ಹೈಕಮಾಂಡ್ ಬೇಕು ಅನ್ನೋತನಕ ಸಿದ್ದು ಸಿಎಂ: ಸಚಿವ ಸುಧಾಕರ್‌

| Published : Nov 11 2024, 11:49 PM IST

ಸಾರಾಂಶ

CM: Minister Sudhakar needs a high command

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಸಿಎಂ ಹಾಗೂ ಡಿಸಿಎಂ ಅಧಿಕಾರವನ್ನು ಯಾರು ಮಾಡಬೇಕೆಂಬುದ ಹೈಕಮಾಂಡ್ ನೋಡಿಕೊಳ್ಳುತ್ತದೆ. ಹೈಕಮಾಂಡ್ ಬೇಕು ಅನ್ನುವ ತನಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಸೆಂಬರ್ ವೇಳೆಗೆ ಸಿದ್ಧರಾಮಯ್ಯ ಅಧಿಕಾರ ಅಂತ್ಯ ಎಂಬ ವಿ ಸೋಮಣ್ಣ ಹೇಳಿಕೆಗೆ ಅವರು ಸದಾ ಏನಾದರೊಂದು ಹೇಳುತ್ತಲೇ ಇರುತ್ತಾರೆ. ಜನಪರ ಕಾರ್ಯಕ್ರಮದ ಬಗ್ಗೆ ಒಂದೂ ಚರ್ಚೆ ಮಾಡಲ್ಲ. ಕಾಂಗ್ರೆಸ್ ಆಡಳಿತ ಇನ್ನೂ ಮೂರುವರೆ ವರ್ಷ ಇದೆ ಎಂದರು.

ಮಹಾರಾಷ್ಟ್ರ ಚುನಾವಣೆಗೆ ಅಬಕಾರಿ ಇಲಾಖೆ ದುಡ್ಡು ಎಂಬ ಪ್ರಧಾನಿ ಮೋದಿ ಅವರ ಆರೋಪಕ್ಕೆ, ಸಿಎಂ ಸಿದ್ಧರಾಮಯ್ಯ ಈಗಾಗಲೇ ಸ್ಪಷ್ಟವಾಗಿ ಉತ್ತರಿಸಿದ್ದಾರೆ. ನಾನು ಅಬಕಾರಿ ಸೆಕ್ಟರ್ ನಲ್ಲಿ ಕೆಲಸ ಮಾಡಿದ್ದೇನೆ.

ಪ್ರಧಾನಿ ಮೋದಿ ಆರೋಪ ಸತ್ಯಕ್ಕೆ ದೂರವಾದ ವಿಚಾರ. ಅಬಕಾರಿ ಇಲಾಖೆಯಲ್ಲಿ ಏನೂ ಇಲ್ಲ.

ಅಗಾಧ ಪ್ರಮಾಣದ ಹಣ ಭ್ರಷ್ಟಾಚಾರ ಮಾಡಲು ಆಗಲ್ಲವೆಂದರು.

----