಮದ್ ಸಾಬ, ರಂಗಪ್ಪ, ರಾಜು ನಾಯಕ, ವೀರನಗೌಡ, ನಾಗಪ್ಪ ಪುಣೇದ ಸೇರಿದಂತೆ ಇದ್ದರು. ವಕ್ಫ್ ಸಂತ್ರಸ್ತರಿಂದ ವಾಟ್ಸಪ್ ಗ್ರೂಪ್ ರಚನೆ;

ನ್ಯಾಯಾಲಯ ಹೋರಾಟಕ್ಕೆ ಸಂತ್ರಸ್ತರ ನಿರ್ಧಾರಸಿಂಧನೂರು: ತಾಲೂಕಿನಲ್ಲಿ ಅನೇಕ ರೈತರು ತಮ್ಮ ಜಮೀನುಗಳ 2024-25ರ ಪಹಣಿ ಪತ್ರಿಕೆಗಳಲ್ಲಿ ವಕ್ಫ್ ಎಂದು ನಮೂದಾದ ಹಿನ್ನೆಲೆಯಲ್ಲಿ ಸಂತ್ರಸ್ತ ರೆಲ್ಲ ಸೇರಿ ವಾಟ್ಸಪ್ ಗ್ರೂಪ್ ಮಾಡಿ ಹೋರಾಟ ನಡೆಸಲು ಮುಂದಾಗಿದ್ದಾರೆ.

ಎಂಜಿನಿಯರ್ ಸರ್ವೋತ್ತಮರೆಡ್ಡಿ ಈ ಗ್ರೂಪಿನ ಅಡ್ಮಿನ್ ಆಗಿದ್ದು ವಕ್ಫ್ ಎಂದು ಪಹಣಿ ಪತ್ರಿಕೆಗಳಲ್ಲಿ ನಮೂದಾಗಿರುವ ಎಲ್ಲ ರೈತರನ್ನು ಸೇರಿಸಿ ಗ್ರೂಪ್ ಮಾಡಿದ್ದಾರೆ ಪಹಣಿ ಪತ್ರಿಕೆ ಕಲಂ ನಂಬರ್ 12ರಲ್ಲಿ ಋಣಗಳು ಎಂಬ ಕಾಲಂನ ಕೆಳಗೆ ''''''''ವಕ್ಫ್'''''''' ಎಂದು ನಮೂದಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಸಾವಿರಾರು ರೈತರಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡುತ್ತಿಲ್ಲ.ಬದಲಾಗಿ ವಕ್ಫ್ ಅನ್ನು ತಹಸೀಲ್ದಾರ್ ಕಚೇರಿಯಲ್ಲಿ ತೆಗೆಸಿಕೊಂಡು ಬನ್ನಿ, ನಂತರ ಸಾಲ ನೀಡುವುದಾಗಿ ಹೇಳುತ್ತಿದ್ದಾರೆ. ಈ ಕುರಿತು ಬ್ಯಾಂಕುಗಳ ಕಾನೂನು ಸಲಹೆಗಾರರು ಬ್ಯಾಂಕಿನ ವ್ಯವಸ್ಥಾಪಕರಿಗೆ ಇದೇ ಸಲಹೆಯನ್ನು ನೀಡಿರುವುದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ.

ಈ ಹಿನ್ನೆಲೆಯಲ್ಲಿ ಇಂಜಿನಿಯರ್ ಸರ್ವೋತ್ತಮರೆಡ್ಡಿ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಹೋರಾಟ ರೂಪಿಸಲು ನಿರ್ಧರಿಸಿದ್ದಾರೆ. ರಾಜ್ಯದಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿರುವ ವಕ್ಫ್ ಆಸ್ತಿಯ ಪ್ರಕರಣ ಸಿಂಧನೂರು ತಾಲೂಕಿನ ರೈತರಿಗೆ ಬಿಸಿ ತಟ್ಟಿರುವುದು ಸುಳ್ಳೇನಲ್ಲ.